ಜಾಮೀನು ಸಿಕ್ಕಿದ್ದು ಖುಷಿಯಾಗಿದೆ, ನಮ್ಮನ್ನು ಬೆಂಬಲಿಸಿದವರಿಗೆ ಧನ್ಯವಾದಗಳು: ದಿಶಾ ರವಿ ತಾಯಿ ಮಂಜುಳಾ

ಟೂಲ್ ಕಿಟ್ ಪ್ರಕರಣದಲ್ಲಿ ದೆಹಲಿ ನ್ಯಾಯಾಲಯ ಹವಾಮಾನ ಕಾರ್ಯಕರ್ತೆ ದಿಶಾ ರವಿ ಅವರಿಗೆ ಜಾಮೀನು ನೀಡಿದ ನಂತರ, ಆಕೆಯ ಪೋಷಕರು ನಿರಾಳರಾಗಿದ್ದಾರೆ.

Published: 23rd February 2021 09:07 PM  |   Last Updated: 23rd February 2021 09:09 PM   |  A+A-


ದಿಶಾ ರವಿ ತಾಯಿ ಮಂಜುಳಾ

Posted By : Raghavendra Adiga
Source : The New Indian Express

ಬೆಂಗಳೂರು: ಟೂಲ್ ಕಿಟ್ ಪ್ರಕರಣದಲ್ಲಿ ದೆಹಲಿ ನ್ಯಾಯಾಲಯ ಹವಾಮಾನ ಕಾರ್ಯಕರ್ತೆ ದಿಶಾ ರವಿ ಅವರಿಗೆ ಜಾಮೀನು ನೀಡಿದ ನಂತರ, ಆಕೆಯ ಪೋಷಕರು ನಿರಾಳರಾಗಿದ್ದಾರೆ.

ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್‌ನೊಂದಿಗೆ ಮಾತನಾಡಿದ ದಿಶಾ ಅವರ ತಾಯಿ ಮಂಜುಳಾ ನ್ಯಾಯಾಲಯ ಜಾಮೀನು ನೀಡಿರುವುದು ಸಂತಸ ತಂದಿದೆ ಎಂದಿದ್ದಾರೆ.. "ಅಂತಿಮವಾಗಿ ನನ್ನ ಮಗಳು ಜೈಲಿನಿಂದ ಹೊರಬಂದಿದ್ದಕ್ಕೆ ನನಗೆ ಸಂತೋಷವಾಗಿದೆ. ನ್ಯಾಯಾಂಗ ವ್ಯವಸ್ಥೆಯಲ್ಲಿನ ನಮ್ಮ ನಂಬಿಕೆ ಬಲವಾಗಿದೆ.ಆಕೆಗೆ (ದಿಶಾ) ಈ ಪ್ರಕರಣದಲ್ಲಿ ಆದಷ್ಟು ಬೇಗ ಕ್ಲೀನ್ ಚಿಟ್ ನೀಡಲಾಗುವುದು ಎಂದು ನಾವು ಭಾವಿಸುತ್ತೇವೆ."

ನಮ್ಮೊಂದಿಗೆ ನಿಂತಿದ್ದ ದಿಶಾ ಅವರ ಸ್ನೇಹಿತರು ಮತ್ತು ನೆರೆಹೊರೆಯವರಿಗೆ ಮಂಜುಳಾ ಧನ್ಯವಾದ ಹೇಳಿದ್ದಾರೆ."ಕಳೆದ 10 ದಿನಗಳಲ್ಲಿ ನಮ್ಮನ್ನು ಬೆಂಬಲಿಸಿದ ಪ್ರತಿಯೊಬ್ಬರಿಗೂಧನ್ಯವಾದಗಳನ್ನು ಅರ್ಪಿಸುತ್ತೇನೆ. ದಿಶಾ ಅವರನ್ನು ಬಿಡುಗಡೆ ಮಾಡಬೇಕೆಂದು ಒತ್ತಾಯಿಸಿ ಹಲವಾರು ಸಂಘಟನೆಗಳು ಪ್ರತಿಭಟಿಸಿದವು ಮತ್ತು ನನಗೆ ಹೇಳಲು ಮಾತುಗಳಿಲ್ಲ, ನನ್ನ ಮಗಳು ಯಾವುದೇ ತಪ್ಪು ಮಾಡಿಲ್ಲ ಎಂದು ನಂಬಿದ್ದಕ್ಕಾಗಿ ಅವರೆಲ್ಲರಿಗೂ ಧನ್ಯವಾದಗಳು" ಎಂದು ಅವರು ಹೇಳಿದ್ದಾರೆ.

ದಿಶಾ ಯಾವಾಗ ಮನೆಗೆ ಮರಳಲಿದ್ದಾರೆ ಎಂಬುದು ಇನ್ನೂ ತಿಳಿದುಬಂದಿಲ್ಲ ಎಂದು ಅವರು ಹೇಳಿದರು. "ನಾವು ಬೇರೆ ಯಾವುದರ ಬಗ್ಗೆಯೂ ಯೋಚಿಸಿಲ್ಲ, ಏಕೆಂದರೆ ನಾವು ಅವಳು ಬಿಡುಗಡೆ ಆಗಬೇಕೆಂದು ಬಯಸಿದ್ದೆವು ಮತ್ತು ನ್ಯಾಯಾಲಯದ ಆದೇಶವು ಕುಟುಂಬಕ್ಕೆ ದೊಡ್ಡ ಸಮಾಧಾನ ತಂದಿದೆ."  ಭಾವುಕರಾಗಿದ್ದ ದಿಶಾ ತಂದೆ ರವಿ ಸಂತಸ ವ್ಯಕ್ತಪಡಿಸಿದ್ದು ತಮ್ಮ ಮಗಳನ್ನು ಭೇಟಿಯಾಗಲು ಎದುರು ನೋಡುತ್ತಿರುವುದಾಗಿ ಹೇಳಿದ್ದಾರೆ.

Stay up to date on all the latest ರಾಜ್ಯ news
Poll
Kumbh-Covid-19

ಚುನಾವಣಾ ಸಮಾವೇಶ, ಕುಂಭಮೇಳ, ಧಾರ್ಮಿಕ ಸಭೆಗಳು ದೇಶದಲ್ಲಿ ಕೋವಿಡ್-19 ಪರಿಸ್ಥಿತಿಯನ್ನು ಹದಗೆಡಿಸುತ್ತಿವೆಯೇ?


Result
ಹೌದು, ಅದು ನಿಜ.
ಇಲ್ಲ, ಖಂಡಿತ ಅಲ್ಲ.
flipboard facebook twitter whatsapp