ಮಂಗಳೂರು: ಎಟಿಎಂ ಸ್ಕಿಮ್ಮಿಂಗ್ ಜಾಲ ಪತ್ತೆ, ನಾಲ್ವರ ಬಂಧನ

ನಗರದಲ್ಲಿ ಎಟಿಎಂ ಸ್ಕಿಮ್ಮಿಂಗ್ ಪ್ರಕರಣಕ್ಕೆ ಸಂಬಂಧಿಸಿ ಸೈಬರ್ ಕ್ರೈಮ್ ಪೊಲೀಸ್ ಅಧಿಕಾರಿಗಳು ನಾಲ್ಕು ಜನರನ್ನು ಬಂಧಿಸಿದ್ದಾರೆ.

Published: 24th February 2021 07:11 PM  |   Last Updated: 24th February 2021 07:37 PM   |  A+A-


ಬಂಧಿತ ಆರೋಪಿಗಳು

Posted By : Raghavendra Adiga
Source : Online Desk

ಮಂಗಳೂರು: ನಗರದಲ್ಲಿ ಎಟಿಎಂ ಸ್ಕಿಮ್ಮಿಂಗ್ ಪ್ರಕರಣಕ್ಕೆ ಸಂಬಂಧಿಸಿ ಸೈಬರ್ ಕ್ರೈಂ ಪೊಲೀಸ್ ಅಧಿಕಾರಿಗಳು ನಾಲ್ಕು ಜನರನ್ನು ಬಂಧಿಸಿದ್ದಾರೆ.

ಬಂಧಿತ ವ್ಯಕ್ತಿಗಳನ್ನು ಕೇರಳದ ತ್ರಿಶೂರ್‌ ಮೂಲದ ಡಿವಿನ್ ಜಿಂಟೋ ಜೋಯ್ ಯಾನೆ ಜಿಂಟು (37), ದೆಹಲಿಯ ದಿನೇಶ್ ಸಿಂಗ್ ರಾವತ್ (44), ಕೇರಳದ ಕಾಸರಗೋಡು ಜಿಲ್ಲೆಯ ಅಬ್ದುಲ್ ಮಜೀದ್ (27), ಕೇರಳದ ರಾಹುಲ್ ಟಿಎಸ್ (24) ಎಂದು ಗುರುತಿಸಲಾಗಿದೆ.

ಆರೋಪಿಗಳಿಂದ ಸ್ಕಿಮ್ಮಿಂಗ್ ಮಿಷಿನ್, ಎರಡು ಕಾರುಗಳು, ನಕಲಿ ಎಟಿಎಂ ಕಾರ್ಡ್‌ಗಳು, ಐದು ಮೊಬೈಲ್ ಫೋನ್ ಮತ್ತು ಎರಡು ಆಪಲ್ ಕೈಗಡಿಯಾರಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ವಶಕ್ಕೆ ಪಡೆಯಲಾದ ವಸ್ತುಗಳ ಮೌಲ್ಯ 25 ಲಕ್ಷ ರೂ. ಆಗಿದೆ.

ಇತ್ತೀಚಿನ ದಿನಗಳಲ್ಲಿ ನಗರದಲ್ಲಿ 22 ಎಟಿಎಂ ಸ್ಕಿಮ್ಮಿಂಗ್ ಪ್ರಕರಣಗಳು ವರದಿಯಾಗಿವೆ ಎಂದು ಪೋಲೀಸರು ತಿಳಿಸಿದ್ದಾರೆ.

Stay up to date on all the latest ರಾಜ್ಯ news
Poll
Mamata_PM_Modi1

ಕೋವಿಡ್ ಉಲ್ಬಣದ ಕಾರಣ ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಮತ್ತು ಟಿಎಂಸಿ ಸಾಮೂಹಿಕ ಚುನಾವಣಾ ಪ್ರಚಾರವನ್ನು ಸ್ಥಗಿತಗೊಳಿಸಬೇಕೇ?


Result
ಹೌದು
ಬೇಡ
flipboard facebook twitter whatsapp