ರಾಮಮಂದಿರ ದೇಣಿಗೆ ಸಂಗ್ರಹದಲ್ಲಿ ಪಾರದರ್ಶಕತೆಯ ಅಗತ್ಯವಿದ್ದು, ಆನ್'ಲೈನ್ ಮೂಲಕ ದೇಣಿಗೆ ಸಂಗ್ರಹಿಸಲಿ: ಹೆಚ್'ಡಿಕೆ

ರಾಮಮಂದಿರ ನಿರ್ಮಾಣ ದೇಣಿಗೆ ವಿಚಾರ ಸಂಬಂಧ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿಯವರು ನೀಡಿದ್ದ ಹೇಳಿಕೆ ರಾಜಕೀಯ ವಲಯದಲ್ಲಿ ಕಿಚ್ಚು ಹೊತ್ತಿಸಿದೆ. ಹೇಳಿಕೆಗೆ ಬಿಜೆಪಿ ಹಾಗೂ ಬಲಪಂಧೀಯ ಸಂಘಟನೆಗಳು ಕುಮಾರಸ್ವಾಮಿ ವಿರುದ್ಧ ತೀವ್ರವಾಗಿ ಕಿಡಿಕಾರುತ್ತಿವೆ.

Published: 21st February 2021 09:17 AM  |   Last Updated: 21st February 2021 09:17 AM   |  A+A-


HD kumaraswamy

ಹೆಚ್ ಡಿ ಕುಮಾರಸ್ವಾಮಿ

Posted By : Manjula VN
Source : The New Indian Express

ಬೆಂಗಳೂರು: ರಾಮಮಂದಿರ ನಿರ್ಮಾಣ ದೇಣಿಗೆ ವಿಚಾರ ಸಂಬಂಧ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿಯವರು ನೀಡಿದ್ದ ಹೇಳಿಕೆ ರಾಜಕೀಯ ವಲಯದಲ್ಲಿ ಕಿಚ್ಚು ಹೊತ್ತಿಸಿದೆ. ಹೇಳಿಕೆಗೆ ಬಿಜೆಪಿ ಹಾಗೂ ಬಲಪಂಧೀಯ ಸಂಘಟನೆಗಳು ಕುಮಾರಸ್ವಾಮಿ ವಿರುದ್ಧ ತೀವ್ರವಾಗಿ ಕಿಡಿಕಾರುತ್ತಿದ್ದು, ಈ ಹಿನ್ನೆಲೆಯಲ್ಲಿ ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ನಡೆಸಿದ ಸಂದರ್ಶದನಲ್ಲಿ ಹೆಚ್.ಡಿ.ಕುಮಾರಸ್ವಾಮಿಯವರು ಸ್ಪಷ್ಟನೆಗಳನ್ನು ನೀಡಿದ್ದಾರೆ.

ನಾನು ದೇಗುಲ ನಿರ್ಮಾಣದ ವಿರುದ್ಧವಿಲ್ಲ. ಆದರೆ, ದೇಣಿಗೆ ಸಂಗ್ರಹ ವಿಚಾರದಲ್ಲಿ ಪಾರದರ್ಶಕತೆಯ ಅಗತ್ಯವಿದೆ ಎಂದು ಹೇಳಿದ್ದೆ. ದೇಣಿಗೆ ವಿಚಾರದಲ್ಲಿ ಸಂಶಯಗಳನ್ನು ದೂರಾಗಿಸಲು ಆನ್'ಲೈನ್ ಹಣ ವರ್ಗಾವಣೆ ಮಾಡುವಂತೆ ಸಲಹೆ ನೀಡಲು ಇಚ್ಛಿಸುತ್ತೇನೆ. ದೇಣಿಗೆ ಸಂಗ್ರಹಿಸಲು ಮುಂದಾಗಿರುವ ವಿಶ್ವ ಹಿಂದು ಪರಿಷತ್ ಅಥವಾ ಮಂದಿರ ನಿರ್ಮಾಣ ಟ್ರಸ್ಟ್ ದೇಣಿಗೆ ಸಂಗ್ರಹಿಸುವವರಿಗೆ ಗುರುತಿನ ಚೀಟಿ ನೀಡಲಿ ಎಂದು ಹೇಳಿದ್ದಾರೆ.

ರಾಮ ಮಂದಿರ ನಿರ್ಮಾಣ ದೇಣಿಗೆ ಸಂಗ್ರಹ ವಿಚಾರದ ಸಂಬಂಧ ಯಾವ ಕಾರಣಕ್ಕೆ ಪ್ರಶ್ನೆ ಮಾಡಿದ್ದಿರಿ?
ಅಯೋಧ್ಯೆಯಲ್ಲಿ ರಾಮ ಮಂದಿರ ವಿಚಾರ ಸಂಬಂಧ ನನ್ನ ವಿರೋಧವಿಲ್ಲ. ಮಂದಿರವನ್ನು ಉತ್ತಮವಾಗಿ ನಿರ್ಮಾಣ ಮಾಡಲಿ. ನಾನು ಕೂಡ ಸಂಪೂರ್ಣ ಬೆಂಬಲವನ್ನು ನೀಡುತ್ತೇನೆ. ಆದರೆ, ಬಲವಂತದಿಂದ ದೇಣಿಗೆ ಸಂಗ್ರಹ ಮಾಡುತ್ತಿರುವುದರ ವಿರುದ್ಧ ನಾನು ಪ್ರಶ್ನೆ ಮಾಡಿದ್ದೇನೆ. ಈ ಬಗ್ಗೆ ನನ್ನ ಗಮನಕ್ಕೂ ಬಂದಿದೆ. ಕೆಲವರು ದೇಣಿಗೆ ನೀಡಿದ ಹಾಗೂ ನೀಡದವರ ಮನೆಗಳ ಮೇಲೆ ಬರೆಯುತ್ತಿದ್ದಾರೆ. ದೇಶದಾದ್ಯಂತ ಈ ಕಾರ್ಯ ನಡೆಯುತ್ತಿವೆ. ದೇಣಿಗೆ ಯಾವ ಸಂಘಟನೆಗಳು ಸಂಗ್ರಹಿಸುತ್ತಿವೆ ಎಂಬುದು ನಮಗೆ ಹೇಗೆ ತಿಳಿಯುತ್ತದೆ? ವಿಶ್ವ ಹಿಂದೂ ಪರಿಷತ್ ಅಥವಾ ರಾಮ ಮಂದಿರ ನಿರ್ಮಾಣ ಟ್ರಸ್ಟ್ ದೇಣಿಗೆ ಸಂಗ್ರಹಿಸುವವರಿಗೆ ಗುರುತಿನ ಚೀಟಿ ನೀಡಬೇಕು. ಇದು ನನ್ನ ಸಲಹೆಯಾಗಿದೆ. ನಾನು ಯಾರೊಬ್ಬರ ವಿರುದ್ಧವೂ ಆರೋಪಗಳನ್ನು ಮಾಡಿಲ್ಲ ಎಂದು ತಿಳಿಸಿದ್ದಾರೆ.

ದೇಣಿಗೆ ಸಂಗ್ರಹ ಮಾಡಲು ಬಂದ ಕೆಲವರು ನಿಮಗೆ ಬೆದರಿಕೆ ಹಾಕಿದ್ದಾರೆಂದು ಹೇಳಿದ್ದಿರಿ...?
ದೇಣಿಗೆ ಸಂಗ್ರಹ ಮಾಡುತ್ತಿರುವುದರ ವಿರುದ್ಧ ನಾನಿಲ್ಲ. ನಮ್ಮ ಪಕ್ಷದ ಸದ್ಯರೂ ಕೂಡ ಈ ಕಾರ್ಯ ಮಾಡುತ್ತಿದ್ದಾರೆ. ಆದರೆ, ಯಾವುದೇ ಅಧಿಕೃತ ವ್ಯಕ್ತಿ ದೇಣಿಗೆಗಾಗಿ ನನ್ನನ್ನು ಸಂಪರ್ಕಿಸಿಲ್ಲ. ಇತ್ತೀಚೆಗಷ್ಟೇ, ನಮ್ಮ ಮನೆಗೆ ಮೂರು ವ್ಯಕ್ತಿಗಳು ಬಂದಿದ್ದರು. ಆದರೆ ಆ ವ್ಯಕ್ತಿಗಳು ತಮ್ಮ ಗುರ್ತಿಕೆಯನ್ನು ಬಹಿರಂಗಪಡಿಸಲಿಲ್ಲ. ದೇಶದ ಜವಾಬ್ದಾರಿಯುತ ನಾಗರಿಕರು ಎಂದು ಹೇಳಿ ಹಣಕ್ಕಾಗಿ ಬೇಡಿಕೆ ಇಟ್ಟರು. ಯಾವ ಖಾತರಿಯ ಮೇರೆಗೆ ನಾನು ಅವರಿಗೆ ಹಣ ನೀಡಬೇಕು? ಅವರೊಂದಿಗೆ ಇದ್ದ ಒಬ್ಬ ಮಹಿಳೆ ನನ್ನೊಂದಿಗೆ ಅಸಭ್ಯವಾಗಿ ಮಾತನಾಡಿದ್ದಳು. ಆದರೆ ನಾನು ಅದನ್ನು ಗಂಭೀರವಾಗಿ ಪರಿಗಣಿಸಲಿಲ್ಲ. ಎಲ್ಲಾ ರೀತಿಯ ಜನರು ಸಹಾಯ ಕೋರಿ ನಮ್ಮ ಬಳಿಗೆ ಬರುತ್ತಾರೆ. ಹೀಗಾಗಿ ನಾನು ಏನನ್ನೂ ಮಾತನಾಡಲಿಲ್ಲ.

ನೀವು ನೀಡುವ ಸಲಹೆಗಳಾದರೂ ಏನು?
ಆನ್‌ಲೈನ್ ಹಣ ವರ್ಗಾವಣೆಯು ಪಾರದರ್ಶಕತೆಯನ್ನು ಖಚಿತಪಡಿಸುತ್ತದೆ. ನರೇಂದ್ರ ಮೋದಿ ಸರ್ಕಾರ ಪ್ರಾರಂಭಿಸಿದ ಜನ ಧನ್ ಯೋಜನೆಯಡಿ ಎಲ್ಲರಿಗೂ ಬ್ಯಾಂಕ್ ಖಾತೆಗಳಿವೆ. ಅದು ರೂ. 5, 10 ಅಥವಾ ಅದಕ್ಕಿಂತ ಹೆಚ್ಚು ಆಗಿರಲಿ, ಜನರು ಹಣವನ್ನು ತಮ್ಮ ಬ್ಯಾಂಕ್ ಖಾತೆಗಳಿಂದ ವರ್ಗಾಯಿಸಲಿ. ದೇಣಿಗೆ ವಿಚಾರದಲ್ಲಿ ಪಾರದರ್ಶಕತೆ ಕುರಿತಂತೆ ಮಾತ್ರ ನಾನು ಪ್ರಶ್ನೆ ಎತ್ತಿದ್ದೆ. ದೇವಾಲಯದ ನಿರ್ಮಾಣಕ್ಕೆ ಎಷ್ಟು ಹಣ ಬೇಕು ಮತ್ತು ಎಷ್ಟು ಸಮಯದವರೆಗೆ ಈ ದೇಣಿಗೆ ಸಂಗ್ರಹ ಮಾಡಲಾಗುತ್ತದೆ ಎಂಬುದರ ಬಗ್ಗೆ ಯಾವುದೇ ಮಾಹಿತಿಗಳು ಲಭ್ಯವಾಗಿಲ್ಲ ಎಂದಿದ್ದಾರೆ.

ದೇಣಿಗೆ ಸಂಗ್ರಹವನ್ನು ಧಾರ್ಮಿಕ ಭ್ರಷ್ಟಾಚಾರ ಎಂದು ಕರೆದಿದ್ದೀರಾ...?
ಸಂದೇಹಗಳ ದೂರಾಗಿಸಲು ಪಾರದರ್ಶಕತೆ ಅತ್ಯಂತ ಮುಖ್ಯವಾಗಿದೆ. ರಾಮನ ಹೆಸರನ್ನು ಹಾಳು ಮಾಡುವ, ದುರ್ಬಳಕೆ ಮಾಡುವ ಪ್ರಯತ್ನಗಳಾಗಬಾರದು. ಹೀಗಾಗಿಯೇ ನಾನು ಧಾರ್ಮಿಕ ಭ್ರಷ್ಟಾಚಾರವೆಂದು ಕರೆದಿದ್ದೆ. ಇದರಲ್ಲಿ ಯಾವುದೇ ರಾಜಕೀಯವಿಲ್ಲ.

ಅಲ್ಪಸಂಖ್ಯಾತ ಸಮುದಾಯವನ್ನು ಮೆಚ್ಚಿಸಲು ಇಂತಹ ಹೇಳಿಕೆಗಳನ್ನು ನೀಡಿದ್ದೀರಿ ಎಂದು ಹೇಳಲಾಗುತ್ತಿದೆ...?
ಇಂತಹ ವಿಚಾರಗಳನ್ನು ಪ್ರಸ್ತಾಪಿಸುವ ಮೂಲಕ ಯಾವುದೇ ಸಮುದಾಯವನ್ನು ಮೆಚ್ಚಿಸಲು ಸಾಧ್ಯವಿಲ್ಲ ಮತ್ತು ಇದು ನನ್ನ ಉದ್ದೇಶವೇ ಅಲ್ಲ. ಕಳೆದ 15 ವರ್ಷಗಳಿಂದ ಬಿಜೆಪಿಯವರು ಶ್ರೀರಾಮನ ಹೆಸರಿನಲ್ಲಿ ಲಾಭ ಮಾಡಿಕೊಂಡಿದ್ದಾರೆ. ಇದೀಗ ಉತ್ತರ ಪ್ರದೇಶದಲ್ಲಿ ದೇವಾಲಯವನ್ನು ನಿರ್ಮಾಣ ಮಾಡಲಾಗುತ್ತಿದೆ. ಆ ರಾಜ್ಯದಲ್ಲಿ ಏನು ನಡೆಯುತ್ತಿದೆ ಮತ್ತು ಮಹಿಳೆಯರನ್ನು ಯಾವ ರೀತಿ ನಡೆಸಿಕೊಳ್ಳಲಾಗುತ್ತಿದೆ ಎಂಬುದು ನಮಗೆಲ್ಲರಿಗೂ ತಿಳಿದಿದೆ. ಬಿಜೆಪಿಯವರು ರಾಮ ರಾಜ್ಯ ಪರಿಕಲ್ಪನೆಯನ್ನು ಅನುಸರಿಸುತ್ತಿದ್ದಾರೆಯೇ? ನಾನು ಶ್ರೀರಾಮನನ್ನು ಅವರಿಗಿಂತ ಹೆಚ್ಚು ಗೌರವಿಸುತ್ತೇನೆ ಮತ್ತು ಅಧಿಕಾರದಲ್ಲಿದ್ದಾಗ ರಾಮ ರಾಜ್ಯ ಸ್ಥಾಪನೆ ಮಾಡಲು ಪ್ರಯತ್ನಿಸಿದ್ದೇನೆ.

ರಾಮ ಮಂದಿರ ನಿರ್ಮಾಣದ ವಿರುದ್ಧ ನಾನಿಲ್ಲ ಎಂಬುದನ್ನು ಈ ಮೂಲಕ ಮತ್ತೊಮ್ಮೆ ಸ್ಪಷ್ಟಪಡಿಸುತ್ತಿದ್ದೇನೆ. ಅಧಿಕೃತ ವ್ಯಕ್ತಿಗಳು ದೇಣಿಗೆ ಸಂಗ್ರಹಿಸಲು ಬಂದಿದ್ದೇ ಆದರೆ, ನಾನು ದೇಣಿಗೆ ನೀಡಲು ಸಿದ್ಧನಿದ್ದೇನೆ. ಆದರೆ, ಪಾರದರ್ಶಕತೆ ತರಬೇಕೆಂಬುದಷ್ಟೇ ನನ್ನ ಆಗ್ರಹ. ರಾಮನ ಹೆಸರು ದುರ್ಬಳಕೆಯಾಗಬಾರದು ಎಂದು ಹೇಳಿದ್ದಾರೆ.

Stay up to date on all the latest ರಾಜ್ಯ news
Poll
The grand Central Vista project is estimated to cost `20,000 crore

ಕೋವಿಡ್ ಬಿಕ್ಕಟ್ಟಿನ ದೃಷ್ಟಿಯಿಂದ ಪ್ರಧಾನಿ ಮೋದಿ ಸೆಂಟ್ರಲ್ ವಿಸ್ಟಾ ಯೋಜನೆಯನ್ನು ತಡೆಹಿಡಿಯಬೇಕೇ?


Result
ಹೌದು
ಬೇಡ
flipboard facebook twitter whatsapp