ರಾಮಮಂದಿರ ದೇಣಿಗೆ ಸಂಗ್ರಹಿಸಲು ಬಂದ ವ್ಯಕ್ತಿಗಳು ಬೆದರಿಕೆ ಹಾಕಿದ್ದರೆ ಹೆಚ್'ಡಿಕೆ ಪೊಲೀಸರಿಗೆ ದೂರು ನೀಡಲಿ:  ಪೇಜಾವರ ಶ್ರೀ

ರಾಮಮಂದಿರ ನಿರ್ಮಾಣ ಸಂಬಂಧ ದೇಣಿಗೆ ಸಂಗ್ರಹಿಸಲು ಬಂದ ವ್ಯಕ್ತಿಗಳು ಬೆದರಿಕೆ ಹಾಕಿರುವುದು ನಿಜವೇ ಆಗಿದ್ದರೆ, ಜೆಡಿಎಸ್ ನಾಯಕ ಹೆಚ್.ಡಿ.ಕುಮಾರಸ್ವಾಮಿಯವರು ಪೊಲೀಸರಿಗೆ ದೂರು ನೀಡಲಿ ಎಂದು ಅಯೋಧ್ಯೆ ರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್‌ನ ವಿಶ್ವಸ್ಥರಾಗಿರುವ ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿಗಳು ಹೇಳಿದ್ದಾರೆ.

Published: 21st February 2021 09:47 AM  |   Last Updated: 21st February 2021 09:47 AM   |  A+A-


Pejawar seer

ಪೇಜಾವರ ಶ್ರೀ

Posted By : Manjula VN
Source : The New Indian Express

ಉಡುಪಿ: ರಾಮಮಂದಿರ ನಿರ್ಮಾಣ ಸಂಬಂಧ ದೇಣಿಗೆ ಸಂಗ್ರಹಿಸಲು ಬಂದ ವ್ಯಕ್ತಿಗಳು ಬೆದರಿಕೆ ಹಾಕಿರುವುದು ನಿಜವೇ ಆಗಿದ್ದರೆ, ಜೆಡಿಎಸ್ ನಾಯಕ ಹೆಚ್.ಡಿ.ಕುಮಾರಸ್ವಾಮಿಯವರು ಪೊಲೀಸರಿಗೆ ದೂರು ನೀಡಲಿ ಎಂದು ಅಯೋಧ್ಯೆ ರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್‌ನ ವಿಶ್ವಸ್ಥರಾಗಿರುವ ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿಗಳು ಹೇಳಿದ್ದಾರೆ.

ದಿ ನ್ಯೂ ಇಂಡಿಯನ್ ಎಕ್ಸ್'ಪ್ರೆಸ್ ನಡೆಸಿದ ಸಂದರ್ಶನದಲ್ಲಿ ಮಾತನಾಡಿರುವ ಶ್ರೀಗಳು, ರಾಮಮಂದಿರ ನಿರ್ಮಾಣಕ್ಕಾಗಿ ದೇಣಿಗೆ ಸಂಗ್ರಹಿಸುವ ಜವಾಬ್ದಾರಿಯನ್ನು ದೇಶದ ದೊಡ್ಡ ಸಂಘಟನೆಗಳಾದ ಆರ್‌ಎಸ್‌ಎಸ್ ಮತ್ತು ವಿಎಚ್‌ಪಿಗೆ ನೀಡಲಾಗಿದೆ. ದೇಣಿಗೆ ಸಂಗ್ರಹ ಮಾಡಲು ಬಂದ ವ್ಯಕ್ತಿಗಳು ಬೆದರಿಕೆ ಹಾಕಿದ್ದಾರೆಂದು ಕುಮಾರಸ್ವಾಮಿಯವರು ಹೇಳಿದ್ದಾರೆ. ಒಂದು ವೇಳೆ ಇದು ನಿಜವಾಗಿದ್ದರೆ, ಕುಮಾರಸ್ವಾಮಿಯವರು ಪೊಲೀಸರಿಗೆ ದೂರು ನೀಡಲಿ ಎಂದು ಹೇಳಿದ್ದಾರೆ.

ರಾಮ ಮಂದಿರ ದೇಣಿಗೆ ಸಂಗ್ರಹ ಕಾರ್ಯ ಹೇಗೆ ನಡೆಯುತ್ತಿದೆ? ವಿಎಚ್‌ಪಿಗೆ ಈ ಜವಾಬ್ದಾರಿಯನ್ನು ಏಕೆ ನೀಡಲಾಯಿತು?
ನಮ್ಮ ಯೋಜನೆಯಂತೆಯೇ ದೇಣಿಗೆ ಸಂಗ್ರಹ ಕಾರ್ಯಗಳು ಮುನ್ನಡೆಯುತ್ತಿದೆ. ನಿರೀಕ್ಷೆಗಿಂತಲೂ ಜನರು ಹೆಚ್ಚಿನ ಆಸಕ್ತಿ ತೋರಿಸುತ್ತಿದ್ದಾರೆ. ವಿಎಚ್‌ಪಿ ಮತ್ತು ಆರ್‌ಎಸ್‌ಎಸ್‌ ಸಾಟಿಯಿಲ್ಲದ ನಿಲುವು ಹೊಂದಿದ್ದು, ದೇಶದ ಅತಿದೊಡ್ಡ ಸಂಘಟನೆಗಳಾಗಿರುವುದರಿಂದ ಅವರಿಗೆ ಜವಾಬ್ದಾರಿಯನ್ನು ನೀಡಲಾಗಿದೆ. ಭ್ರಷ್ಟಾಚಾರವನ್ನು ತಪ್ಪಿಸುವ ಸಲುವಾಗಿಯೇ ದೇಶಾದ್ಯಂತ ಏಕಕಾಲದಲ್ಲಿ ದೇಣಿಗೆ ಸಂಗ್ರಹ ಕಾರ್ಯಕ್ಕೆ ಚಾಲನೆ ನೀಡಲಾಯಿತು.

ದಕ್ಷಿಣ ಭಾಗದಲ್ಲಿ ಮಾತ್ರ ದೇಣಿಗೆ ಸಂಗ್ರಹಿಸುವ ಜವಾಬ್ದಾರಿ ನಿಮಗೆ ನೀಡಲಾಗಿದೆಯೇ?
ಟ್ರಸ್ಟಿಗಳಲ್ಲಿ ಅಂತಹ ಯಾವುದೇ ಜವಾಬ್ದಾರಿಯನ್ನು ವಿಭಜಿಸಲಾಗಿಲ್ಲ. ಉತ್ತರ ಭಾರತ ರಾಜ್ಯಗಳಿಗೂ ಭೇಟಿ ನೀಡುತ್ತಿದ್ದೆ, ಆದರೆ ನನಗೆ ಸಮಯ ಸಿಗುತ್ತಿಲ್ಲ. ಹೀಗಾಗಿ ದಕ್ಷಿಣ ಭಾಗದ ರಾಜ್ಯಗಳಿಗೆ ನನ್ನ ಭೇಟಿಗಳನ್ನು ಸೀಮಿತಗೊಳಿಸಿದ್ದೇನೆ. ಈ ವರೆಗೂ ರೂ.1000 ಕೋಟಿ ಸಂಗ್ರಹಿಸಲಾಗಿದೆ. ಮಾಘ ಪೂರ್ಣಿಮಾ (ಫೆಬ್ರವರಿ 27) ರವರೆಗೆ ಈ ಕಾರ್ಯ ಮುಂದುವರಿಯಲಿದೆ. ನಂತರವೂ ಜನರು ಟ್ರಸ್ಟ್ ಬ್ಯಾಂಕ್ ಖಾತೆಗೆ ಹಣವನ್ನು ರವಾನಿಸುವ ಮೂಲಕ ಕೊಡುಗೆ ನೀಡಬಹುದಾಗಿದೆ.

ಆನ್'ಲೈನ್ ಮೂಲಕವೇಕೆ ದೇಣಿಗೆ ಸಂಗ್ರಹಿಸಲು ನಿರ್ಧಾರ ಕೈಗೊಳ್ಳಲಿಲ್ಲ?
ಗ್ರಾಮೀಣ ಭಾಗದಲ್ಲಿರುವ ಜನರಿಗೆ ಬ್ಯಾಂಕ್ ಗಳಿಗೆ ತೆರಳಲು ಕಷ್ಟವಾಗುತ್ತದೆ. ನಗರದಲ್ಲಿರುವವರು ಚಿಂತಿಸುವಂತೆ ಗ್ರಾಮೀಣ ಭಾಗದಲ್ಲಿರುವವರು ಚಿಂತಿಸುವುದಿಲ್ಲ. ಹೀಗಾಗಿ ಭೌತಿಕ ಸಂಗ್ರಹ ಆಯ್ಕೆಯನ್ನು ಮಾಡಲಾಯಿತು. ಸಾಕಷ್ಟು ಜನರು ದೇಣಿಗೆ ನೀಡಲು ಮುಂದೆ ಬರುತ್ತಿದ್ದಾರೆ.

ಸಿದ್ದರಾಮಯ್ಯ, ಕುಮಾರಸ್ವಾಮಿ ದೇಣಿಗೆ ಸಂಗ್ರಹ ಕುರಿತು ಟೀಕೆಗಳನ್ನು ಮಾಡುತ್ತಿದ್ದಾರೆ. ದೇಣಿಗೆ ನೀಡದವರ ಮನೆಗಳ ಮುಂದೆ ವಿಹೆಚ್'ಪಿ ಸ್ವಯಂಸೇವಕರು ಬರವಣಿಗೆಗಳನ್ನು ಬರೆಯುತ್ತಿದ್ದಾರೆಂದು ಕುಮಾರಸ್ವಾಮಿ ಹೇಳಿದ್ದಾರೆ...?
ದೇಣಿಗೆ ನೀಡುವಂತೆ ಯಾರಿಗೂ ಬಲವಂತ ಮಾಡುತ್ತಿಲ್ಲ. ಇದು ಮಾಜಿ ಮುಖ್ಯಮಂತ್ರಿಗಳಿಗೂ ಅನ್ವಯಿಸುತ್ತದೆ. ದೇಣಿಗೆ ನೀಡದವರ ಮನೆಗಳ ಮುಂದೆ ಬರೆಯಲಾಗುತ್ತಿದೆ ಎಂದು ಸುಳ್ಳು ಸುದ್ದಿಗಳನ್ನು ಹರಡಿಸಲಾಗುತ್ತಿದೆ. ದೇಣಿಗೆ ಸಂಗ್ರಹ ವಿಚಾರದಲ್ಲಿ ಪಾರದರ್ಶಕತೆ ಸ್ಥಾಪಿಸಲು ಸ್ವಯಂಸೇವಕರು ಕೂಪನ್ ಹಾಗೂ ರಶೀದಿಗಳನ್ನು ನೀಡುತ್ತಿದ್ದಾರೆ.

ವಿಹೆಚ್'ಪಿ ಸ್ವಯಂಸೇವಕರೇ ದೇಣಿಗೆ ಸಂಗ್ರಹಿಸಲು ಬಂದಿದ್ದಾರೆಂದು ಜನರು ಗುರ್ತಿಸುವುದು ಹೇಗೆ?
ಜನರಿಗೆ ಸಹಾಯಕವಾಗಲು ವಿಹೆಚ್'ಪಿ ಸ್ವಯಂ ಸೇವಕರು ತಮ್ಮ ತಮ್ಮ ಪ್ರದೇಶಗಳಲ್ಲಿ ಮಾತ್ರ ದೇಣಿಗೆ ಸಂಗ್ರಹಿಸುತ್ತಿದ್ದಾರೆ. ಇತರೆ ಪ್ರದೇಶಗಳಿಗೆ ಇವರು ಹೋಗುತ್ತಿಲ್ಲ. ತಮ್ಮ ಕ್ಷೇತ್ರದಲ್ಲಿರುವ ಜನರ ಬಗ್ಗೆ ಜನರಿಗೆ ತಿಳಿದೇ ಇರುತ್ತದೆ.

ದೇಣಿಗೆ ಸಂಗ್ರಹಿಸಲು ಬಂದ ಕೆಲ ವ್ಯಕ್ತಿಗಳು ತಮಗೆ ಬೆದರಿಕೆ ಹಾಕಿದ್ದಾರೆಂದು ಕುಮಾರಸ್ವಾಮಿ ಹೇಳಿದ್ದಾರೆ?
ಕುಮಾರಸ್ವಾಮಿಯವರು ಮಾಜಿ ಮುಖ್ಯಮಂತ್ರಿಗಳು. ಬೆದರಿಕೆ ಬಂದಿರುವುದು ನಿಜವೇ ಆಗಿದ್ದರೆ, ಪೊಲೀಸರಿಗೆ ದೂರು ನೀಡಿದ್ದರೆ ಆ ವಿಚಾರ ಅಲ್ಲಿಗೆ ಮುಕ್ತಾಯವಾಗುತ್ತಿತ್ತು. ಬೆದರಿಕೆ ಹಾಕಿದವರು ಯಾರು ಎಂಬ ವಿಚಾರವನ್ನು ಅವರು ಹೇಳುತ್ತಿಲ್ಲ. ಅವರ ಹೇಳಿಕೆ ಸತ್ಯ ಎಂದು ನಂಬಲು ಹೇಗೆ ಸಾಧ್ಯ? ಹಾಗೆಂದು ಘಟನೆ ನಡೆದಿಲ್ಲ ಎಂದು ನಾನು ಹೇಳುತ್ತಿಲ್ಲ. ಆದರೆ, ಕುಮಾರಸ್ವಾಮಿಯವರಿಗೆ ದೂರು ನೀಡುವ ಆಯ್ಕೆ ಇದೆ. ಆದರೆ, ವಿಹೆಚ್'ಪಿ ವಿರುದ್ಧ ಮಾತನಾಡುವುದು ಸರಿಯಲ್ಲ. ಜನರ ಮನೆಬಾಗಿಲಿಗೆ ಹೋಗಿ ಹಣ ಸಂಗ್ರಹಿಸುವ ಹಕ್ಕನ್ನು ವಿಹೆಚ್'ಪಿಗೆ ಯಾರು ಕೊಟ್ಟರು ಎಂದು ಕೆಲ ರಾಜಕೀಯ ನಾಯಕರು ಕೇಳುತ್ತಿದ್ದಾರೆ. ಇದಕ್ಕೆ ಮತದಾರರನ್ನು ಹುಡುಕಿಕೊಂಡು ರಾಜಕಾರಣಿಗಳಿಗೆ ಮನೆ ಮನೆಗೆ ಹೋಗಲು ಅನುವು ಮಾಡಿಕೊಡುವ ಅದೇ ವ್ಯವಸ್ಥೆಯು ಸ್ವಯಂಸೇವಕರಿಗೆ ಹಣವನ್ನು ಸಂಗ್ರಹಿಸುವ ಅಧಿಕಾರವನ್ನು ನೀಡಿದೆ ಎಂದು ನಾನು ಉತ್ತರಿಸುವೆ ಎಂದಿದ್ದಾರೆ.

Stay up to date on all the latest ರಾಜ್ಯ news
Poll
The grand Central Vista project is estimated to cost `20,000 crore

ಕೋವಿಡ್ ಬಿಕ್ಕಟ್ಟಿನ ದೃಷ್ಟಿಯಿಂದ ಪ್ರಧಾನಿ ಮೋದಿ ಸೆಂಟ್ರಲ್ ವಿಸ್ಟಾ ಯೋಜನೆಯನ್ನು ತಡೆಹಿಡಿಯಬೇಕೇ?


Result
ಹೌದು
ಬೇಡ
flipboard facebook twitter whatsapp