ಅನುದಾನರಹಿತ ಶಾಲೆಗಳ ಮಾನ್ಯತೆ ನವೀಕರಣ ವಿಚಾರ: ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ನೋಟೀಸ್
ಮಾನ್ಯತೆ ನವೀಕರಣಕ್ಕಾಗಿ ವಿವಿಧ ಅಧಿಕಾರಿಗಳಿಂದ ಕೆಲ ಅನುಮತಿ ಪಡೆಯಬೇಕೆಂದು ಒತ್ತಾಯಿಸಿ ಸರ್ಕಾರ ಹೊರಡಿಸಿರುವ ಸುತ್ತೋಲೆಯನ್ನು ಪ್ರಶ್ನಿಸಿ ಖಾಸಗಿ ಅನುದಾನರಹಿತ ಶಿಕ್ಷಣ ಸಂಸ್ಥೆಗಳ ನಿರ್ವಹಣೆಯ ಸಂಘವು ಸಲ್ಲಿಸಿದ್ದ ಅರ್ಜಿಯ ಕುರಿತು ಕರ್ನಾಟಕ ಹೈಕೋರ್ಟ್ ಬುಧವಾರ ರಾಜ್ಯ ಸರ್ಕಾರಕ್ಕೆ ನೋಟಿಸ್ ನೀಡಿದೆ.
Published: 24th February 2021 07:51 PM | Last Updated: 24th February 2021 07:51 PM | A+A A-

ಹೈಕೋರ್ಟ್
ಬೆಂಗಳೂರು: ಮಾನ್ಯತೆ ನವೀಕರಣಕ್ಕಾಗಿ ವಿವಿಧ ಅಧಿಕಾರಿಗಳಿಂದ ಕೆಲ ಅನುಮತಿ ಪಡೆಯಬೇಕೆಂದು ಒತ್ತಾಯಿಸಿ ಸರ್ಕಾರ ಹೊರಡಿಸಿರುವ ಸುತ್ತೋಲೆಯನ್ನು ಪ್ರಶ್ನಿಸಿ ಖಾಸಗಿ ಅನುದಾನರಹಿತ ಶಿಕ್ಷಣ ಸಂಸ್ಥೆಗಳ ನಿರ್ವಹಣೆಯ ಸಂಘವು ಸಲ್ಲಿಸಿದ್ದ ಅರ್ಜಿಯ ಕುರಿತು ಕರ್ನಾಟಕ ಹೈಕೋರ್ಟ್ ಬುಧವಾರ ರಾಜ್ಯ ಸರ್ಕಾರಕ್ಕೆ ನೋಟಿಸ್ ನೀಡಿದೆ.
ಕರ್ನಾಟಕದ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳ ಅಸೋಸಿಯೇಟೆಡ್ ಮ್ಯಾನೇಜ್ಮೆಂಟ್ (ಕೆಎಎಂಎಸ್) ಮತ್ತು ಇತರರು ಸಲ್ಲಿಸಿದ್ದ ಅರ್ಜಿಯನ್ನು ಆಲಿಸಿದ ನ್ಯಾಯಮೂರ್ತಿ ಆರ್. ದೇವದಾಸ್ ಅವರು ಮುಖ್ಯ ಕಾರ್ಯದರ್ಶಿ, ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ಮತ್ತು ಸಾರ್ವಜನಿಕ ಸೂಚನಾ ವಿಭಾಗದ ಆಯುಕ್ತರಿಗೆ ನೋಟಿಸ್ ನೀಡಿದ್ದಾರೆ.
ಕಟ್ಟಡ ಸುರಕ್ಷತಾ ಮಾರ್ಗಸೂಚಿಗಳನ್ನು ಹೊಂದಲು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆ ಸುಪ್ರೀಂ ಕೋರ್ಟ್ನ ತೀರ್ಪಿನ ಆಧಾರದ ಮೇಲೆ 2020 ರ ನವೆಂಬರ್ 10 ರಂದು ಸುತ್ತೋಲೆ ಹೊರಡಿಸಿದೆ ಎಂದು ಅರ್ಜಿದಾರರು ತಿಳಿಸಿದ್ದಾರೆ. ಅಲ್ಲಿಂದೀಚೆಗೆ, ಶಿಕ್ಷಣ ಸಂಸ್ಥೆಗಳು ಭಾರತದ ರಾಷ್ಟ್ರೀಯ ಕಟ್ಟಡ ಸಂಹಿತೆಯನ್ನು ಅಳವಡಿಸಿಕೊಳ್ಳಬೇಕೆಂದು ಒತ್ತಾಯಿಸಲಾಗುತ್ತಿದೆ. ಅಲ್ಲದೆ ಪ್ರತಿ ಐದು ವರ್ಷಗಳಿಗೊಮ್ಮೆ ಮಾನ್ಯತೆಯನ್ನು ನವೀಕರಿಸಲು ಅಗ್ನಿ ಸುರಕ್ಷತೆ ಮತ್ತು ತುರ್ತು ಸೇವೆಗಳ ಇಲಾಖೆಯಿಂದ (Department of Fire Safety and Emergency Services) ನಿಂದ ನೋ ಅಬ್ಜೆಕ್ಷನ್ ಪ್ರಮಾಣಪತ್ರ ಪಡೆಯಬೇಕು ಎಂದಿದ್ದಾರೆ. ಆದರೆ ಸಂಘದ ಹೆಚ್ಚಿನ ಸದಸ್ಯರು ಬಜೆಟ್ ನ ಶಾಲೆಗಳನ್ನು ಹೊಂದಿದ್ದಾರೆ., ಅಗ್ನಿಶಾಮಕ ಸುರಕ್ಷತೆ, ಶಿಕ್ಷಣ ಮತ್ತು ಪೊಲೀಸ್ ಇಲಾಖೆಗಳಿಂದ ಇಂತಹ ಪ್ರಮಾಣಪತ್ರಗಳನ್ನು ಪಡೆಯಲು ಕಚೇರಿಯಿಂದ ಕಚೇರಿಗೆ ಅಲೆಯಲು ಸಾಧ್ಯವಿಲ್ಲ ಎಂದು ಸಂಘ ಹೇಳಿದೆ.
ಇದಲ್ಲದೆ, ಶಾಲೆಗಳು ಓವರ್ಹೆಡ್ ಟ್ಯಾಂಕ್ಗಳು, ಖಾಲಿ ಇರುವ ಸ್ಥಳ, ರಸ್ತೆಗಳು ಮತ್ತು ಕಟ್ಟಡಗಳಲ್ಲಿ ಅಗ್ನಿಶಾಮಕ ಯಂತ್ರಗಳ ಅಳವಡಿಕೆ ಕುರಿತು ಕೆಲವು ಮಾರ್ಗಸೂಚಿಗಳನ್ನು ಪಾಲಿಸಬೇಕೆಂದು ಸುತ್ತೋಲೆ ಒತ್ತಾಯಿಸುತ್ತದೆ.
ಇದನ್ನು ಉಲ್ಲೇಖಿಸಿ, ಅರ್ಜಿದಾರರು ಸುತ್ತೋಲೆ ಜಾರಿಗೊಳಿಸಲು ಸಾಧ್ಯವಿಲ್ಲ, ಏಕೆಂದರೆ ಅದು ಅಧಿಸೂಚನೆ ಅಲ್ಲ ಮತ್ತು ಇದು ಕೇವಲಅಂತರ್ ವಿಭಾಗದ ನೋಟ್, ಅಂತಹ ಎನ್ಒಸಿಗಳನ್ನು ಪಡೆಯಲು, ಶಾಲೆಗಳು ಸಂಬಂಧಪಟ್ಟ ಇಲಾಖೆಗಳಿಗೆ ಹೆಚ್ಚುವರಿ ಹಣವನ್ನು ನೀಡಬೇಕಾಗುತ್ತದೆ. ಕೋವಿಡ್ -19 ಕಾರಣದಿಂದಾಗಿ ಶಾಲಾ ಶುಲ್ಕವನ್ನು ಪಾವತಿಸದಿದ್ದಕ್ಕಾಗಿ ಈಗಾಗಲೇ ಶಾಲಾ ಆಡಳಿತ ಮಂಡಳಿಗಳು ಹಣಕಾಸಿನ ಬಿಕ್ಕಟ್ಟನ್ನು ಎದುರಿಸುತ್ತಿವೆ. ಆದ್ದರಿಂದ, ಅಂತಹ ಪ್ರಮಾಣಪತ್ರವನ್ನು ಕಡ್ಡಾಯಗೊಳಿಸುವುದುಶಾಲೆಗಳ ನಿರ್ವಹಣೆಗೆ ಹೆಚ್ಚಿನ ಹೊರೆಯಾಗಿದೆ ಎಂದು ಸಂಘ ಹೇಳಿಕೊಂಡಿದೆ.