ಪ್ರವಾಸೋದ್ಯಮಕ್ಕೆ ಪುನಶ್ಚೇತನ, ಹೊಟೇಲ್ ಉದ್ಯಮಕ್ಕೆ ಕೈಗಾರಿಕೆ ಸ್ಥಾನಮಾನ: ಸಿ.ಪಿ.ಯೋಗೇಶ್ವರ್

ಕೋವಿಡ್ ನಿಂದ ನಲುಗಿ ಹೋಗಿರುವ ಪ್ರವಾಸೋದ್ಯಮಕ್ಕೆ ಪುನಶ್ಚೇತನ ನೀಡಲು ಸರ್ಕಾರ ಹೊಟೇಲ್ ಉದ್ಯಮಕ್ಕೆ ಕೈಗಾರಿಕಾ ಸ್ಥಾನಮಾನ ನೀಡುತ್ತಿದೆ ಎಂದು ಪ್ರವಾಸೋದ್ಯಮ ಸಚಿವ ಸಿ.ಪಿ.ಯೋಗೇಶ್ವರ್ ಅವರು ಹೇಳಿದರು.

Published: 20th February 2021 03:26 PM  |   Last Updated: 20th February 2021 03:26 PM   |  A+A-


CP Yogeshwar

ಸಿ.ಪಿ ಯೋಗೇಶ್ವರ್

Posted By : Lingaraj Badiger
Source : UNI

ಬೆಂಗಳೂರು: ಕೋವಿಡ್ ನಿಂದ ನಲುಗಿ ಹೋಗಿರುವ ಪ್ರವಾಸೋದ್ಯಮಕ್ಕೆ ಪುನಶ್ಚೇತನ ನೀಡಲು ಸರ್ಕಾರ ಹೊಟೇಲ್ ಉದ್ಯಮಕ್ಕೆ ಕೈಗಾರಿಕಾ ಸ್ಥಾನಮಾನ ನೀಡುತ್ತಿದೆ ಎಂದು ಪ್ರವಾಸೋದ್ಯಮ ಸಚಿವ ಸಿ.ಪಿ.ಯೋಗೇಶ್ವರ್ ಅವರು ಹೇಳಿದರು.

ವಿಧಾನಸೌಧದಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಚಿವರು, ಹೊಟೇಲ್ ನಂಬಿದ್ದ ಸಂಸ್ಥೆಗಳು ಆರ್ಥಿಕ ಹಿಂಜರಿತ ಕಂಡಿವೆ. ಈ ಸಂಸ್ಥೆಗಳಿಗೆ ಚೇತರಿಕೆ ನೀಡುವ ಮೂಲಕ ಪ್ರವಾಸೋದ್ಯಮಕ್ಕೆ ಆರ್ಥಿಲ ಬಲ ನೀಡಲು ಹೊಟೇಲ್ ಉದ್ಯಮಕ್ಕೆ ಕೈಗಾರಿಕೆ ಸ್ಥಾನಮಾನ ನೀಡಲು ನಿರ್ಧರಿಸಲಾಗಿದೆ. 

63 ಸ್ಟಾರ್ ಹೊಟೇಲ್ ಗಳನ್ನು ಕೈಗಾರಿಕೆ ವ್ಯಾಪ್ತಿಗೆ ತರಲಾಗುತ್ತಿದೆ. ತೆರಿಗೆ, ಶುಲ್ಕ ಎಲ್ಲವೂ ಕಡಿಮೆಮಾಡಿ ಹೊಟೇಲ್ ಉದ್ಯಮಕ್ಕೆ ಒತ್ತು ಕೊಡಲಾಗಿದೆ. ಕಮರ್ಷಿಯಲ್ ದರದಲ್ಲಿ ಹೊಟೇಲ್ ನಿರ್ಮಾಣವಾಗುತ್ತಿತ್ತು. ಆದರೀಗ ಕೈಗಾರಿಕೆ ಸ್ಥಾನಮಾನ ನೀಡಲಾಗುತ್ತಿರುವುದರಿಂದ ತೆರಿಗೆ, ಶುಲ್ಕ ಕಡಿಮೆಯಾಗಲಿದೆ. ಇದರಿಂದ ಪ್ರವಾಸೋದ್ಯಮಕ್ಕೂ ಪ್ರಯೋಜನವಾಗಲಿದೆ. 

ಕೈಗಾರಿಕಾ ವ್ಯಾಪ್ತಿಯಡಿ ಸಣ್ಣಪುಟ್ಟ ಹೊಟೇಲ್ ಗಳು ಬರುವುದಿಲ್ಲ. ಅವುಗಳನ್ನು ಬೇರೆ ಯೋಜನೆಯಡಿ ತರಲಾಗುವುದು. ರಾಜ್ಯದಲ್ಲಿ ಸುಮಾರು ಎರಡು ಸಾವಿರ ಹೊಟೇಲ್ ಗಳಿವೆ. ಹೆಚ್ಚು ತೆರಿಗೆ ಕಟ್ಟುವುದರಿಂದ ಕೈಗಾರಿಕೆಗಳಡಿ ಬರುತ್ತಿರಲಿಲ್ಲ. ಸಿಂಗಲ್ ಸ್ಟಾರ್ ನಿಂದ 5 ಸ್ಟಾರ್ ವರೆಗೆ ಈ ಮಾನ್ಯತೆ ನೀಡಿದೆ .ಸ್ಟಾರ್ ಕೆಟಗರಿಯನ್ನು ಕೇಂದ್ರ ನಿರ್ಧರಿಸುತ್ತದೆ ಎಂದರು 

ಪ್ರವಾಸೋದ್ಯಮ ಅಭಿವೃದ್ಧಿಗೆ ಇದು ಪೂರಕವಾಗಲಿದೆ. ಕೇರಳ, ಗುಜರಾತ್ ನಲ್ಲಿ ಹೆಚ್ಚು ಸೌಲಭ್ಯಗಳಿವೆ. ಆದರೆ ನಮ್ಮ ರಾಜ್ಯದಲ್ಲಿ ಸೌಲಭ್ಯಗಳು ಕಡಿಮೆಯಿವೆ. ಹೀಗಾಗಿ ಅನಾನುಕೂಲ ಸರಿಪಡಿಸಲು ಈ ಕ್ರಮ ಕೈಗೊಳ್ಳಲಾಗಿದೆ. ಮಯೂರ ಕೂಡ ಸ್ಟಾರ್ ಮಾನ್ಯತೆಗೆ ಅಫ್ಲೈ ಮಾಡಿದ್ದೇವೆ. ಪ್ರವಾಸಿಗಳಿಗೆ ಉಳಿದು ಕೊಳ್ಳಲು ಹೊಟೇಲ್ ಬೇಕು. ಹೊಟೇಲ್ ಕೂಡ ಮೂಲಭೂತ ಸೌಕರ್ಯವೇ ಆಗಿದೆ. ಈಗ ರಾಜಸ್ಥಾನ, ಮಹಾರಾಷ್ಟ್ರ ದಲ್ಲಿ ತಂದಿರುವ ಪಾಲಿಸಿಯನ್ನು ರಾಜ್ಯದಲ್ಲೂ ಜಾರಿಗೆ ತರುತ್ತಿದ್ದೇವೆ ಎಂದರು.

ನಂದಿ ಪ್ರವಾಸಿ ತಾಣ ಅಭಿವೃದ್ಧಿ ವಿಚಾರವಾಗಿ ಮಾತನಾಡಿದ ಸಚಿವರು, ನಂದಿ ಪ್ರವಾಸಿ ತಾಣ ಇಷ್ಟು ದಿನ ತೋಟಗಾರಿಕೆ ಇಲಾಖೆಯ ಹಿಡಿತದಲ್ಲಿತ್ತು. ಈಗ ಪ್ರವಾಸೋದ್ಯಮ ಇಲಾಖೆಗೆ ತೆಗೆದುಕೊಳ್ಳಲಾಗಿದೆ ಎಂದರು. 
ಖಾಸಗಿಯವರ ಬಂಡವಾಳಕ್ಕೂ ಅವಕಾಶ ಕೊಡಲಾಗಿದೆ. ನಂದಿ ಗಿರಿಧಾಮ, ಜೋಗ್ ಪಾಲ್ಸ್, ಕೊಡಚಾದ್ರಿ ಕೆಮ್ಮಣ್ಣುಗುಂಡಿಯ ಅಭಿವೃದ್ಧಿಗೆ ನಿರ್ಧರಿಸಿದ್ದೇವೆ. ಬಾದಾಮಿ, ಪಟ್ಟದಕಲ್ಲು ಅಭಿವೃದ್ಧಿಗೂ ರೂಪುರೇಷೆ ನಡೆದಿದೆ. ಈ ಬಗ್ಗೆ ಸಿದ್ದರಾಮಯ್ಯನವರ ಜೊತೆ ಚರ್ಚಿಸಲಾಗಿದೆ. ಪಾರಂಪರಿಕ ತಾಣವಾಗಿ ಅಭಿವೃದ್ಧಿ ಮಾಡಲಾಗುವುದು. ಜೊತೆಗೆ ರೋರಿಚ್ ಎಸ್ಟೇಟ್ ಅಭಿವೃದ್ದಿಗೂ ಕ್ರಮ ಕೈಗೊಳ್ಳಲಾಗಿದೆ ಎಂದರು.


Stay up to date on all the latest ರಾಜ್ಯ news
Poll
CBSE board exam

12 ನೇ ತರಗತಿ ಮೌಲ್ಯಮಾಪನಕ್ಕೆ 10 ನೇ ತರಗತಿ ಅಂಕಗಳನ್ನು ಸೇರಿಸುವ ಸಿಬಿಎಸ್‌ಇ ಸೂತ್ರವನ್ನು ನೀವು ಬೆಂಬಲಿಸುತ್ತೀರಾ?


Result
ಹೌದು
ಇಲ್ಲ
flipboard facebook twitter whatsapp