ಹೆಚ್ಚುತ್ತಿರುವ ಕೊರೋನ ಸೋಂಕು, ಮದುವೆಗಳಿಗೆ ಮಾರ್ಷಲ್ ಕಾವಲು: ಸಚಿವ ಡಾ. ಸುಧಾಕರ್

ನೆರೆಯ ಕೇರಳ, ಮಹಾರಾಷ್ಟ್ರ ದಲ್ಲಿ ಕೊರೋನ ಸೋಂಕು ಹೆಚ್ಚಾಗುತ್ತಿರುವ ಹಿನ್ನಲೆಯಲ್ಲಿ ಇನ್ನು ಮದುವೆ ಸಮಾರಂಭಗಳಿಗೆ ಮಾರ್ಷಲ್ ಕಾವಲು ಹಾಕುವುದಾಗಿ ಆರೋಗ್ಯ ಸಚಿವ ಡಾ.ಸುಧಾಕರ್ ಹೇಳಿದ್ದಾರೆ.

Published: 22nd February 2021 02:14 PM  |   Last Updated: 22nd February 2021 04:15 PM   |  A+A-


sudhakar

ಸುಧಾಕರ್

Posted By : Manjula VN
Source : The New Indian Express

ಬೆಂಗಳೂರು: ನೆರೆಯ ಕೇರಳ, ಮಹಾರಾಷ್ಟ್ರ ದಲ್ಲಿ ಕೊರೋನ ಸೋಂಕು ಹೆಚ್ಚಾಗುತ್ತಿರುವ ಹಿನ್ನಲೆಯಲ್ಲಿ ಇನ್ನು ಮದುವೆ ಸಮಾರಂಭಗಳಿಗೆ ಮಾರ್ಷಲ್ ಕಾವಲು ಹಾಕುವುದಾಗಿ ಆರೋಗ್ಯ ಸಚಿವ ಡಾ.ಸುಧಾಕರ್ ಹೇಳಿದ್ದಾರೆ.

ವಿಧಾನಸೌಧದಲ್ಲಿಂದು ಸುದ್ದಿಗಾರರ ಜೊತೆ ಮಾತನಾಡಿದ ಸಚಿವ ಸುಧಾಕರ್, ರಾಜ್ಯ ಕೋವಿಡ್ ಲಸಿಕೆಯಲ್ಲಿ ಇದುವರೆಗೂ ಶೇ 52 ರಷ್ಟು ಸಾಧನೆ ಮಾಡಿದ್ದು, ಇದೇ 28 ರೊಳಗೆ ಶೇ.90 ರಷ್ಟು ಗುರಿ ಸಾಧಿಸುವಂತೆ ಅಧಿಕಾರಿಗಳಿಗೆ ತಾಕೀತು ಮಾಡಲಾಗಿದೆ ಎಂದು ಹೇಳಿದ್ದಾರೆ.

ಎಲ್ಲಾ ಡಿಸಿ, ಎಸ್ ಪಿ, ಜಿಲ್ಲಾ ಆರೋಗ್ಯಾಧಿಕಾರಿಗಳು, ಎಲ್ಲಾ ವೈದ್ಯಕೀಯ ಕಾಲೇಜು ಮುಖ್ಯಸ್ಥರೊಂದಿಗೆ ಸಂವಾದ ನಡೆಸಲಾಯಿತು. ಗಡಿಯಲ್ಲಿ ತಪಾಸಣೆ ಹೇಗಿದೆ? ಕಠಿಣ ಕ್ರಮಗಳನ್ನು ಕೈಗೊಳ್ಳಲಾಗಿದೆಯೇ ಎಂಬ ಬಗ್ಗೆ ಮಾಹಿತಿ ಪಡೆದಿದ್ದೇನೆ. ಕೊರೋನಾ ವಾರಿಯರ್ಸ್ ಗೆ ಲಸಿಕೆ ನೀಡುವ ಬಗ್ಗೆ ಪ್ರಗತಿ ಪರಿಶೀಲನೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ.

ನೆರೆ ರಾಜ್ಯಗಳ ಜನರು ಇಲ್ಲಿಗೆ ಬರಲು ನಿರ್ಬಂಧ ಹೇರಿಲ್ಲ. ತಪಾಸಣೆ ಮಾತ್ರ ಕಡ್ಡಾಯ ಮಾಡಲಾಗಿದೆ, ಇದಕ್ಕೆ ಜನರು ಸಹಕರಿಸಬೇಕು. ನೆರೆ ರಾಜ್ಯಗಳಲ್ಲಿ ತಪ್ಪು ಸಂದೇಶ ಇದೆ. ಗಡಿ ಜಿಲ್ಲೆಗಳ ಬಗ್ಗೆ ವಿಶೇಷ ನಿಗಾ ಇಡಬೇಕಾಗಿದೆ. ಶೀಘ್ರದಲ್ಲಿ ನೆರೆ ರಾಜ್ಯಗಳ ಆರೋಗ್ಯ ಸಚಿವರೊಂದಿಗೆ ಸಮಾಲೋಚನೆ ಮಾಡಿ ಅಲ್ಲಿನ ಸಹಕಾರ ಕೋರುತ್ತೇವೆ. ಅಲ್ಲಿಂದ ಬರುವವರಿಗೆ ಅಲ್ಲೇ ತಪಾಸಣೆ ಮಾಡಿ ವೈದ್ಯಕೀಯ ವರದಿ ತರುವಂತೆ ಕ್ರಮ ಕೈಗೊಳ್ಳಲು ವ್ಯವಸ್ಥೆ ಮಾಡಲು ಕ್ರಮ ಕೈಗೊಳ್ಳುತ್ತೇವೆ ಎಂದಿದ್ದಾರೆ.

ರಾಜ್ಯಾದ್ಯಂತ ನಿಯಮ ಮೀರಿ ಸಮಾರಂಭಗಳು ನಡೆಯುತ್ತಿವೆ. ಕಟ್ಟುನಿಟ್ಟಿನ ಕ್ರಮ ಅನಿವಾರ್ಯವಾಗಿದೆ. ಹೀಗಾಗಿ ಜನರು ಸ್ವಯಂ ನಿಯಂತ್ರಣ ಮಾಡಿ ಸಹಕರಿಸದಿದ್ದರೆ ಬಿಗಿ ನಿಲುವು ತೆಗೆದುಕೊಳ್ಳುವುದು ಅನಿವಾರ್ಯವಾಗುತ್ತೆದೆ. ಆ ಪರಿಸ್ಥಿತಿಗೆ ಬರುವಂತೆ ಮಾಡಬೇಡಿ ಎಂದು ಎಚ್ಚರಿಕೆ ನೀಡಿದ್ದಾರೆ.

ಮಹಾರಾಷ್ಠ್ರದ ಕೆಲವು ಜಿಲ್ಲೆಗಳಲ್ಲಿ ಲಾಕ್ ಡೌನ್ ಘೋಷಿಸಿದ್ದಾರೆ. ಆ ಪರಿಸ್ಥಿತಿ ರಾಜ್ಯಕ್ಕೆ ಬರುವುದು ಬೇಡ. ಜನರು ಎಚ್ಚರಿಕೆ ವಹಿಸದೇ ಮದುವೆ ಸಮಾರಂಭಗಳನ್ನು ನಡೆಸುತ್ತಿದ್ದಾರೆ. ಹೀಗಾಗಿ ಮದುವೆ ಸಮಾರಂಭಗಳಿಗೆ ಮಾರ್ಷಲ್ ಗಳನ್ನು ನಿಯೋಜಿಸಲು ತೀರ್ಮಾನ ಮಾಡಿದ್ದೇವೆ. ರಾಜ್ಯಾದ್ಯಂತ ಎಲ್ಲಾ ಮದುವೆ ನಡೆಯುವ ಕಡೆ ಒಬ್ಬ ಮಾರ್ಷಲ್'ರನ್ನು ನಿಯೋಜಿಸಲಾಗುತ್ತದೆ ಎಂದು ಹೇಳಿದ್ದಾರೆ.


Stay up to date on all the latest ರಾಜ್ಯ news
Poll
Rahul gandhi

ಕಾಂಗ್ರೆಸ್‌ನಲ್ಲಿನ ಯುವ, ಕ್ರಿಯಾಶೀಲ ನಾಯಕರಿಂದ ರಾಹುಲ್ ಗಾಂಧಿಗೆ ಅಭದ್ರತೆ ಕಾಡುತ್ತಿದೆಯೇ?


Result
ಹೌದು
ಇಲ್ಲ
flipboard facebook twitter whatsapp