ಬೆಳ್ಳಂದೂರು ಅಪಾರ್ಟ್‌ಮೆಂಟ್‌ನಲ್ಲಿ 10 ಹೊಸ ಕೋವಿಡ್‌ ಪ್ರಕರಣ ವರದಿ

ಬೆಳ್ಳಂದೂರು ವಾರ್ಡ್‌ನ ಅಂಬಲಿಪುರದ ಎಸ್‌ಜೆಆರ್‌ ವಾಟರ್‌ಮಾರ್ಕ್ ಅಪಾರ್ಟ್‌ಮೆಂಟ್‌ನಲ್ಲಿ ಫೆ. 15ರಿಂದ 22ರ ನಡುವೆ 10 ಹೊಸ ಕೋವಿಡ್‌ ಪ್ರಕರಣಗಳ ವರದಿಯಾಗಿವೆ.

Published: 22nd February 2021 09:33 PM  |   Last Updated: 23rd February 2021 03:00 PM   |  A+A-


ಸಂಗ್ರಹ ಚಿತ್ರ

Posted By : Raghavendra Adiga
Source : UNI

ಬೆಂಗಳೂರು: ಬೆಳ್ಳಂದೂರು ವಾರ್ಡ್‌ನ ಅಂಬಲಿಪುರದ ಎಸ್‌ಜೆಆರ್‌ ವಾಟರ್‌ಮಾರ್ಕ್ ಅಪಾರ್ಟ್‌ಮೆಂಟ್‌ನಲ್ಲಿ ಫೆ. 15ರಿಂದ 22ರ ನಡುವೆ 10 ಹೊಸ ಕೋವಿಡ್‌ ಪ್ರಕರಣಗಳ ವರದಿಯಾಗಿವೆ.

ಅಪಾರ್ಟ್‌ಮೆಂಟ್‌ನಲ್ಲಿ ಒಟ್ಟು 9 ಬ್ಲಾಕ್‌ಗಳಿದ್ದು, 1500 ಜನಸಂಖ್ಯೆಯಿದೆ. ಈ ಪೈಕಿ 6 ಬ್ಲಾಕ್‌ಗಳಲ್ಲಿ ಪ್ರಕರಣಗಳು ವರದಿಯಾಗಿವೆ. ಉಳಿದ ಮೂರು ಬ್ಲಾಕ್‌ಗಳು ಸೋಂಕು ಪತ್ತೆಯಾದ ಪ್ರಕರಣದ ಬ್ಲಾಕ್‌ಗಳಿಂದ ಕೇವಲ 20 ಮೀಟರ್ ದೂರದಲ್ಲಿವೆ ಎಂದು ಬಿಬಿಎಂಪಿ ಆಯುಕ್ತ ಮಂಜುನಾಥ ಪ್ರಸಾದ್‌ ತಿಳಿಸಿದ್ದಾರೆ.

ಈ ಸ್ಥಳದಲ್ಲಿ ಪರಿಶೀಲನೆ ನಡೆಸಲು ಮಹದೇವಪುರದ ಆರೋಗ್ಯ ಅಧಿಕಾರಿ 9 ಮೊಬೈಲ್‌ ತಂಡಗಳನ್ನು ನಿಯೋಜಿಸಿದ್ದು, 500 ಜನರ ಆರ್‌ಟಿ-ಪಿಸಿಆರ್ ಮಾದರಿಗಳನ್ನು ಪ್ರಯೋಗಾಲಯಗಳಿಗೆ ಕಳುಹಿಸಲಾಗಿದೆ. ಫಲಿತಾಂಶಗಳನ್ನು ನಿರೀಕ್ಷಿಸಲಾಗಿದೆ. 

ಇದಕ್ಕೆ ಮುನ್ನ 103 ಜನರು ಸೋಂಕಿಗೆ ಒಳಗಾದ ನಂತರ ಬೆಂಗಳೂರಿನ ಅಪಾರ್ಟ್‌ಮೆಂಟ್ ಒಂದು ಕೋವಿಡ್ ಹಾಟ್ ಸ್ಫಾಟ್ ಆಗಿ ಮಾರ್ಪಟ್ಟಿದೆ. ಅವರಲ್ಲಿ ಹೆಚ್ಚಿನವರು ಯುವಕರು ಮತ್ತು ರೋಗಲಕ್ಷಣಗಳಿಲ್ಲದ ಕಾರಣ ಅವರು ಮನೆಯಲ್ಲೇ ಇದ್ದರೆಂದು ವರದಿ ಹೇಳಿದೆ.

Stay up to date on all the latest ರಾಜ್ಯ news
Poll
Second phase election for urban local bodies on May 29

ಪುದುಚೇರಿ ಮತ್ತು ಮಧ್ಯಪ್ರದೇಶದಲ್ಲಿ ಚುನಾಯಿತ ಸರ್ಕಾರಗಳು ಪತನಗೊಂಡ ಉದಾಹರಣೆ ನೋಡಿದರೆ, ಚುನಾವಣೆಗಳು ಕೇವಲ ಹಳೇಯ ಪ್ರಜಾಪ್ರಭುತ್ವದ ಸಂಕೇತಗಳಾಗಿವೆಯೇ?


Result
ಹೌದು
ಇಲ್ಲ
flipboard facebook twitter whatsapp