2ಎ ಯಥಾಸ್ಥಿತಿಗೆ ಆಗ್ರಹ: ಭಟ್ಕಳದಲ್ಲಿ ಬೃಹತ್ ಪ್ರತಿಭಟನೆ
ಸರ್ಕಾರ ದಿಟ್ಟತನ ಪ್ರದರ್ಶಿಸುವ ಮೂಲಕ 2ಎ ಮೀಸಲಾತಿಯಲ್ಲಿ ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ಆಗ್ರಹಿಸಿ 2ಎ ಹಿತರಕ್ಷಣಾ ವೇದಿಕೆಯಿಂದ ಸೋಮವಾರ ಪಟ್ಟಣದಲ್ಲಿ ಬೃಹತ್ ಪ್ರತಿಭಟನಾ ಸಮಾವೇಶ ನಡೆಯಿತು.
Published: 23rd February 2021 11:37 AM | Last Updated: 23rd February 2021 12:01 PM | A+A A-

ಭಟ್ಕಳದಲ್ಲಿ ಪ್ರತಿಭಟನೆ ನಡೆಸುತ್ತಿರುವ ಜನರು
ಭಟ್ಕಳ: ಸರ್ಕಾರ ದಿಟ್ಟತನ ಪ್ರದರ್ಶಿಸುವ ಮೂಲಕ 2ಎ ಮೀಸಲಾತಿಯಲ್ಲಿ ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ಆಗ್ರಹಿಸಿ 2ಎ ಹಿತರಕ್ಷಣಾ ವೇದಿಕೆಯಿಂದ ಸೋಮವಾರ ಪಟ್ಟಣದಲ್ಲಿ ಬೃಹತ್ ಪ್ರತಿಭಟನಾ ಸಮಾವೇಶ ನಡೆಯಿತು.
ಸಮಾವೇಶದಲ್ಲಿ ಈಡಿಗ ಸಮುದಾಯದ ಉಜಿರೆ ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ, ಶಾಸಕ ಸುನಿಲ ನಾಯ್ಕ್, 22ಕ್ಕೂ 2ಎದಲ್ಲಿ ಬರುವ ಸಮುದಾಯದ ಮುಖಂಡರು ಸೇರಿದಂತೆ 10,000ಕ್ಕೂ ಅಧಿಕ ಮಂದಿ ಭಾಗವಹಿಸಿದ್ದರು.
ಈ ವೇಳೆ ಮಾತನಾಡಿದ ಉಜಿರೆ ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ, ಯಾರೋ ಹೋರಾಟ, ಪಾದಯಾತ್ರೆ ಮಾಡುತ್ತಾರೆಂದು ಮೀಸಲಾತಿ ಕೊಡಲು ಸಾಧ್ಯವೇ? ಮೀಸಲಾತಿಯೆಂದರೆ ಮಕ್ಕಳಾಟವೇ? ಎಂದು ಪ್ರಶ್ನಿಸಿದರು.
ಸರ್ಕಾರ ಎಂದರೆ ರಾಜ ಇದ್ದಂತೆ. ಜನಸಂಖ್ಯೆ ಆಧಾರದಲ್ಲಿ ಓಟಿನ ಲಾಭಕ್ಕೋಸ್ಕರ ಯಾರೋ ಕೇಳಿದರೆಂದು ಮೀಸಲು ಕೊಡುತ್ತೇವೆಂದು ಸುಳ್ಳು ಭರವಸೆ ಕೊಡುವುದು ಸರಿಯಲ್ಲ. ನಾವು ಶಾಂತಿಯುತವಾಗಿ ಪ್ರತಿಭಟನೆ ನಡೆಸುತ್ತಿದ್ದೇನೆ. ಸರ್ಕಾರ ಪಂಚಮಸಾಲಿ ಆಗ್ರಹಗಳನ್ನು ಕೇಳಿದ್ದೇ ಆದರೆ, ನಮ್ಮ ಪ್ರತಿಭಟನೆ ತೀವ್ರಗೊಳ್ಳಲಿದೆ ಎಂದಿದ್ದಾರೆ
ಮೀಸಲಾತಿಯನ್ನು ನಾವು ಎಂದಿಗೂ ಹಂಚಿಕೊಳ್ಳುವುದ್ಲಿಲ್. ನಮ್ಮ ಭವಿಷ್ಯದ ಪೀಳಿಗೆಯ ಜೀವನವನ್ನು ನಾವು ಹಾಳು ಮಾಡುವುದಿಲ್ಲ ಎಂದು ಸಾಸಕ ಸುನಿಲ ನಾಯ್ಕ್ ಹೇಳಿದ್ದಾರೆ.