ಸಿಂಧನೂರು ಬಸ್ ನಿಲ್ದಾಣದಲ್ಲಿ ಮೈಮರೆತು ಯುವ ಜೋಡಿಯಿಂದ ಚುಂಬನ: ವಿಡಿಯೋ ವೈರಲ್!

ಫೆಬ್ರವರಿ 10ರಂದು ಮಂಡ್ಯದ ಕೆ.ಆರ್ ಪೇಟೆಯಲ್ಲಿ ಹಾಡು ಹಗಲೇ ಸಾರ್ವಜನಿಕವಾಗಿ ಪ್ರೇಮಿಗಳಿಬ್ಬರು ಚುಂಬಿಸುತ್ತಿದ್ದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಈ ಘಟನೆ ಬಗ್ಗೆ ಸಾರ್ವಜನಿಕವಾಗಿ ಭಾರೀ ಆಕ್ರೋಶ ವ್ಯಕ್ತವಾಗಿತ್ತು.

Published: 25th February 2021 04:20 PM  |   Last Updated: 25th February 2021 04:25 PM   |  A+A-


Incident Photo

ಚುಂಬನದ ದೃಶ್ಯ

Posted By : Vishwanath S
Source : Online Desk

ರಾಯಚೂರು: ಫೆಬ್ರವರಿ 10ರಂದು ಮಂಡ್ಯದ ಕೆ.ಆರ್ ಪೇಟೆಯಲ್ಲಿ ಹಾಡು ಹಗಲೇ ಸಾರ್ವಜನಿಕವಾಗಿ ಪ್ರೇಮಿಗಳಿಬ್ಬರು ಚುಂಬಿಸುತ್ತಿದ್ದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಈ ಘಟನೆ ಬಗ್ಗೆ ಸಾರ್ವಜನಿಕವಾಗಿ ಭಾರೀ ಆಕ್ರೋಶ ವ್ಯಕ್ತವಾಗಿತ್ತು.

ಇನ್ನು ನಿನ್ನೆ ಸಿಂಧನೂರಿನ ಬಸ್ ನಿಲ್ದಾಣದಲ್ಲಿ ಯುವ ಜೋಡಿ ನಿಂತುಕೊಂಡಿತ್ತು. ನಂತರ ಒಬ್ಬರನ್ನೊಬ್ಬರು ಪರಸ್ಪರ ತಬ್ಬಿಕೊಂಡು ನಿಂತಿದ್ದಾರೆ. ಇಷ್ಟೇ ಆಗಿದ್ದರೆ ಏನು ಆಗುತ್ತಿರಲಿಲ್ಲ. ಆದರೆ ಯುವ ಜೋಡಿ ತಮ್ಮ ಸುತ್ತ ಮುತ್ತ ಜನರು ಇರುವುದನ್ನು ಪರಿಗಣನೆಗೆ ತೆಗೆದುಕೊಳ್ಳದೇ ಚುಂಬಿಸಿಕೊಂಡಿದ್ದಾರೆ. 

ಇದನ್ನು ವ್ಯಕ್ತಿಯೊಬ್ಬರು ತಮ್ಮ ಮೊಬೈಲ್ ನಲ್ಲಿ ಸೆರೆಹಿಡಿದು ಸಾಮಾಜಿಕ ಜಾಲತಾಣಕ್ಕೆ ಅಪ್ಲೋಡ್ ಮಾಡಿದ್ದಾರೆ. ಈ ವಿಡಿಯೋ ಕುರಿತಂತೆ ಇದೀಗ ಸಾರ್ಜಜನಿಕರಿಂದ ಭಾರೀ ಆಕ್ರೋಶ ವ್ಯಕ್ತವಾಗಿದೆ. 

ಬಸ್ ನಿಲ್ದಾಣಗಳಲ್ಲಿ ಶಾಲಾ-ಕಾಲೇಜು ವಿದ್ಯಾರ್ಥಿಗಳು ಹಾಗೂ ಪ್ರಯಾಣಿಕರು ನೂರಾರು ಸಂಖ್ಯೆ ಬಂದು ಹೋಗುತ್ತಾರೆ. ಇಂತಹ ಸ್ಥಳಗಳಲ್ಲಿ ಈ ರೀತಿ ಪ್ರಸಂಗಗಳು ನಡೆದರೆ ಅದು ಯುವ ಜನತೆ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ ಎಂದು ಪ್ರಜ್ಞಾವಂತರು ಆಗ್ರಹಿಸಿದ್ದಾರೆ.

Stay up to date on all the latest ರಾಜ್ಯ news
Poll
Kumbh-Covid-19

ಚುನಾವಣಾ ಸಮಾವೇಶ, ಕುಂಭಮೇಳ, ಧಾರ್ಮಿಕ ಸಭೆಗಳು ದೇಶದಲ್ಲಿ ಕೋವಿಡ್-19 ಪರಿಸ್ಥಿತಿಯನ್ನು ಹದಗೆಡಿಸುತ್ತಿವೆಯೇ?


Result
ಹೌದು, ಅದು ನಿಜ.
ಇಲ್ಲ, ಖಂಡಿತ ಅಲ್ಲ.
flipboard facebook twitter whatsapp