ಕಳ್ಳ ಸಾಗಣೆ ಮಾಡುತ್ತಿದ್ದ 31 ಲಕ್ಷ ರು. ಮೌಲ್ಯದ ಚಿನ್ನ ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಜಪ್ತಿ

ಕಳೆದ ವಾರಾಂತ್ಯದಲ್ಲಿ ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್ ಅಧಿಕಾರಿಗಳು 31 ಲಕ್ಷ ರು. ಮೌಲ್ಯದ 686 ಗ್ರಾಂ ಚಿನ್ನಾಭರಣ ವಶಪಡಿಸಿಕೊಂಡಿದ್ದಾರೆ.

Published: 22nd February 2021 01:38 PM  |   Last Updated: 22nd February 2021 05:59 PM   |  A+A-


Representational  image

ಸಾಂದರ್ಭಿಕ ಚಿತ್ರ

Posted By : Shilpa D
Source : The New Indian Express

ಬೆಂಗಳೂರು: ಕಳೆದ ವಾರಾಂತ್ಯದಲ್ಲಿ ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್ ಅಧಿಕಾರಿಗಳು 31 ಲಕ್ಷ ರು. ಮೌಲ್ಯದ 686 ಗ್ರಾಂ ಚಿನ್ನಾಭರಣ ವಶಪಡಿಸಿಕೊಂಡಿದ್ದಾರೆ.

ಭಾನುವಾರ ಮಧ್ಯಾಹ್ನ ಬೆಂಗಳೂರು-ದುಬೈ ವಿಮಾನದಲ್ಲಿ ಇಬ್ಬರು ಪ್ರಯಾಣಿಕರು ತಮ್ಮ ಬಟ್ಟೆಯೊಳಗೆ ಚಿನ್ನವನ್ನು ಮರೆಮಾಚಿದ್ದರು. ಈ ವಾರದಲ್ಲಿ ಇದು ಎರಡನೇ ಬಾರಿ ಚಿನ್ನ ಕಳ್ಳ ಸಾಗಣೆ ಮಾಡುತ್ತಿದ್ದ ಪ್ರಕರಣ ಎಂದು ಹಿರಿಯ ಕಸ್ಟಮ್ಸ್ ಅಧಿಕಾರಿಗಳು ತಿಳಿಸಿದ್ದಾರೆ.

ಇಂಡಿಗೋ 6ಇ 096 ವಿಮಾನ ದಲ್ಲಿ  12.04 ಸುಮಾರಿಗೆ ಕೆಂಪೇಗೌಡ ಅಂತರಾಷ್ಚ್ರೀಯ ವಿಮಾನ ನಿಲ್ದಾಣ ತಲುಪಿತ್ತು,  ಈ ವಿಮಾನದಲ್ಲಿ ಚಿನ್ನದ ತುಂಡನ್ನು ಸುತ್ತಿ ಪ್ಲಾಸ್ಟಿಕ್ ಕವರ್ ನಲ್ಲಿಡಲಾಗಿತ್ತು. ಅಧಿಕಾರಿಗಳು ಇದನ್ನು ಪತ್ತೆ ಹಚ್ಚಿದ್ದು ಸುಮಾರು 495. 98ಗ್ರಾಂ ಇದ್ದು 22 ಲಕ್ಷ ರು ಮೌಲ್ಯದ್ದಾಗಿದೆ.

ಫೆಬ್ರವರಿ 17 ರಂದು ಫುಟ್ ಬಾಲ್ ಆಟಿಕೆ ಸಾಮಾನಿನಲ್ಲಿ  ಇಟ್ಟು ಸಾಗಿಸುತ್ತಿದ್ದ 233 ಗ್ರಾಂ ಚಿನ್ನ ಪತ್ತೆಯಾಗಿದೆ.

ಇನ್ನು ಶನಿವಾರ ಕೂಡ ಇಬ್ಬರು ಪ್ರಯಾಣಿಕರು ಚಿನ್ನವನ್ನು  ಪೇಸ್ಟ್ ರೂಪದಲ್ಲಿ ಕದ್ದು ಸಾಗಿಸುತ್ತಿದ್ದರು, ಅವರು ಧರಿಸಿದ್ದ ಜೀನ್ಸ್ ಪ್ಯಾಂಟ್ ನ ಸೊಂಟದ ಬಳಿ ಚಿನ್ನವನ್ನಿಟ್ಟು ಹೊಲಿದು ಮುಚ್ಚಲಾಗಿತ್ತು, ಅವರು ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ 12.30ರ ಸುಮಾರಿಗೆ ತಲುಪಿದ್ದರು, FZ 4007 ವಿಮಾನಗಲ್ಲಿ  ದುಬೈ ಗೆ ತೆರಳುತ್ತಿದ್ದರು. 

ತಮಿಳುನಾಡು ಮೂಲದ ಇಬ್ಬರು ವ್ಯಕ್ತಿಗಳಾಗಿದ್ದು ಒಬ್ಬ ತಂಜಾವೂರು ಮತ್ತು ತಿರುಚನಾಪಳ್ಳಿಯವರು ಎಂದು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ. ಇಬ್ಬರು ಪ್ರಯಾಣಿಕರು ಪ್ರತ್ಯೆಕವಾಗಿ ಒಬ್ಬ 95,29 ಗ್ರಾಂ ಹಮತ್ತೊಬ್ಬ 94,27 ಗ್ರಾಂ ಚಿನ್ನ ಸಾಗಿಸುತ್ತಿದ್ದರು.

ಕಳೆದ ತಿಂಗಳಲ್ಲಿ ದುಬೈನಿಂದ ಚಿನ್ನ ಮತ್ತು ಸಿಗರೇಟ್ ಕಳ್ಳಸಾಗಣೆ ಘಟನೆಗಳು ವರದಿಯಾಗಿವೆ  . ಫೆಬ್ರವರಿ 11 ರಂದು ಪ್ರಯಾಣಿಕರೊಬ್ಬರು 1.3 ಕೆಜಿ ಚಿನ್ನವನ್ನು (62 ಲಕ್ಷ ರೂ.ಗಿಂತ ಹೆಚ್ಚು ಮೌಲ್ಯದ) ಕಳ್ಳಸಾಗಣೆ ಮಾಡಲು ಪ್ರಯತ್ನಿಸುತ್ತಿದ್ದಾಗ ಪತ್ತೆ ಹಚ್ಚಿ ವಶ ಪಡಿಸಿಕೊಳ್ಳಲಾಗಿತ್ತು.
 

Stay up to date on all the latest ರಾಜ್ಯ news
Poll
Kumbh-Covid-19

ಚುನಾವಣಾ ಸಮಾವೇಶ, ಕುಂಭಮೇಳ, ಧಾರ್ಮಿಕ ಸಭೆಗಳು ದೇಶದಲ್ಲಿ ಕೋವಿಡ್-19 ಪರಿಸ್ಥಿತಿಯನ್ನು ಹದಗೆಡಿಸುತ್ತಿವೆಯೇ?


Result
ಹೌದು, ಅದು ನಿಜ.
ಇಲ್ಲ, ಖಂಡಿತ ಅಲ್ಲ.
flipboard facebook twitter whatsapp