ಬೆಂಗಳೂರು: ಮಹಿಳೆಯರ ನಗ್ನ ಚಿತ್ರ ವಿಡಿಯೋ, ಟೆಕ್ನಿಶಿಯನ್ ಬಂಧನ

ಆಸ್ಪತ್ರೆಯಲ್ಲಿ ಮಹಿಳೆಯರು ಬಟ್ಟೆ ಬದಲಾಯಿಸುವುದನ್ನು ಮೊಬೈಲ್ ನಲ್ಲಿ ಸೆರೆ ಹಿಡಿದು ವಿಕೃತ ಆನಂದ ಅನುಭವಿಸುತ್ತಿದ್ದ ಲ್ಯಾಬ್ ಟೆಕ್ನಿಶಿಯನ್ ನನ್ನು ತಿಲಕ್ ನಗರ ಪೊಲೀಸರು ಬಂಧಿಸಿದ್ದಾರೆ.

Published: 23rd February 2021 03:58 PM  |   Last Updated: 23rd February 2021 04:49 PM   |  A+A-


Casual_Photo1

ಸಾಂದರ್ಭಿಕ ಚಿತ್ರ

Posted By : Nagaraja AB
Source : Online Desk

ಬೆಂಗಳೂರು: ಆಸ್ಪತ್ರೆಯಲ್ಲಿ ಮಹಿಳೆಯರು ಬಟ್ಟೆ ಬದಲಾಯಿಸುವುದನ್ನು ಮೊಬೈಲ್ ನಲ್ಲಿ ಸೆರೆ ಹಿಡಿದು ವಿಕೃತ ಆನಂದ ಅನುಭವಿಸುತ್ತಿದ್ದ ಲ್ಯಾಬ್ ಟೆಕ್ನಿಶಿಯನ್ ನನ್ನು ತಿಲಕ್ ನಗರ ಪೊಲೀಸರು ಬಂಧಿಸಿದ್ದಾರೆ. ಸರ್ಕಾರಿ ಆಸ್ಪತ್ರೆಯೊಂದರ ವೈದ್ಯೆ ನೀಡಿದ ದೂರಿನ ಮೇರೆಗೆ ಆರೋಪಿ ಲ್ಯಾಬ್ ಟೆಕ್ನಿಷಿಯನ್ ಮಾಲತೇಶ್ ನನ್ನು ಬಂಧಿಸಲಾಗಿದೆ.

ಆಸ್ಪತ್ರೆಯೊಂದರಲ್ಲಿ ಲ್ಯಾಬ್ ಟೆಕ್ನಿಶಿಯನ್ ಆಗಿ ಕೆಲಸ ಮಾಡುತ್ತಿದ್ದ ಮಾಲತೇಶ್ ಹೆಚ್ಚಾಗಿ ಆಪರೇಷನ್ ಥಿಯೇಟರ್ ನಲ್ಲಿ ಇರುತ್ತಿದ್ದ. ಆಪರೇಷನ್ ಮಾಡುವ ಮುನ್ನ ಮಹಿಳಾ ಸಿಬ್ಬಂದಿ ಬಟ್ಟೆ ಬದಲಾಯಿಸುವುದನ್ನೇ ಕಾಯುತ್ತಿದ್ದ. ಬಟ್ಟೆ ಬದಲಿಸಲು ಆಗಮಿಸುತ್ತಿದ್ದ ಆರೋಪಿ ಚಾರ್ಜಿಂಗ್ ನೆಪದಲ್ಲಿ ಮೊಬೈಲ್ ನ್ನು ಅಲ್ಲೆ ಇಡುತ್ತಿದ್ದ. ಬಳಿಕ ಮಹಿಳೆಯರು ಬಟ್ಟೆ ಬದಲಾಯಿಸುವುದನ್ನು ವಿಡಿಯೋ ಚಿತ್ರೀಕರಣ ಮಾಡಿ ಮನೆಗೆ ಹೋಗಿ ಒಬ್ಬಂಟಿಯಾಗಿ ನೋಡಿ ವಿಕೃತ ಆನಂದ ಪಡುತ್ತಿದ್ದ.

ಇತ್ತೀಚಿಗೆ ಮಹಿಳಾ ಸಿಬ್ಬಂದಿ ಬಟ್ಟೆ ಬದಲಿಸುವಾಗ ಚಾರ್ಜಿಂಗ್ ಹಾಕಿದ್ದ ಮೊಬೈಲ್ ಅನ್ನು ಗಮನಿಸಿದ್ದಾರೆ. ಅನುಮಾನಗೊಂಡು ಪರಿಶೀಲಿಸಿದಾಗ ರೆಕಾರ್ಡಿಂಗ್ ಮೋಡ್ ನಲ್ಲಿರುವುದು ಗೊತ್ತಾಗಿದೆ. ನಂತರ ಗ್ಯಾಲರಿ ನೋಡಿದಾಗ ಕಾಮುಕನ ಅಸಲಿ ಆಟ ಗೊತ್ತಾಗಿದೆ. ಈ ಸಂಬಂಧ ತಿಲಕ್ ನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು,ತನಿಖೆ ಕೈಗೊಂಡಿದ್ದಾರೆ.

Stay up to date on all the latest ರಾಜ್ಯ news
Poll
Second phase election for urban local bodies on May 29

ಪುದುಚೇರಿ ಮತ್ತು ಮಧ್ಯಪ್ರದೇಶದಲ್ಲಿ ಚುನಾಯಿತ ಸರ್ಕಾರಗಳು ಪತನಗೊಂಡ ಉದಾಹರಣೆ ನೋಡಿದರೆ, ಚುನಾವಣೆಗಳು ಕೇವಲ ಹಳೇಯ ಪ್ರಜಾಪ್ರಭುತ್ವದ ಸಂಕೇತಗಳಾಗಿವೆಯೇ?


Result
ಹೌದು
ಇಲ್ಲ
flipboard facebook twitter whatsapp