1 ಲಕ್ಷ ಫಲಾನುಭವಿಗಳಿಗೆ 2ನೇ ಡೋಸ್ ಕೋವಿಡ್-19 ಲಸಿಕೆ ಕೊಟ್ಟ ಮೊದಲ ರಾಜ್ಯ ಕರ್ನಾಟಕ
ರಾಜ್ಯ ಸರ್ಕಾರ ಈವರೆಗೆ 1,13,830 ಫಲಾನುಭವಿಗಳಿಗೆ ಎರಡನೇ ಡೋಸ್ ಕೋವಿಡ್ -19 ಲಸಿಕೆಯನ್ನು ನೀಡಿದ್ದು, ಇದರೊಂದಿಗೆ ಒಂದು ಲಕ್ಷಕ್ಕೂ ಹೆಚ್ಚು ಫಲಾನುಭವಿಗಳಿಗೆ 2ನೇ ಡೋಸ್ ಲಸಿಕೆಯನ್ನು ನೀಡಿದ ಮೊದಲ ರಾಜ್ಯ ಎನಿಸಿಕೊಂಂಡಿದೆ.
Published: 22nd February 2021 01:49 PM | Last Updated: 22nd February 2021 01:49 PM | A+A A-

ಸಂಗ್ರಹ ಚಿತ್ರ
ಬೆಂಗಳೂರು: ರಾಜ್ಯ ಸರ್ಕಾರ ಈವರೆಗೆ 1,13,830 ಫಲಾನುಭವಿಗಳಿಗೆ ಎರಡನೇ ಡೋಸ್ ಕೋವಿಡ್ -19 ಲಸಿಕೆಯನ್ನು ನೀಡಿದ್ದು, ಇದರೊಂದಿಗೆ ಒಂದು ಲಕ್ಷಕ್ಕೂ ಹೆಚ್ಚು ಫಲಾನುಭವಿಗಳಿಗೆ 2ನೇ ಡೋಸ್ ಲಸಿಕೆಯನ್ನು ನೀಡಿದ ಮೊದಲ ರಾಜ್ಯ ಎನಿಸಿಕೊಂಂಡಿದೆ.
ಫೆಬ್ರವರಿ 21ವರೆಗೂ ಒಟ್ಟಾರೆ 8,21,939 ಆರೋಗ್ಯ ಕಾರ್ಯಕರ್ತರು ಮತ್ತು 2,84,950 ಮುಂಚೂಣಿ ಕಾರ್ಯಕರ್ತರು ಲಸಿಕೆ ಪಡೆಯಲು ತಮ್ಮ ಹೆಸರುಗಳನ್ನು ನೋಂದಾಯಿಸಿಕೊಂಡಿದ್ದರು. ಈ ವರೆಗೂ 4,24,491 (ಶೇ.52) ಫಲಾನುಭವಿಗಳು ಮಾತ್ರ 1ನೇ ಡೋಸ್ ಲಸಿಕೆ ಪಡೆದುಕೊಂಡಿದ್ದರೆ, 2ನೇ ಡೋಸ್ ಲಸಿಕೆಯನ್ನು 1,13,380 (ಶೇ.42) ಮಂದಿ ಪಡೆದುಕೊಂಡಿದ್ದಾರೆಂದು ತಿಳಿದುಬಂದಿದೆ.
ಮೊದಲ ಹಂತದ ಲಸಿಕೆ ವಿತರಣೆಯಲ್ಲಿ ಕೋವಿನ್ ಪೋರ್ಟಲ್ ನಲ್ಲಿ ತಾಂತ್ರಿಕ ಸಮಸ್ಯೆಗಳು ಉಂಟಾದ ಕಾರಣ ಹಲವರು ಲಸಿಕೆ ಪಡೆಯಲು ಸಾಧ್ಯವಾಗಿರಲಿಲ್ಲ. ಮೊದಲನೇ ಬಾರಿ ಲಸಿಕೆ ಪಡೆದ ಬಹುತೇಕ ಮಂದಿ 2ನೇ ಡೋಸ್ ಲಸಿಕೆಯನ್ನು ಪಡೆದುಕೊಂಡಿದ್ದಾರೆಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಲಸಿಕೆ ಪಡೆದ ಹಲವು ಆರೋಗ್ಯ ಕಾರ್ಯಕರ್ತರ ಪೈಕಿ ರಾಜ್ಯದಲ್ಲಿ ಈ ವರೆಗೂ 20 ಗಂಭೀರ ಪ್ರಕರಣಗಳು ವರದಿಯಾಗಿವೆ.
2ನೇ ಡೋಸ್ ಲಸಿಕೆಯನ್ನು ಶೇ.100ರಷ್ಟು ಜನರು ಪಡೆದುಕೊಂಡಿಲ್ಲ. ಆದರೆ, ಉತ್ತಮ ಪ್ರತಿಕ್ರಿಯೆಗಳು ನಿಧಾನಗತಿಯಲ್ಲಿ ಬರುತ್ತಿವೆ. 2ನೇ ಡೋಸ್ ಲಸಿಕೆ ಅತ್ಯಂತ ಮುಖ್ಯ ಎಂಬುದನ್ನು ಸಾಕಷ್ಟು ಜನರು ತಿಳಿದುಕೊಂಡಿದ್ದಾರೆ. ಇದರಿಂದ ಲಸಿಕೆ ವಿತರಣೆ ಯಶಸ್ವಿಯಾಗಿ ಸಾಗುತ್ತಿದೆ. 2ನೇ ಡೋಸ್ ಲಸಿಕೆ ಪಡೆದುಕೊಂಡವರಲ್ಲಿ ಯಾವುದೇ ರೀತಿಯ ಅಡ್ಡ ಪರಿಣಾಮಗಳು ಕಂಡು ಬಂದಿಲ್ಲ. ಹೀಗಾಗಿ ಲಸಿಕೆ ಪಡೆದುಕೊಳ್ಳುವಂತೆ ಜನರಿಗೆ ಸಲಹೆಗಳನ್ನು ನೀಡುತ್ತಿದ್ದೇವೆಂದು ಕೆಸಿ ಜನರಲ್ ಆಸ್ಪತ್ರೆಯ ವೈದ್ಯ ಬಿ.ಆರ್.ವೆಂಕಟೇಶಯ್ಯ ಅವರು ಹೇಳಿದ್ದಾರೆ.
5,000ಕ್ಕಿಂತ ಹೆಚ್ಚು ಫಲಾನುಭವಿಗಳಿಗೆ ಲಸಿಕೆ ನೀಡಿದ ಜಿಲ್ಲೆಗಳೆಂದರೆ...
- ತುಮಕುರು 10,898
- ಬೆಂಗಳೂರು ನಗರ 10,777
- ಬೆಳಗಾವಿ 10,036
- ಮೈಸೂರು 5,555
- ಉತ್ತರ ಕನ್ನಡ 5041
ಶೇಕಡಾ 70 ಕ್ಕಿಂತ ಹೆಚ್ಚು ಮಂದಿಗೆ ಲಸಿಕೆ ನೀಡಿದ ಜಿಲ್ಲೆಗಳೆಂದರೆ...
- ಚಿಕ್ಕಬಳ್ಳಾಪುರ (79%)
- ತುಮಕುರು (78%)
- ಉತ್ತರ ಕನ್ನಡ (73%
- ಗದಗ ಮತ್ತು ಮಂಡ್ಯ (71%)
- ಚಾಮರಾಜನಗರ ಮತ್ತು ಚಿಕ್ಕಮಗಳೂರು (70%).