ಅಧಿಕಾರಿಗಳೊಂದಿಗೆ ಇಡೀ ರಾತ್ರಿ ಗ್ರಾಮದಲ್ಲಿಯೇ ತಂಗಿದ್ದ ಸಚಿವ ಆರ್. ಅಶೋಕ್!

ಆಡಳಿತವನ್ನು ಜನರ ಬಾಗಿಲಿಗೆ ಕೊಂಡೊಯ್ಯುವ ನಿಟ್ಟಿನಲ್ಲಿ ಜಿಲ್ಲಾಧಿಕಾರಿಗಳು, ಸಹಾಯಕ ಆಯುಕ್ತರು, ತಹಸೀಲ್ದಾರ್ ಮತ್ತು ಕಂದಾಯ ಅಧಿಕಾರಿಗಳು ರಾಜ್ಯಾದ್ಯಂತ್ಯ 227 ಹಳ್ಳಿಗಳಲ್ಲಿ ಇಡೀ ರಾತ್ರಿ ವಾಸ್ತವ್ಯ ಹೂಡಿ, ಗ್ರಾಮಸ್ಥರ ಸಂಕಷ್ಟಗಳನ್ನು ಆಲಿಸಿದರು. ಕೆಲವೊಂದು ಸಮಸ್ಯೆಗಳಿಗೆ ಅಲ್ಲಿಯೇ ಪರಿಹಾರ ನೀಡಿದರು.

Published: 21st February 2021 09:58 AM  |   Last Updated: 21st February 2021 09:58 AM   |  A+A-


Ashok1

ಎತ್ತಿನಗಾಡಿಯಲ್ಲಿ ಸಚಿವ ಆರ್.ಅಶೋಕ್

Posted By : Nagaraja AB
Source : The New Indian Express

ಬೆಂಗಳೂರು: ಆಡಳಿತವನ್ನು ಜನರ ಬಾಗಿಲಿಗೆ ಕೊಂಡೊಯ್ಯುವ ನಿಟ್ಟಿನಲ್ಲಿ ಜಿಲ್ಲಾಧಿಕಾರಿಗಳು, ಸಹಾಯಕ ಆಯುಕ್ತರು, ತಹಸೀಲ್ದಾರ್ ಮತ್ತು ಕಂದಾಯ ಅಧಿಕಾರಿಗಳು ರಾಜ್ಯಾದ್ಯಂತ್ಯ 227 ಹಳ್ಳಿಗಳಲ್ಲಿ ಇಡೀ ರಾತ್ರಿ ವಾಸ್ತವ್ಯ ಹೂಡಿ, ಗ್ರಾಮಸ್ಥರ ಸಂಕಷ್ಟಗಳನ್ನು ಆಲಿಸಿದರು. ಕೆಲವೊಂದು ಸಮಸ್ಯೆಗಳಿಗೆ ಅಲ್ಲಿಯೇ ಪರಿಹಾರ ನೀಡಿದರು.

ತಿಂಗಳ ಪ್ರತಿ ಮೂರನೇ ಶನಿವಾರ ಅಧಿಕಾರಿಗಳು  ಗ್ರಾಮಗಳಿಗೆ ಭೇಟಿ ನೀಡಿ, ಅಲ್ಲಿನ ಕುಂದುಕೊರತೆಗಳನ್ನು ಆಲಿಸಿ ಪರಿಹರಿಸಬೇಕೆಂದು ಕಂದಾಯ ಸಚಿವ ಆರ್. ಅಶೋಕ್ ಕಳೆದ ತಿಂಗಳು ಆದೇಶಿಸಿದ್ದರು.

ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರ ತಾಲೂಕಿನ ಹೊಸಹಳ್ಳಿ ಗ್ರಾಮದಲ್ಲಿ ಆರ್, ಅಶೋಕ್ ಕೂಡಾ  ಶನಿವಾರ ರಾತ್ರಿ ಗ್ರಾಮ ವಾಸ್ತವ್ಯ ಕಾರ್ಯಕ್ರಮದ ಭಾಗವಾದರು. ಸಮಾಜ ಕಲ್ಯಾಣ ಇಲಾಖೆಯ ವಸತಿ ನಿಲಯದಲ್ಲಿ ಇಡೀ ರಾತ್ರಿ ಕಳೆದರು. ರಾಜ್ಯವನ್ನು ಗ್ರಾಮ ರಾಜ್ಯ ಮತ್ತು ರಾಜ್ಯ ರಾಜ್ಯ ಮಾಡಲು ಸರ್ಕಾರ ಎದುರು ನೋಡುತ್ತಿರುವುದಾಗಿ ಅಶೋಕ್ ಹೇಳಿದರು. 

ದಲಿತ ಕೇರಿಗೆ ಭೇಟಿ ನೀಡಿದ ತಂಡ, ಸಣ್ಣ ಮನೆಯಲ್ಲಿ 8ರಿಂದ 10 ಜನರು ವಾಸಿಸುತ್ತಿರುವುದನ್ನು ನೋಡಿತು. ಒಂದು ಬಾಡಿಗೆ ಮನೆಯಲ್ಲಿ ಮೂರು ಕುಟುಂಬ ವಾಸಿಸುತ್ತಿರುವುದನ್ನು ಗಮನಿಸಿತು. ಅವರಿಗಾಗಿ ಮನೆ ನಿರ್ಮಿಸಲು ಸ್ಥಳದಲ್ಲಿಯೇ ಐದು ಎಕರೆ ಜಮೀನು ಮಂಜೂರು ಮಾಡಲಾಯಿತು. ಇದರಿಂದಾಗಿ 400 ಕುಟುಂಬಗಳಿಗೆ 20*30 ನಿವೇಶನ ದೊರೆಯಲಿದೆ. ಆಶ್ರಯ ಯೋಜನೆಯಡಿ ಮನೆ ನಿರ್ಮಿಸಿಕೊಡಲಾಗುವುದು ಎಂದು ಅವರು ತಿಳಿಸಿದರು.

ಅಶೋಕ್ ಗ್ರಾಮವಾಸ್ತವ್ಯ ಸಂದರ್ಭದಲ್ಲಿ 8ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ಶ್ರವಣದೋಷವುಳ್ಳ ಯುವತಿಯೊಬ್ಬಳನ್ನು ಪರೀಕ್ಷಿಸಿ, ಸಾಧನಗಳನ್ನು ಒದಗಿಸಲಾಯಿತು. ಸ್ಮಶಾನದ ಅತಿಕ್ರಮದ ದೂರು ಬಂದಿದ್ದು, ಅತಿಕ್ರಮವನ್ನು ತೆರವುಗೊಳಿಸುವಂತೆ ಅಶೋಕ್ ಹೇಳಿದರು.

700 ಜನರಿಗೆ ಖಾತಾದಂತಹ ಜಮೀನಿಗೆ ಸಂಬಂಧಿಸಿದ ದಾಖಲೆಗಳನ್ನು ನೀಡಲಾಯಿತು ಎಂದು ಹೇಳಿದ ಅಶೋಕ್, ಪ್ರತಿ ತಿಂಗಳು ಇದನ್ನು ನಾವು ಮಾಡುತ್ತೇವೆ. ನಾನು ಕೂಡಾ ಹಳ್ಳಿಗಳಿಗೆ ಭೇಟಿ ನೀಡುತ್ತೇನೆ. ಈ ಬಾರಿ ಬೆಂಗಳೂರು ಗ್ರಾಮಾಂತರ ವಲಯವನ್ನು ಆಯ್ಕೆ ಮಾಡಿಕೊಂಡಿರುವುದಾಗಿ ಅವರು ತಿಳಿಸಿದರು.

ಮುಂದಿನ ತಿಂಗಳು ಕಲ್ಯಾಣ ಕರ್ನಾಟಕ ಮತ್ತು ಏಪ್ರಿಲ್ ನಲ್ಲಿ ಮಲೆನಾಡು , ಇದೇ ರೀತಿಯಲ್ಲಿ ಇಡೀ ರಾಜ್ಯದಲ್ಲಿ ಗ್ರಾಮ ವಾಸ್ತವ್ಯ ಹೂಡಿ ಅಲ್ಲಿನ ಸಮಸ್ಯೆಗಳನ್ನು ಪರಿಹರಿಸಲು ಯತ್ನಿಸಲಾಗುವುದು, ಜಿಲ್ಲಾಧಿಕಾರಿಗಳು ಮತ್ತು ಅಧಿಕಾರಿಗಳು ತಾವು ತಂಗುವ ಪ್ರದೇಶಗಳ ಬಗ್ಗೆ ಒಂದು ತಿಂಗಳ ಮುಂಚಿತವಾಗಿ ಮಾಹಿತಿ ನೀಡಬೇಕು ಎಂದು ಅಶೋಕ್ ಹೇಳಿದರು.


Stay up to date on all the latest ರಾಜ್ಯ news
Poll
Yediyurappa

ಯಡಿಯೂರಪ್ಪ ಅವರು ಕರ್ನಾಟಕದ ಮುಖ್ಯಮಂತ್ರಿಯಾಗಿ ತಮ್ಮ ಅವಧಿಯನ್ನು ಪೂರ್ಣಗೊಳಿಸಲು ಸಾಧ್ಯವಾಗುವುದೇ?


Result
ಹೌದು
ಇಲ್ಲ
flipboard facebook twitter whatsapp