ತೆಂಕುತಿಟ್ಟು ಯಕ್ಷಗಾನ ರಂಗದ ಖ್ಯಾತ ಕಲಾವಿದ ಪುತ್ತೂರು ಶ್ರೀಧರ ಭಂಡಾರಿ ನಿಧನ

ತೆಂಕುತಿಟ್ಟು ಯಕ್ಷಗಾನ ರಂಗದ ಖ್ಯಾತ ಕಲಾವಿದ, ಆಕರ್ಷಕ ಧೀಂಗಿಣ ಶೈಲಿಯ ಸಿಡಿಲಮರಿ ಎಂದು ಖ್ಯಾತರಾಗಿರುವ ಡಾ ಶ್ರೀಧರ್ ಭಂಡಾರಿ ನಿಧನರಾಗಿದ್ದಾರೆ.

Published: 19th February 2021 08:21 AM  |   Last Updated: 19th February 2021 02:17 PM   |  A+A-


Dr Shridhar Bhandari

ಡಾ ಶ್ರೀಧರ ಭಂಡಾರಿ

Posted By : Sumana Upadhyaya
Source : Online Desk

ಪುತ್ತೂರು: ತೆಂಕುತಿಟ್ಟು ಯಕ್ಷಗಾನ ರಂಗದ ಖ್ಯಾತ ಕಲಾವಿದ, ಆಕರ್ಷಕ ಧೀಂಗಿಣ ಶೈಲಿಯ ಸಿಡಿಲಮರಿ ಎಂದು ಖ್ಯಾತರಾಗಿರುವ ಡಾ ಶ್ರೀಧರ್ ಭಂಡಾರಿ ನಿಧನರಾಗಿದ್ದಾರೆ.

ಅವರಿಗೆ 73 ವರ್ಷ ವಯಸ್ಸಾಗಿತ್ತು. ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲ್ಲೂಕಿನ ಬನ್ನೂರು ನಿವಾಸಿಯಾಗಿದ್ದ ಡಾ ಶ್ರೀಧರ ಭಂಡಾರಿ 2019ರಲ್ಲಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಸೇರಿದಂತೆ ಹಲವು ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿದ್ದರು.

ಧರ್ಮಸ್ಥಳ ಮೇಳದಲ್ಲಿ ಸೇವೆ ಸಲ್ಲಿಸುತ್ತಿದ್ದ ಪುತ್ತೂರು ಶ್ರೀಧರ ಭಂಡಾರಿಯವರ ಅಭಿಮನ್ಯು ಪಾತ್ರ ಅತ್ಯಂತ ಜನಪ್ರಿಯ.ರಂಗಸ್ಥಳದಲ್ಲಿ ಸಿಡಿಲು ಬಡಿದಂತೆ ಮಾತು ಮತ್ತು ನಾಟ್ಯದಿಂದ ಅವರಿಗೆ ಸಿಡಿಲಮರಿ ಎಂಬ ಬಿರಿದು ಬಂದಿತ್ತು.

ನಾಟ್ಯದಲ್ಲಿ ಒಂದು ಬಾರಿಗೆ 200ರಿಂದ 250ರಷ್ಟು ಧೀಂಗಿಣ ಹಾಕುತ್ತಿದ್ದ ಶ್ರೀಧರ ಭಂಡಾರಿಯವರ ಬಭ್ರುವಾಹನ, ಅಶ್ವತ್ಥಾಮ, ಕುಶ, ಭಾರ್ಗವ ಮೊದಲಾದ ಪಾತ್ರಗಳು ಸಹ ಜನಪ್ರಿಯ.

ಇವರು ತೆಂಕುತಿಟ್ಟು ಯಕ್ಷಗಾನ ರಂಗದಲ್ಲಿ ಸಲ್ಲಿಸಿದ ಸೇವೆಗೆ ಅಮೆರಿಕಾದ ವಿಶ್ವವಿದ್ಯಾಲಯ ಗೌರವ ಡಾಕ್ಟರೇಟ್  ನೀಡಿ ಗೌರವಿಸಿತ್ತು. 

ಮೃತರು ಪತ್ನಿ ಉಷಾ ಭಂಡಾರಿ, ಪುತ್ರಿಯರಾದ ಕೋಕಿಲಾ, ಶಾಂತಲಾ, ಅನಿಲ, ಹಾಗೂ ಪುತ್ರ ದೇವಿ ಪ್ರಕಾಶ್ ಮತ್ತು ಮೊಮ್ಮಕ್ಕಳನ್ನು ಅಗಲಿದ್ದಾರೆ.

Stay up to date on all the latest ರಾಜ್ಯ news
Poll
The grand Central Vista project is estimated to cost `20,000 crore

ಕೋವಿಡ್ ಬಿಕ್ಕಟ್ಟಿನ ದೃಷ್ಟಿಯಿಂದ ಪ್ರಧಾನಿ ಮೋದಿ ಸೆಂಟ್ರಲ್ ವಿಸ್ಟಾ ಯೋಜನೆಯನ್ನು ತಡೆಹಿಡಿಯಬೇಕೇ?


Result
ಹೌದು
ಬೇಡ
flipboard facebook twitter whatsapp