ಹೆರಿಗೆ ರಜೆ ನೀಡದೆ ಕೆಲಸದಿಂದ ವಜಾ ಮಾಡಿದ್ದ ಅಧಿಕಾರಿಗೆ ದಂಡ, ಮಹಿಳೆಗೆ ಮರಳಿ ಉದ್ಯೋಗ ನೀಡಿದ ಹೈಕೋರ್ಟ್

ಗುತ್ತಿಗೆ ಆಧಾರದ ಮೇಲೆ ಕರ್ತವ್ಯ ನಿರ್ವಹಿಸುತ್ತಿದ್ದ ಮಹಿಳೆಯೊಬ್ಬರಿಗೆ ಹೆರಿಗೆ ರಜೆ ನೀಡದೆ ಸೇವೆಯಿಂದ ವಜಾಗೊಳಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹತ್ವದ ಆದೇಶ ನೀಡಿರುವ ಕರ್ನಾಟಕ ಹೈಕೋರ್ಟ್ ಮಹಿಳೆಗೆ ಮರಳಿ ಉದ್ಯೋಗ ನೀಡಿದ್ದಲ್ಲದೇ ಮಹಿಳೆಯ ಹೆರಿಗೆ ರಜೆ ನಿರಾಕರಿಸಿದ್ದ ಅಧಿಕಾರಿಗೆ 25,000 ರೂ. ದಂಡ ವಿಧಿಸಿದೆ.

Published: 20th February 2021 09:47 AM  |   Last Updated: 20th February 2021 09:47 AM   |  A+A-


Karnataka HC

ಕರ್ನಾಟಕ ಹೈಕೋರ್ಟ್

The New Indian Express

ಬೆಂಗಳೂರು: ಗುತ್ತಿಗೆ ಆಧಾರದ ಮೇಲೆ ಕರ್ತವ್ಯ ನಿರ್ವಹಿಸುತ್ತಿದ್ದ ಮಹಿಳೆಯೊಬ್ಬರಿಗೆ ಹೆರಿಗೆ ರಜೆ ನೀಡದೆ ಸೇವೆಯಿಂದ ವಜಾಗೊಳಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹತ್ವದ ಆದೇಶ ನೀಡಿರುವ ಕರ್ನಾಟಕ ಹೈಕೋರ್ಟ್ ಮಹಿಳೆಗೆ ಮರಳಿ ಉದ್ಯೋಗ ನೀಡಿದ್ದಲ್ಲದೇ ಮಹಿಳೆಯ ಹೆರಿಗೆ ರಜೆ ನಿರಾಕರಿಸಿದ್ದ ಅಧಿಕಾರಿಗೆ 25,000 ರೂ. ದಂಡ ವಿಧಿಸಿದೆ.

ಬೆಂಗಳೂರಿನ ನಿವಾಸಿ ಬಿಎಸ್‌ ರಾಜೇಶ್ವರಿ ಎಂಬುವವರು ಹೆರಿಗೆಗಾಗಿ ತೆರಳಿದ ಕಾರಣಕ್ಕೆ ತಮ್ಮನ್ನು ಸೇವೆಯಿಂದ ವಜಾಗೊಳಿಸಿದ್ದು, ಈ ಆದೇಶವನ್ನು ರದ್ದು ಮಾಡಬೇಕೆಂದು ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಕರ್ನಾಟಕ ಹೈಕೋರ್ಟ್ ಪುರಸ್ಕರಿಸಿದೆ. ಅಂತೆಯೇ ಮಹಿಳೆಯ ಉದ್ಯೋಗ ಮರಳಿ ನೀಡಿದ್ದು ಮಾತ್ರವಲ್ಲದೇ ಮಹಿಳೆಯನ್ನು ಉದ್ಯೋಗದಿಂದ ವಜಾಗೊಳಿಸಿದ್ದ ಪೌರಾಡಳಿತ ನಿರ್ದೇಶನಾಲಯದ ಅಧಿಕಾರಿಗೆ 25 ಸಾವಿರ ರೂ. ದಂಡ ವಿಧಿಸಿದೆ.

ಅರ್ಜಿಯ ವಿಚಾರಣೆ ನಡೆಸಿದ ಕರ್ನಾಟಕ ಹೈಕೋರ್ಟ್ ನ ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರಿದ್ದ ಏಕಸದಸ್ಯಪೀಠ, 'ಸಂವಿಧಾನದ ಪರಿಚ್ಛೇದ 42ರಡಿ ಮಹಿಳಾ ಉದ್ಯೋಗಿಗೆ ಹೆರಿಗೆ ರಜೆ ಕೇಳುವ ಹಕ್ಕಿದೆ. ಹೆರಿಗೆ ರಜೆ ನೀಡುವ ಮೂಲಕ ಆಕೆಯ ಹಕ್ಕನ್ನು ಸರ್ಕಾರ ರಕ್ಷಿಸಬೇಕು. ಈ ಪ್ರಕರಣದಲ್ಲಿ ಅರ್ಜಿದಾರ ಮಹಿಳೆಗೆ ಹೆರಿಗೆ ರಜೆ ನೀಡಿಲ್ಲ ಮತ್ತು ಅಲ್ಲದೆ ಸೇವೆಯಿಂದ ವಜಾಗೊಳಿಸಲಾಗಿದೆ. ಆ ಮೂಲಕ ಆಕೆಗೆ ಸಂವಿಧಾನದತ್ತವಾಗಿ ದೊರೆತ ಹಕ್ಕು ಮತ್ತು ಮಾನವ ಹಕ್ಕನ್ನು ಸ್ಪಷ್ಟವಾಗಿ ಉಲ್ಲಂಘಿಸಲಾಗಿದೆ. ಇದು ಕಾನೂನುಬಾಹಿರ ಕ್ರಮ' ಎಂದು ಹೈಕೋರ್ಟ್‌ ಪೀಠ ಅಭಿಪ್ರಾಯಪಟ್ಟಿದೆ.

ಅಲ್ಲದೆ, ಪೌರಾಡಳಿತ ನಿರ್ದೇಶನಾಲಯದ 2019ರ ಆ.29ರಂದು ಬಿಎಸ್‌ ರಾಜೇಶ್ವರಿ ಅವರನ್ನು ಸೇವೆಯಿಂದ ವಜಾಗೊಳಿಸಿ ಹೊರಡಿಸಿದ್ದ ಆದೇಶವನ್ನು ಹೈಕೋರ್ಟ್ ರದ್ದುಗೊಳಿಸಿದ್ದು, ಈ ಆದೇಶ ಪ್ರತಿ ದೊರೆತ ದಿನದಿಂದ ಎರಡು ವಾರದೊಳಗೆ ಅರ್ಜಿದಾರರನ್ನು ಮತ್ತೆ ಸೇವೆಗೆ ನಿಯೋಜಿಸಬೇಕು. ಸೇವೆಯಿಂದ ವಜಾಗೊಳಿಸಿದ ದಿನದಿಂದ ಮರು ನಿಯೋಜನೆ ಮಾಡುವ ದಿನದವರೆಗೂ ಶೇ.50ರಷ್ಟು ಹಿಂಬಾಕಿ ಪಾವತಿಸಬೇಕು. ಸೇವೆಯಿಂದ ವಜಾಗೊಳಿಸಿ ತೊಂದರೆ ನೀಡಿದ ಕಾರಣಕ್ಕೆ ಅರ್ಜಿದಾರ ಮಹಿಳೆಗೆ 25 ಸಾವಿರ ರೂ. ಪಾವತಿಸಬೇಕು. ಆ ಹಣವನ್ನು ಆದೇಶ ಹೊರಡಿಸಿದ ಅಧಿಕಾರಿಯಿಂದಲೇ ವಸೂಲಿ ಮಾಡಬೇಕು ಎಂದು ಪೌರಾಡಳಿತ ನಿರ್ದೇಶನಾಲಯಕ್ಕೆ ಹೈಕೋರ್ಟ್‌ ತಾಕೀತು ಮಾಡಿದೆ.

ಏನಿದು ಪ್ರಕರಣ
ಪೌರಾಡಳಿತ ನಿರ್ದೇಶನಾಲಯವು ತಾಂತ್ರಿಕ ವಿಭಾಗದ ಎಂಐಎಸ್‌ ಪರಿಣತೆ ಹಾಗೂ ಯೋಜನಾ ಮಾಹಿತಿ ಅಧಿಕಾರಿ ಹುದ್ದೆಗೆ 2009ರಲ್ಲಿ ರಾಜೇಶ್ವರಿ ಅವರನ್ನು ಗುತ್ತಿಗೆ ಆಧಾರದ ನೇಮಕ ಮಾಡಿಕೊಂಡಿತ್ತು. ಹೆರಿಗೆ ರಜೆ ನೀಡಲು ಕೋರಿ ಅರ್ಜಿದಾರರು 2019ರ ಜೂ.11ರಂದು ಅರ್ಜಿ ಸಲ್ಲಿಸಿದ್ದರು. ಆ ಅರ್ಜಿಯನ್ನು ಮಾನ್ಯ ಮಾಡದ ನಿರ್ದೇಶನಾಲಯ, ನೋಟಿಸ್‌ ನೀಡಿ ಕರ್ತವ್ಯಕ್ಕೆ ಹಾಜರಾಗುವಂತೆ ಸೂಚಿಸಿತ್ತು. ಆದರೆ, ಹೆರಿಗಾಗಿ ಹೋದ ಕಾರಣ ರಾಜೇಶ್ವರಿ ಅವರು ಕರ್ತವ್ಯಕ್ಕೆ ಹಾಜರಾಗಿರಲಿಲ್ಲ. ಇದರಿಂದ ಆಕೆಯ ಗುತ್ತಿಗೆ ರದ್ದುಪಡಿಸಿದ್ದಲ್ಲದೆ ಸೇವೆಯಿಂದ ವಜಾ ಮಾಡಿ 2019ರ ಆ.29ರಂದು ನಿರ್ದೇಶನಾಲಯ ಆದೇಶ ಹೊರಡಿಸಿತ್ತು. ಈ ಆದೇಶವನ್ನು ಪ್ರಶ್ನಿಸಿ ಮಹಿಳೆ ಕೋರ್ಟ್ ಮೊರೆ ಹೋಗಿದ್ದರು. ಈ ಪ್ರಕರಣದ ಆದೇಶ ನೀಡಿದ ಹೈಕೋರ್ಟ್ ರಜೆ ನಿರಾಕರಿಸಿದ ಪೌರಾಡಳಿತ ನಿರ್ದೇಶನಾಲಯದ ಅಧಿಕಾರಿಗೆ 25 ಸಾವಿರ ರೂ. ದಂಡ ವಿಧಿಸಿ, ಮಹಿಳೆಗೆ ಮರಳಿ ಕೆಲಸ ನೀಡವಂತೆ ಸೂಚನೆ ನೀಡಿದೆ.
 


Stay up to date on all the latest ರಾಜ್ಯ news
Poll
Mekedatu_Padayatra1

ಕಾಂಗ್ರೆಸ್ ಪಕ್ಷದ ಮೇಕೆದಾಟು ಪಾದಯಾತ್ರೆ ತಡೆಯಲು ರಾಜ್ಯ ಸರ್ಕಾರ ವಿಫಲವಾಗಿದೆಯೇ?


Result
ಹೌದು
ಇಲ್ಲ

Comments

Disclaimer : We respect your thoughts and views! But we need to be judicious while moderating your comments. All the comments will be moderated by the kannadaprabha.com editorial. Abstain from posting comments that are obscene, defamatory or inflammatory, and do not indulge in personal attacks. Try to avoid outside hyperlinks inside the comment. Help us delete comments that do not follow these guidelines.

The views expressed in comments published on kannadaprabha.com are those of the comment writers alone. They do not represent the views or opinions of kannadaprabha.com or its staff, nor do they represent the views or opinions of The New Indian Express Group, or any entity of, or affiliated with, The New Indian Express Group. kannadaprabha.com reserves the right to take any or all comments down at any time.

flipboard facebook twitter whatsapp