ಸ್ಥಗಿತಗೊಂಡಿದ್ದ ಬಿಡಿಎ ವಾಣಿಜ್ಯ ಸಂಕೀರ್ಣ ಗಳ ನವೀಕರಣ ಕಾಮಗಾರಿ ಪುನಾರಂಭ

ಸ್ಥಗಿತಗೊಂಡಿದ್ದ ಬಿಡಿಎ ವಾಣಿಜ್ಯ ಸಂಕೀರ್ಣಗಳ ಅಭಿವೃದ್ಧಿ ಕಾಮಗಾರಿಗಳು ಸದ್ಯದಲ್ಲೇ ಪುನಾರಂಭಗೊಳ್ಳಲಿದೆ.

Published: 24th February 2021 01:59 PM  |   Last Updated: 24th February 2021 02:04 PM   |  A+A-


BDA

ಬಿಡಿಎ

Posted By : Srinivas Rao BV
Source : The New Indian Express

ಬೆಂಗಳೂರು: ಸ್ಥಗಿತಗೊಂಡಿದ್ದ ಬಿಡಿಎ ವಾಣಿಜ್ಯ ಸಂಕೀರ್ಣಗಳ ಅಭಿವೃದ್ಧಿ ಕಾಮಗಾರಿಗಳು ಸದ್ಯದಲ್ಲೇ ಪುನಾರಂಭಗೊಳ್ಳಲಿದೆ.

ಕೋರಮಂಗಲ, ಇಂದಿರಾನಗರ, ಹೆಚ್ ಎಸ್ ಆರ್ ಲೇಔಟ್, ಆಸ್ಟಿನ್ ಟೌನ್. ವಿಜಯನಗರ, ಸದಾಶಿವನಗರ, ಆರ್ ಟಿ ನಗರಗಳಲ್ಲಿರುವ ವಾಣಿಜ್ಯ ಸಂಕೀರ್ಣಗಳ ಅಭಿವೃದ್ಧಿ/ ಮರುನಿರ್ಮಾಣ ಕಾಮಗಾರಿಗಳ ತಾತ್ಕಾಲಿಕ ಸ್ಥಗಿತಕ್ಕೆ ಸಿಎಂ ಯಡಿಯೂರಪ್ಪ 2019 ರ ಸೆಪ್ಟೆಂಬರ್ ನಲ್ಲಿ ಆದೇಶಿಸಿದ್ದರು. ಈಗ 17 ತಿಂಗಳ ಬಳಿಕ ಕಾಮಗಾರಿಯನ್ನು ಪುನಾರಂಭಿಸುವುದಕ್ಕೆ ಸರ್ಕಾರ ಮುಂದಾಗಿದೆ. 

ಈ ಹಿಂದಿನ ಸರ್ಕಾರದ ಅವಧಿಯಲ್ಲಿ ಪಿಪಿಪಿ ಮಾದರಿಯಲ್ಲಿ ವಾಣಿಜ್ಯ ಸಂಕೀರ್ಣಗಳ ಮರು ನಿರ್ಮಾಣಕ್ಕೆ ನಿರ್ಧರಿಸಲಾಗಿತ್ತು. ಟೆಂಡರ್, ವರ್ಕ್ ಆರ್ಡರ್ ನ್ನು ನೀಡಲಾಗಿದ್ದು, ಕಾಮಗಾರಿ ಪ್ರಾರಂಭಿಸುವುದಕ್ಕಾಗಿ ಔಪಚಾರಿಕ ಆದೇಶವನ್ನಷ್ಟೇ ಕಾಯುತ್ತಿದ್ದೇವೆ ಎಂದು ಬಿಡಿಎ ಅಧಿಕಾರಿಯೊಬ್ಬರು ಹೇಳಿದ್ದಾರೆ. 

7 ಸಂಕೀರ್ಣಗಳಲ್ಲಿ 566 ಮಳಿಗೆಗಳಿವೆ ಈಗ ವಾರ್ಷಿಕ 7 ಕೋಟಿ ರೂಪಾಯಿ ಆದಾಯ ಬರುತ್ತಿದೆ. ಆದರೆ ಮರುನಿರ್ಮಾಣದ ಬಳಿಕ  38.98 ಕೋಟಿ ಆದಾಯದ ನಿರೀಕ್ಷೆ ಇದೆ. ಗುತ್ತಿಗೆಯನ್ನು ಎರಡು ಪ್ರತ್ಯೇಕ ಪ್ಯಾಕೇಜ್ ಗಳಲ್ಲಿ ಘೋಷಿಸಲಾಗಿದ್ದು  ಇಂದಿರಾನಗರ ಸಂಕೀರ್ಣಕ್ಕೆ 650 ಕೋಟಿ ರೂಪಾಯಿಗಳಲ್ಲಿ ಮಾವೆರಿಕ್ ಹೋಲ್ಡಿಂಗ್ಸ್ & ಖಾಸಗಿ ಲಿಮಿಟೆಡ್ ಗೆ ವಹಿಸಲಾಗಿದ್ದು ಉಳಿದದ್ದನ್ನು 300 ಕೋಟಿ ರೂಪಾಯಿಗಳಿಗೆ ಎಂಫಾರ್ ಡೆವಲಪರ್‌ಗಳಿಗೆ ನೀಡಲಾಗಿದೆ. 

ಹಿಂದಿನ ಗಡುವಿನ ಪ್ರಕಾರ 2021 ರ ಮಾರ್ಚ್ ಗೆ ಕಾಮಗಾರಿ ಪೂರ್ಣಗೊಳಿಸಬೇಕಾಗಿತ್ತು. ಆದರೆ ಈಗ ಅದನ್ನು 2023 ರ ಮಾರ್ಚ್ ಗೆ ವಿಸ್ತರಣೆ ಮಾಡಲಾಗುತ್ತದೆ ಎಂದು ಬಿಡಿಎ ಅಧಿಕಾರಿಗಳು ಹೇಳಿದ್ದಾರೆ. ಆದಾಯವನ್ನು ಶೇ.30- ಶೇ.70 ರಷ್ಟು ಅನುಪಾತದಲ್ಲಿ ಬಿಡಿಎ ಹಾಗೂ ಬಿಲ್ಡರ್ ಗಳ ನಡುವೆ ಹಂಚಿಕೊಳ್ಳಲಾಗುತ್ತದೆ. ಇಂದಿರಾನಗರದ್ದು ಮಾತ್ರ ಶೇ.35-65 ರಷ್ಟು ಅನುಪಾತದಲ್ಲಿ ಬಿಲ್ಡರ್ ಗೂ ಬಿಡಿಎ ಗೂ ಹಂಚಿಕೆಯಾಗಲಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. 

Stay up to date on all the latest ರಾಜ್ಯ news
Poll
The grand Central Vista project is estimated to cost `20,000 crore

ಕೋವಿಡ್ ಬಿಕ್ಕಟ್ಟಿನ ದೃಷ್ಟಿಯಿಂದ ಪ್ರಧಾನಿ ಮೋದಿ ಸೆಂಟ್ರಲ್ ವಿಸ್ಟಾ ಯೋಜನೆಯನ್ನು ತಡೆಹಿಡಿಯಬೇಕೇ?


Result
ಹೌದು
ಬೇಡ
flipboard facebook twitter whatsapp