ಕೊರೋನಾ: ರಾಜ್ಯದಲ್ಲಿಂದು 947 ಮಂದಿ ಡಿಸ್ಚಾರ್ಜ್ 453 ಹೊಸ ಕೇಸ್ ದಾಖಲು

ರಾಜ್ಯದ ಇಂದಿನ ಕೊರೋನಾ ವರದಿ ಬಿಡುಗಡೆಯಾಗಿದ್ದು ಒಟ್ಟಾರೆ 947 ಮಂದಿ ಡಿಸ್ಚಾರ್ಜ್ ಆಗಿದ್ದಾರೆ. 453 ಹೊಸ ಪ್ರಕರಣಗಳು ವರದಿಯಾಗಿದೆ.

Published: 25th February 2021 08:35 PM  |   Last Updated: 25th February 2021 08:35 PM   |  A+A-


ಸಂಗ್ರಹ ಚಿತ್ರ

Posted By : Raghavendra Adiga
Source : Online Desk

ಬೆಂಗಳೂರು: ರಾಜ್ಯದ ಇಂದಿನ ಕೊರೋನಾ ವರದಿ ಬಿಡುಗಡೆಯಾಗಿದ್ದು ಒಟ್ಟಾರೆ 947 ಮಂದಿ ಡಿಸ್ಚಾರ್ಜ್ ಆಗಿದ್ದಾರೆ. 453 ಹೊಸ ಪ್ರಕರಣಗಳು ವರದಿಯಾಗಿದೆ.

ಈ ವರೆಗೆ ರಾಜ್ಯದಲ್ಲಿ ಒಟ್ಟೂ ಕೊರೋನಾ ಸೋಂಕಿತರ ಸಂಖ್ಯೆ 9,49,636ಕ್ಕೆ ತಲುಪಿದ್ದು ಒಟ್ಟೂ 9,31,725 ಜನರು ಗುಣಮುಖರಾಗಿದ್ದಾರೆ

ಕಳೆದ ಇಪ್ಪತ್ತನಾಲ್ಕು ಗಂಟೆಗಳಲ್ಲಿ ರಾಜ್ಯದಲ್ಲಿ ಒಟ್ಟೂ 7 ಮಂದಿ ಕೊರೋನಾದಿಂದ ಸಾವನ್ನಪ್ಪಿದ್ದು ಇದುವರೆಗಿನ ಸಾವಿನ ಸಂಖ್ಯೆ 12,316ಕ್ಕೆ ತಲುಪಿದೆ.

ಸಧ್ಯ 5,576 ಸಕ್ರಿಯ ಪ್ರಕರಣಗಳಿದ್ದು ಅವರಲ್ಲಿ 121 ಮಂದಿ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಬೆಂಗಳೂರು ನಗರದಲ್ಲಿ ಇಂದು 271 ಪ್ರಕರಣಗಳು ವರದಿಯಾಗಿದ್ದು 4 ಮಂದಿ ಸಾವನ್ನಪ್ಪಿದ್ದಾರೆ. ಇದೇ ವೇಳೆ ನಗರದಲ್ಲಿ 759 ಮಂದಿ ಡಿಸ್ಚಾರ್ಜ್ ಆಗಿದ್ದಾರೆ. ಇನ್ನು ಕಲಬುರಗಿ, ಮಂಡ್ಯ ಹಾಗೂ ಉಡುಪಿಯಲ್ಲಿ ತಲಾ ಒಬ್ಬರು ಸಾವನ್ನಪ್ಪಿದ್ದಾರೆ.

Stay up to date on all the latest ರಾಜ್ಯ news
Poll
Mamata_PM_Modi1

ಕೋವಿಡ್ ಉಲ್ಬಣದ ಕಾರಣ ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಮತ್ತು ಟಿಎಂಸಿ ಸಾಮೂಹಿಕ ಚುನಾವಣಾ ಪ್ರಚಾರವನ್ನು ಸ್ಥಗಿತಗೊಳಿಸಬೇಕೇ?


Result
ಹೌದು
ಬೇಡ
flipboard facebook twitter whatsapp