'ಸಂಸದೀಯ ಮೌಲ್ಯಗಳು ಕುಸಿಯುತ್ತಿವೆ': ಆಡಳಿತ, ಪ್ರತಿಪಕ್ಷ ನಾಯಕರ ಆತಂಕ

ಸಂಸತ್ತಿನ ಮೌಲ್ಯಗಳು ಕುಸಿಯುತ್ತಿರುವ ವಿಷಯವಾಗಿ ಸರ್ಕಾರದ ಆಡಳಿತ ಮತ್ತು ಪ್ರತಿಪಕ್ಷ ನಾಯಕರು ಪರಸ್ಪರ ಬೆಳಕು ಚೆಲ್ಲಿರುವ ಘಟನೆ ನಡೆದಿದೆ.

Published: 25th February 2021 08:56 AM  |   Last Updated: 25th February 2021 12:53 PM   |  A+A-


Chief Minister BS Yediyurappa, Speaker Vishweshwar Hegde Kageri, Council Chairman Basavaraj Horatti, CLP leader Siddaramaiah and SR Patil at an event in Vidhana Soudha, Bengaluru, on Wednesday

ವಿಧಾನ ಸೌಧದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ, ಬಸವರಾಜ್ ಹೊರಟ್ಟಿ, ಮಾಜಿ ಸಿಎಂ ಸಿದ್ದರಾಮಯ್ಯ, ವಿಶ್ವೇಶ್ವರ ಹೆಗಡೆ ಕಾಗೇರಿ

Posted By : Sumana Upadhyaya
Source : The New Indian Express

ಬೆಂಗಳೂರು: ಸಂಸತ್ತಿನ ಮೌಲ್ಯಗಳು ಕುಸಿಯುತ್ತಿರುವ ವಿಷಯವಾಗಿ ಸರ್ಕಾರದ ಆಡಳಿತ ಮತ್ತು ಪ್ರತಿಪಕ್ಷ ನಾಯಕರು ಪರಸ್ಪರ ಬೆಳಕು ಚೆಲ್ಲಿರುವ ಘಟನೆ ನಡೆದಿದೆ. ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ, ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ವಿಧಾನ ಪರಿಷತ್ ನ ವಿರೋಧ ಪಕ್ಷದ ನಾಯಕ ಎಸ್ ಆರ್ ಪಾಟೀಲ್, ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಮತ್ತು ಪರಿಷತ್ ಸಭಾಪತಿ ಬಸವರಾಜ್ ಹೊರಟ್ಟಿ ಈ ಬಗ್ಗೆ ಮಾತನಾಡಿದ್ದಾರೆ.

ಇನ್ನೇನು ಕೆಲವೇ ದಿನಗಳಲ್ಲಿ ವಿಧಾನ ಮಂಡಲ ಬಜೆಟ್ ಅಧಿವೇಶನ ಆರಂಭವಾಗಲಿದೆ, ಇದಕ್ಕೂ ಮುನ್ನ ಕಾಮನ್ ವೆಲ್ತ್ ಸಂಸದೀಯ ಒಕ್ಕೂಟ ಏರ್ಪಡಿಸಿದ್ದ ಸಂಸದೀಯ ಮೌಲ್ಯಗಳ ಕುಸಿತ ತಡೆಗಟ್ಟುವಿಕೆಗೆ ಒಂದು ಆತ್ಮಾವಲೋಕನ ಕಾರ್ಯಕ್ರಮದಲ್ಲಿ ಮಾತನಾಡಿದರು.

ಇತ್ತೀಚೆಗೆ ಕಾಂಗ್ರೆಸ್ ನಾಯಕರೊಬ್ಬರು ವಿಧಾನ ಪರಿಷತ್ ನಲ್ಲಿ ಕಲಾಪ ವೇಳೆ ಮೊಬೈಲ್ ನಲ್ಲಿ ಅಶ್ಲೀಲ ವಿಡಿಯೊ ವೀಕ್ಷಿಸುತ್ತಿದ್ದರು ಎಂಬ ವಿವಾದಕ್ಕೆ ಸಂಬಂಧಿಸಿದಂತೆ ನಾಯಕರು ಈ ವಿಷಯವನ್ನು ಪ್ರಸ್ತಾಪಿಸಿದ್ದಾರೆ.

ಆಡಳಿತ ಮತ್ತು ಪ್ರತಿಪಕ್ಷಗಳ ನಾಯಕರು ಜಾಗರೂಕತೆಯಿಂದ ಇರಬೇಕು, ಹಾಗಾದರೆ ಇಂತಹ ಅಹಿತಕರ ಘಟನೆಗಳು ನಡೆಯಲು ಸಾಧ್ಯವಿಲ್ಲ ಎಂದು ಸಿಎಂ ಹೇಳಿದರು. ಸ್ವಾತಂತ್ರ್ಯಕ್ಕೆ ಮುನ್ನ ನಮ್ಮ ರಾಜಕೀಯ ನಾಯಕರು ನಾವು ಈ ದೇಶಕ್ಕಾಗಿ ಇದ್ದೇವೆ, ದೇಶಕ್ಕಾಗಿ ಹೋರಾಡುತ್ತೇವೆ ಎಂದು ಹೇಳಿದ್ದರು. ಆದರೆ ಇಂದು ದೇಶ ತಮಗಾಗಿ ಇರುವುದು ಎಂದು ರಾಜಕೀಯ ನಾಯಕರು ಭಾವಿಸುತ್ತಾರೆ. ಇದರಿಂದಾಗಿ ಇಂದು ಈ ಪರಿಸ್ಥಿತಿ ಬಂದಿದೆ ಎಂದು ಮುಖ್ಯಮಂತ್ರಿ ವಿಷಾದ ವ್ಯಕ್ತಪಡಿಸಿದರು.

ವಿಧಾನ ಪರಿಷತ್ ಸಭಾಪತಿ ಮತ್ತು ವಿಧಾನ ಸಭೆಯ ಸ್ಪೀಕರ್ ತಮ್ಮ ಅಧಿಕಾರವನ್ನು ಬಳಸಬೇಕು. ಸರ್ಕಾರವು ನಮ್ಮನ್ನು ಆಳಲು ಬಿಡಬಾರದು. ಇತ್ತೀಚೆಗೆ ಸದನದಲ್ಲಿ ಮಸೂದೆಗಳನ್ನು ಮಂಡಿಸಿ ಸುದೀರ್ಘವಾಗಿ ಅವುಗಳ ಇತಿ ಮಿತಿಗಳನ್ನು ಚರ್ಚಿಸುವ ಬದಲು ತರಾತುರಿಯಲ್ಲಿ ಚರ್ಚೆ ನಡೆಸದೆ ಮಂಡಿಸುವುದು, ಅದಕ್ಕೆ ಅನುಮೋದನೆ ಪಡೆಯುವುದು ಆಗಿಬಿಟ್ಟಿದೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಆತಂಕ ವ್ಯಕ್ತಪಡಿಸಿದರು.


Stay up to date on all the latest ರಾಜ್ಯ news
Poll
lokasbha

ಸಂಸತ್ತಿನ ಕಲಾಪಗಳಿಗೆ ಅಡ್ಡಿಪಡಿಸುವ ಸಂಸದರಿಗೆ ದಂಡ ವಿಧಿಸಬೇಕೇ?


Result
ಹೌದು, ಇವರಿಂದ ಸಮಯ ವ್ಯರ್ಥ
ಬೇಡ, ಅವರು ಪ್ರತಿಭಟಿಸಬೇಕು
flipboard facebook twitter whatsapp