ಹೊಸ ಹಾಲ್ ಟಿಕೆಟ್ ಇದ್ದವರಿಗಷ್ಟೇ ಪರೀಕ್ಷೆ ಬರೆಯಲು ಅವಕಾಶ: ಕೆಪಿಎಸ್ಸಿನಿಂದ ದಿಢೀರ್ ಆದೇಶ!
ಪ್ರಶ್ನೆಪತ್ರಿಕೆ ಸೋರಿಕೆಯಿಂದಾಗಿ ರದ್ದಾಗಿದ್ದ ಪ್ರಥಮ ದರ್ಜೆ ಸಹಾಯಕ (ಎಫ್.ಡಿ.ಎ.) ಪರೀಕ್ಷೆಗಳನ್ನು ನಡೆಸುವ ಸಂಬಂಧ ಕೆಪಿಎಸ್ಸಿ ದಿಢೀರನೆ ಆದೇಶವೊಂದನ್ನು ಹೊರಡಿಸಿದೆ.
Published: 21st February 2021 07:34 PM | Last Updated: 22nd February 2021 04:23 PM | A+A A-

ಕೆಪಿಎಸ್ಸಿ
ಬೆಂಗಳೂರು: ಪ್ರಶ್ನೆಪತ್ರಿಕೆ ಸೋರಿಕೆಯಿಂದಾಗಿ ರದ್ದಾಗಿದ್ದ ಪ್ರಥಮ ದರ್ಜೆ ಸಹಾಯಕ (ಎಫ್.ಡಿ.ಎ.) ಪರೀಕ್ಷೆಗಳನ್ನು ನಡೆಸುವ ಸಂಬಂಧ ಕೆಪಿಎಸ್ಸಿ ದಿಢೀರನೆ ಆದೇಶವೊಂದನ್ನು ಹೊರಡಿಸಿದೆ..ಅದರ ಪ್ರಕಾರ ಅಭ್ಯರ್ಥಿಗಳು ಕೆಪಿಎಸ್ಸಿ ಪ್ರಕಟಿಸಿರುವ ನೂತನ ಹಾಲ್ ಟಿಕೆಟ್ ಗಳನ್ನು ವೆಬ್ ತಾಣದಿಂದ ಡೌನ್ ಲೋಡ್ ಮಾಡಿಕೊಳ್ಳಬೇಕಿದೆ. ಯಾರು ಈ ಹೊಸ ಹಾಲ್ ಟಿಕೆಟ್ ಗಳನ್ನು ಡೌನ್ ಲೋಡ್ ಮಾಡಿಕೊಳ್ಳುವರೋ ಅವರಿಗಷ್ಟೇ ನಿಗದಿತ ದಿನಾಂಕದಂದು ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸಲಾಗುತ್ತದೆ.
24 ಜನವರಿ 2021ರಂದು ನಡೆಯಬೇಕಿದ್ದ ಎಫ್.ಡಿ.ಎ. ಪರೀಖ್ಷೆಯನ್ನು ಪ್ರಶ್ನೆ ಪತ್ರಿಕೆ ಸೋರಿಕೆಯ ನಂತರ ರದ್ದುಪಡಿಸಲಾಗಿತ್ತು. ಇದೀಗ ಆ ಪರೀಕ್ಷೆಗಳನ್ನು ಈ ತಿಂಗಳ 28ರಂದು ನಡೆಸಲು ನಿಗದಿ ಮಾಡಲಾಗಿದೆ. ಆದರೆ ಈ ಹಿಂದೆ ಹೊರಡಿಸಲಾಗಿದ್ದ ಪ್ರವೇಶ ಪತ್ರ ರದ್ದುಗೊಳಿಸಿರುವ ಕೆಪಿಎಸ್ಸಿ ಇದೀಗ ಹೊಸ ಪ್ರವೇಶ ಪತ್ರ (ಹಾಲ್ ಟಿಕೆಟ್) ಪ್ರಕಟಿಸಿದ್ದು ಅಭ್ಯರ್ಥಿಗಳು ಅದೇ ಹಾಲ್ ಟಿಕೆಟ್ ಅನ್ನು ಡೌನ್ ಲೋಡ್ ಮಾಡಿಕೊಳ್ಳುವಂತೆ ಸೂಚಿಸಿದೆ.
ಕೆಪಿಎಸ್ಸಿ ಯ ಈ ದಿಢೀರ್ ಆದೇಶದಿಂದ ಅಭ್ಯರ್ಥಿಗಳಲ್ಲಿ ಮತ್ತೆ ಗೊಂದಲ, ಆತಂಕ ಪ್ರಾರಂಭವಾಗಿದೆ