ಮೈಸೂರು: ಬೋಧಕ, ವಿದ್ಯಾರ್ಥಿ ಕೌಶಲ್ಯ ಅಭಿವೃದ್ಧಿಗೆ ಟೊಯೋಟಾ ಎಟಿಎಂಇ- ಎಂಜಿನಿಯರಿಂಗ್ ಕಾಲೇಜ್ ಒಪ್ಪಂದ

ಸ್ಕಿಲ್ ಇಂಡಿಯಾ ಮಿಷನ್ ಗೆ ಕೊಡುಗೆ ನೀಡಲು ಬದ್ಧತೆ ಹೊಂದಿರುವ ಟೊಯೋಟಾ ಕಿರ್ಲೋಸ್ಕರ್ ಮೋಟಾರ್ (ಟಿಕೆಎಂ) ಮೈಸೂರಿನ ಎಟಿಎಂಇ ಎಂಜಿನಿಯರಿಂಗ್ ಕಾಲೇಜ್ (ಎಟಿಎಂಇಸಿಇ) ಜತೆ ಒಪ್ಪಂದಕ್ಕೆ ಮುಂದಾಗಿದೆ. 

Published: 22nd February 2021 06:50 PM  |   Last Updated: 22nd February 2021 07:35 PM   |  A+A-


Toyota signs MoU with ATME College of Engineering for Faculty and Student Skill Development

ಟೊಯೋಟಾ ಎಟಿಎಂಇ-ಎಂಜಿನಿಯರಿಂಗ್ ಕಾಲೇಜ್ ಒಪ್ಪಂದ

Posted By : Srinivas Rao BV
Source : Online Desk

ಬೆಂಗಳೂರು: ಸ್ಕಿಲ್ ಇಂಡಿಯಾ ಮಿಷನ್ ಗೆ ಕೊಡುಗೆ ನೀಡಲು ಬದ್ಧತೆ ಹೊಂದಿರುವ ಟೊಯೋಟಾ ಕಿರ್ಲೋಸ್ಕರ್ ಮೋಟಾರ್ (ಟಿಕೆಎಂ) ಮೈಸೂರಿನ ಎಟಿಎಂಇ ಎಂಜಿನಿಯರಿಂಗ್ ಕಾಲೇಜ್ (ಎಟಿಎಂಇಸಿಇ) ಜತೆ ಒಪ್ಪಂದಕ್ಕೆ ಮುಂದಾಗಿದೆ. 

ಟಿಕೆಎಂ ತನ್ನ ತರಬೇತಿ ಸಂಸ್ಥೆಯಾದ ಟೊಯೋಟಾ ಲರ್ನಿಂಗ್ & ಡೆವಲಪ್ ಮೆಂಟ್ ಇಂಡಿಯಾ ಮೂಲಕ ATMECE ನೊಂದಿಗೆ ಸಹಭಾಗಿತ್ವವನ್ನು ಆರಂಭಿಸಿದೆ. ಟೊಯೊಟಾದ ಅತ್ಯುತ್ತಮ ಅಭ್ಯಾಸಗಳನ್ನು ಬೋಧಕರೊಂದಿಗೆ ಹಂಚಿಕೊಳ್ಳುವ, ಉದ್ಯಮ-ಶೈಕ್ಷಣಿಕ ಅಂತರವನ್ನು ಸರಿದೂಗಿಸುವುದು ಮತ್ತು ವಿದ್ಯಾರ್ಥಿಗಳಿಗೆ ಉದ್ಯೋಗಕೌಶಲ್ಯಗಳನ್ನು ಸಜ್ಜುಗೊಳಿಸುವುದರತ್ತ ಗಮನ ಹರಿಸುವುದು ಈ ಒಪ್ಪಂದದ ಉದ್ದೇಶವಾಗಿದೆ. 

ಸದಾ ವಿಕಸನಗೊಳ್ಳುತ್ತಿರುವ ಅಗತ್ಯಗಳಲ್ಲಿ, ಉದ್ಯೋಗಿಗಳು ಸೇರಿದಂತೆ ಎಲ್ಲಾ ಪಾಲುದಾರರಿಗೆ ತಮ್ಮ ಪೂರ್ಣ ಸಾಮರ್ಥ್ಯವನ್ನು ಸಾಧಿಸಲು ನೆರವಾಗುವಂತೆ ಟಿಕೆಎಂ 'ಜೀವಮಾನದ ಕಲಿಕೆ' ಒದಗಿಸುವಲ್ಲಿ ಮುಂಚೂಣಿಯಲ್ಲಿದೆ. 

ಜನರು ಟೊಯೋಟಾದ ಅತ್ಯಂತ ಪ್ರಮುಖ ಆಸ್ತಿ, ಆದ್ದರಿಂದ ಅಭಿವೃದ್ಧಿಹೊಂದಿದ ಜನರು ಕಂಪನಿಯ ನಂಬಿಕೆಗಳಲ್ಲಿ ಒಂದು ಪ್ರಮುಖ ಅಂಶವಾಗಿದೆ. 'ಟೊಯೋಟಾ ವೇ' ಪ್ರತಿವ್ಯಕ್ತಿಯ ಕೌಶಲ್ಯಗಳನ್ನು ಹರಿತಗೊಳಿಸುವ ಮೂಲಕ ಮತ್ತು ನವೀನ ಚಿಂತನೆಗಳೆರಡನ್ನೂ ಪ್ರೋತ್ಸಾಹಿಸುವ ಮೂಲಕ ಸುಧಾರಣೆಯ ಅನ್ವೇಷಣೆಯನ್ನು ಮುಂದುವರಿಸುವುದರತ್ತ ಗಮನ ಹರಿಸುತ್ತದೆ.

ಈ ಒಪ್ಪಂದದ ಬಗ್ಗೆ ಮಾತನಾಡಿದ ಎಟಿಎಂಇಸಿಇಯ ಪ್ರಾಂಶುಪಾಲ ಡಾ.ಬಸವರಾಜ್ ಎಲ್, ಟೊಯೊಟಾ ಕಿರ್ಲೋಸ್ಕರ್ ಮೋಟಾರ್ ಜತೆ ಕೈಜೋಡಿಸಿರುವುದು ಸಂತಸ ತಂದಿದೆ. ಶೈಕ್ಷಣಿಕ, ಸಾಂಸ್ಕೃತಿಕ ಮತ್ತು ಕ್ರೀಡಾ ಉತ್ಕೃಷ್ಟತೆಯ ಮೂಲಕ ನಮ್ಮ ವಿದ್ಯಾರ್ಥಿಗಳನ್ನು ಉತ್ತಮ ಭವಿಷ್ಯರೂಪಿಸುವ ಗುರಿ ಹೊಂದಿದ್ದೇವೆ. ಇದು ಉದ್ಯಮ ಮತ್ತು ಅಕಾಡೆಮಿಗಳು ಒಟ್ಟಾಗಿ ಕೆಲಸ ಮಾಡುವ ಮತ್ತು ಆರ್ಥಿಕ ಪ್ರಗತಿಗೆ ಅಡಿಪಾಯ ಹಾಕುವಂತಹ ವಾತಾವರಣವನ್ನು ಸೃಷ್ಟಿಸುವ ಸಮಯವಾಗಿದೆ. ನಾವು ಒಟ್ಟಿಗೆ, ನಿರಂತರವಾಗಿ ಕಲಿಯುವ, ಕೌಶಲ್ಯ, ಜ್ಞಾನವನ್ನು ಹಂಚಿಕೊಳ್ಳುವ ಮತ್ತು ಅಪೇಕ್ಷಿತ ಕೌಶಲ್ಯಗಳು ಮತ್ತು ಸಾಮರ್ಥ್ಯಗಳೊಂದಿಗೆ ಉದ್ಯಮ-ಸಿದ್ಧ ತಂತ್ರಜ್ಞರಾಗಿ ಪರಿವರ್ತಿಸುವ ಉತ್ಸಾಹದೊಂದಿಗೆ ಯುವ ವಿದ್ಯಾರ್ಥಿಗಳ ಸಾಮರ್ಥ್ಯ ಮತ್ತು ಭವಿಷ್ಯವನ್ನು ನಾವು ಹೆಚ್ಚಿಸಬಹುದು ಎಂದರು.

"ಈ ಕೋರ್ಸ್ ಟೊಯೋಟಾದ ಕೌಶಲ್ಯ ಅಭ್ಯಾಸಗಳಿಗೆ 90 ಪ್ರತಿಶತ ಪ್ರಾಯೋಗಿಕ ಮತ್ತು ಥಿಯರಿ ಅಂಶಗಳಿಗೆ 10 ಪ್ರತಿಶತ ಆದ್ಯತೆಯನ್ನು ಒಳಗೊಂಡಿದೆ. ಈ ಕಾರ್ಯಕ್ರಮದಡಿ ಒಟ್ಟು 180 ಗಂಟೆಗಳ ಪಠ್ಯಕ್ರಮ ವನ್ನು ರೂಪಿಸಲಾಗಿದ್ದು, ಅದರಲ್ಲಿ 110 ಗಂಟೆಗಳನ್ನು ಟಿಕೆಎಂ ನ ಫ್ಯಾಕ್ಟರಿ ಆವರಣದಲ್ಲಿ ಮತ್ತು 70 ಗಂಟೆಗಳು ಕಾಲೇಜಿನಲ್ಲಿ ಪ್ರಸಾರಮಾಡಲಾಗುವುದು" ಎಂದು ಡಾ.ಬಸವರಾಜ್ ತಿಳಿಸಿದರು.

ಸುರಕ್ಷತೆ, ಪರಿಸರ ನಿರ್ವಹಣಾ ವ್ಯವಸ್ಥೆ, ಒಟ್ಟು ಗುಣಮಟ್ಟ ನಿರ್ವಹಣೆ, ಪೂರೈಕೆ ಸರಪಳಿ ನಿರ್ವಹಣೆ, ಆಟೋಮೊಬೈಲ್ ವೆಲ್ಡಿಂಗ್, ಕಾರ್ ಪೇಂಟಿಂಗ್, ಮೆಕಾಟ್ರೊನಿಕ್ಸ್, ಆಟೋಮೇಷನ್ ಮತ್ತು ರೊಬೊಟಿಕ್ಸ್ ಇತ್ಯಾದಿಗಳಲ್ಲಿ ತರಬೇತಿ ನೀಡಲಾಗುತ್ತದೆ.

Stay up to date on all the latest ರಾಜ್ಯ news
Poll
The grand Central Vista project is estimated to cost `20,000 crore

ಕೋವಿಡ್ ಬಿಕ್ಕಟ್ಟಿನ ದೃಷ್ಟಿಯಿಂದ ಪ್ರಧಾನಿ ಮೋದಿ ಸೆಂಟ್ರಲ್ ವಿಸ್ಟಾ ಯೋಜನೆಯನ್ನು ತಡೆಹಿಡಿಯಬೇಕೇ?


Result
ಹೌದು
ಬೇಡ
flipboard facebook twitter whatsapp