
ಸಾಂದರ್ಭಿಕ ಚಿತ್ರ
ಬೆಂಗಳೂರು: ಕೆಂಗೇರಿಯಲ್ಲಿ ವೃಷಭಾವತಿ ಕಾಲುವೆ ಕಾಮಗಾರಿಯ ಸಂದರ್ಭದಲ್ಲಿ ಮಣ್ಣು ಕುಸಿದು ಕಾರ್ಮಿಕನೋರ್ವ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.
ಮೃತ ಕಾರ್ಮಿಕನನ್ನು ಪಶ್ಚಿಮ ಬಂಗಾಳ ಮೂಲದ 21 ವರ್ಷದ ಚಂಚಲ್ ಬುರ್ಮಾನ್ ಎಂದು ಗುರುತಿಸಲಾಗಿದೆ. ವಾಸ್ತು ಪ್ರಾಪರ್ಟೀಸ್ ಸಂಸ್ಥೆಯ ಕಾರ್ಮಿಕನಾದ ಚಂಚಲ್, ಕೆಂಗೇರಿಯ ವೃಷಭಾವತಿ ಕಾಲುವೆಗೆ ತಡೆಗೋಡೆ ನಿರ್ಮಿಸಲು ಗುಂಡಿ ಅಗೆಯುತ್ತಿದ್ದ ವೇಳೆ ಮೈ ಮೇಲೆ ಮಣ್ಣು ಕುಸಿದು ಮೃತಪಟ್ಟಿದ್ದಾರೆ.
ಈ ಕಾಮಗಾರಿ ಸಬ್ ಕಂಟ್ರಾಕ್ಟ್ ಅನ್ನು ಗಣೇಶ್ ಎಂಬಾತ ಗುತ್ತಿಗೆ ಪಡೆದಿದ್ದ. ಗಣೇಶ್ ಪಶ್ಚಿಮ ಬಂಗಾಳದಿಂದ ಕಾರ್ಮಿಕರನ್ನು ಕರೆತಂದು ಬೆಂಗಳೂರಿನಲ್ಲಿ ಕೆಲಸ ಮಾಡಿಸುತ್ತಿದ್ದ. ಆತನ ವಿರುದ್ಧ ನಿರ್ಲಕ್ಷ್ಯತನದ ಅಡಿಯಲ್ಲಿ ಪ್ರಕರಣ ದಾಖಲಿಸಿರುವ ಕೆಂಗೇರಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.