ಕೋವಿಡ್-19 ಲಸಿಕೆ ವಿತರಣೆ ಕುರಿತ ಸರ್ವೆ ಕಾರ್ಯ: ಸ್ವಯಂಸೇವಕರ ನೆರವು ಪಡೆಯಲು ಬಿಬಿಎಂಪಿ ಮುಂದು

ಕೊರೋನಾ ವೈರಸ್ ನಿಯಂತ್ರಣಕ್ಕಾಗಿ ಲಸಿಕೆ ವಿತರಣಾ ಕಾರ್ಯಕ್ರಮದ ಮುಂದಿನ ಹಂತದಲ್ಲಿ ಸಾರ್ವಜನಿಕರಿಗೆ ಲಸಿಕೆ ನೀಡಲು ಬಿಬಿಎಂಪಿ ಸರ್ವೇ ಕಾರ್ಯಕ್ಕೆ ಮುಂದಾಗಿದ್ದು, ಇದಕ್ಕಾಗಿ ಸ್ವಯಂಸೇವಕರನ್ನು ತನ್ನ ಯೋಜನೆಯಲ್ಲಿ ತೊಡಗಿಸಿಕೊಳ್ಳಲು ಮುಂದಾಗಿದೆ.

Published: 26th February 2021 01:57 PM  |   Last Updated: 26th February 2021 02:04 PM   |  A+A-


Covid-19 Vaccination drive

ಕೊರೋನಾ ಲಸಿಕೆ ವಿತರಣೆ

Posted By : Srinivasamurthy VN
Source : The New Indian Express

ಬೆಂಗಳೂರು: ಕರ್ನಾಟಕದಲ್ಲಿ ಮಾರಕ ಕೊರೋನಾ ವೈರಸ್ ನಿಯಂತ್ರಣಕ್ಕಾಗಿ ನಡೆಯುತ್ತಿರುವ ಕೋವಿಡ್ ಲಸಿಕೆ ವಿತರಣಾ ಕಾರ್ಯಕ್ರಮ ಭರದಿಂದ ಸಾಗಿದ್ದು, ಲಸಿಕೆ ವಿತರಣಾ ಕಾರ್ಯಕ್ರಮದ ಮುಂದಿನ ಹಂತದಲ್ಲಿ ಸಾರ್ವಜನಿಕರಿಗೆ ಲಸಿಕೆ ನೀಡಲು ಬಿಬಿಎಂಪಿ ಸರ್ವೇ ಕಾರ್ಯಕ್ಕೆ ಮುಂದಾಗಿದ್ದು, ಇದಕ್ಕಾಗಿ ಸ್ವಯಂಸೇವಕರನ್ನು ತನ್ನ ಯೋಜನೆಯಲ್ಲಿ ತೊಡಗಿಸಿಕೊಳ್ಳಲು ಮುಂದಾಗಿದೆ.

ಹೌದು.. ಕೋವಿಡ್-19 ಲಸಿಕೆ ವಿತರಣಾ ಕಾರ್ಯಕ್ರಮದ ಮೊದಲ ಹಂತ ಬಹುತೇಕ ನಿರ್ಣಾಯಕ ಹಂತ ತಲುಪಿದ್ದು,  ಇದೀಗ ಲಸಿಕೆ ವಿತರಣಾ ಕಾರ್ಯಕ್ರಮದ ಮುಂದಿನ ಹಂತದಲ್ಲಿ 60 ವರ್ಷ ಮೇಲ್ಪಟ್ಟವರು ಮತ್ತು 45 ವರ್ಷ ವಯಸ್ಸಿನ ಅನಾರೋಗ್ಯ ಪೀಡಿತರಿಗೆ (ಇತರೆ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿರುವವರು) ಲಸಿಕೆ ನೀಡಿಕೆ ಆರಂಭಿಸಲು ಬಿಬಿಎಂಪಿ ಯೋಜನೆ ರೂಪಿಸಿದೆ. 

ಈ ಯೋಜನೆಗೆ ನೆರವಾಗಲು ಬಿಬಿಎಂಪಿ ಬೆಂಗಳೂರಿನಲ್ಲಿ ನಡೆಸಲಿಚ್ಛಿಸಿರುವ ಸರ್ವೇ ಕಾರ್ಯಕಾರ್ಯದಲ್ಲಿ ತೊಡಗಿಸಿಕೊಳ್ಳಲು ಸ್ವಯಂ ಸೇವಕರನ್ನು ನೇಮಕ ಮಾಡಿಕೊಳ್ಳಲು ಮುಂದಾಗಿದೆ. ಲಸಿಕೆ ವಿತರಣಾ ಕಾರ್ಯಕ್ರಮದ 3 ನೇ ಹಂತಕ್ಕಾಗಿ ಸಮೀಕ್ಷೆ ಮಾಡಲು ಆಶಾ ಕಾರ್ಯಕರ್ತರ ಜೊತೆಗೇ ಸ್ವಯಂಸೇವಕರನ್ನೂ ಕೂಡ ನೇಮಕ ಮಾಡಿಕೊಳ್ಳಲು ಬಿಬಿಎಂಪಿ ನಿರ್ಧರಿಸಿದೆ. 

ಈಗಾಗಲೇ ಈ ಸಂಬಂಧ ಆಶಾಕಾರ್ಯಕರ್ತೆಯರಿಗೆ ಟ್ಯಾಬ್ ಗಳನ್ನು ನೀಡಲಾಗಿದ್ದು, ಗೂಗಲ್ ಡಾಕ್ ಫಾರ್ಮ್‌ಗಳನ್ನು ಹಂಚಿಕೆ ಮಾಡಲಾಗುತ್ತಿದೆ. ನಾಗರಿಕರು ತಮ್ಮ ಇ-ಮೇಲ್ ವಿಳಾಸ, ಪೂರ್ಣ ಹೆಸರು, ಫೋನ್ ಸಂಖ್ಯೆ ಮತ್ತು ವಾರ್ಡ್ ಸಂಖ್ಯೆಯನ್ನು ಭರ್ತಿ ಮಾಡಿ ಬಿಬಿಎಂಪಿ ಆರೋಗ್ಯ ಇಲಾಖೆಯೊಂದಿಗೆ ಸಮೀಕ್ಷೆಗೆ ಸೈನ್ ಅಪ್ ಆಗಬೇಕು. ಈ ಸರ್ವೇ ಕಾರ್ಯಕ್ಕಾಗಿ ಆಶಾ ಕಾರ್ಯಕರ್ತರಿಗೆ ಪ್ರತಿ ಮನೆಗೆ ರೂ.10 ಗೌರವ ಧನ ನೀಡಲಾಗುವುದು ಎಂದು ಬಿಬಿಎಂ ಹೇಳಿದೆ. 

ಈ ಕುರಿತಂತೆ ಮಾತನಾಡಿದ ಬಿಬಿಎಂಪಿಯ ಆರೋಗ್ಯ ವಿಶೇಷ ಆಯುಕ್ತ ರಾಜೇಂದ್ರ ಚೋಳನ್ ಅವರು, 'ಕೋವಿಡ್ ಲಸಿಕೆ ಫಲಾನುಭವಿಗಳ ಸಮೀಕ್ಷೆಗಾಗಿ ಮಾತ್ರವಲ್ಲದೆ ರಾಷ್ಟ್ರೀಯ ನಗರ ಆರೋಗ್ಯ ಮಿಷನ್‌ನ ಅಡಿಯಲ್ಲಿ ಬರುವ ನಿಯಮಿತ ಆರೋಗ್ಯ ಸಮೀಕ್ಷೆಗಳಿಗೂ ನಾಗರಿಕರನ್ನು ಒಳಪಡಿಸಲಾಗುತ್ತದೆ. ಸಮೀಕ್ಷೆಯನ್ನು ಪೂರ್ಣಗೊಳಿಸಲು ಯಾವುದೇ ನಿಗದಿತ ಗುರಿ ಇಲ್ಲ.. ಆದರೆ ಇದು 15 ರಿಂದ 20 ದಿನಗಳಿಗಿಂತ ಹೆಚ್ಚು ಸಮಯ ತೆಗೆದುಕೊಳ್ಳಬಾರದು.  ಎನ್‌ಜಿಒಗಳು ಬಿಬಿಎಂಪಿಯೊಂದಿಗೆ ಸ್ವಯಂಸೇವಕ ಪಾಲುದಾರರಾಗಿರಬಹುದು. ವಿಶೇಷವಾಗಿ ಸರ್ಕಾರಿ ಆರೋಗ್ಯ ಸಿಬ್ಬಂದಿಗಳ ಕೊರತೆಯಿರುವ ಪ್ರದೇಶಗಳಲ್ಲಿ ಇದನ್ನು ಮಾಡಲಾಗುತ್ತಿದೆ ಎಂದು ಹೇಳಿದರು. 

ಅಂತೆಯೇ 'ವೈದ್ಯಕೀಯ ಅಧಿಕಾರಿ ಆರೋಗ್ಯ ಮತ್ತು ವಾರ್ಡ್ ಮಟ್ಟದ ಅಧಿಕಾರಿಗಳು ಹೆಚ್ಚಿನ ಸಿಬ್ಬಂದಿಗಳ ಅಗತ್ಯವಿದ್ದರೆ ಸ್ವಯಂಸೇವಕರನ್ನು ನೇಮಕ ಮಾಡಿಕೊಳ್ಳಲಾಗುತ್ತದೆ. ನಾವು 30 ಲಕ್ಷ ಮನೆಗಳನ್ನು ಸಮೀಕ್ಷೆ ಮಾಡಬೇಕಾಗಿದೆ ಮತ್ತು ಪ್ರತಿ ವಾರ್ಡ್‌ಗೆ 15 ರಿಂದ 20 ತಂಡಗಳು ಬೇಕಾಗುತ್ತವೆ ಎಂದು ಅವರು ಮಾಹಿತಿ ನೀಡಿದರು. 

ಮನೆ ಬಾಗಿಲಿಗೆ ಪೇಪರ್‌ಲೆಸ್ ಸಮೀಕ್ಷೆಯಲ್ಲಿ ಸಂಗ್ರಹಿಸಿದ ವಿವರಗಳನ್ನು ಬಿಬಿಎಂಪಿ ಅಭಿವೃದ್ಧಿಪಡಿಸಿದ ನಮ್ಮಸಮುದಾಯ ಅಪ್ಲಿಕೇಶನ್‌ನಲ್ಲಿ ಅಪ್‌ಲೋಡ್ ಮಾಡಲಾಗುತ್ತದೆ. ಹಿರಿಯ ನಾಗರಿಕರು, ಕೊಮೊರ್ಬಿಡ್ ವ್ಯಕ್ತಿಗಳು, ಗರ್ಭಿಣಿ ಮತ್ತು ಅನಾರೋಗ್ಯ ಪೀಡಿತ ಜನರ ಸಂಖ್ಯೆಯನ್ನು ದಾಖಲಿಸಲು ಈ ಹಿಂದೆ ನಡೆಸಿದ ಆರೋಗ್ಯ ವೀಕ್ಷಣೆ ಸಮೀಕ್ಷೆಯನ್ನು ಸಾಮಾನ್ಯ ಜನರಿಗೆ ಲಸಿಕೆ ನೀಡಲು ಬಳಸಲಾಗುತ್ತದೆ. 60 ವರ್ಷಕ್ಕಿಂತ ಮೇಲ್ಪಟ್ಟವರಿಗೆ ಮತ್ತು 45 ವರ್ಷಕ್ಕಿಂತ ಮೇಲ್ಪಟ್ಟವರಿಗೆ ಕೊಮೊರ್ಬಿಡಿಟಿ ಹೊಂದಿರುವವರಿಗೆ ಲಸಿಕೆ ನೀಡಲು ನೋಂದಣಿ ಆರಂಭಿಸುವುದಾಗಿ ಕೇಂದ್ರ ಸರ್ಕಾರ ಬುಧವಾರ ಪ್ರಕಟಿಸಿತ್ತು.
 

Stay up to date on all the latest ರಾಜ್ಯ news
Poll
Mamata1

ಪಶ್ಚಿಮ ಬಂಗಾಳ ಚುನಾವಣೆಯಲ್ಲಿ ಟಿಎಂಸಿ ಪಕ್ಷಕ್ಕೆ ಗೆಲುವು: ಮಮತಾ ಬ್ಯಾನರ್ಜಿ ಈಗ ಭಾರತದ ಪ್ರಬಲ ಪ್ರತಿಪಕ್ಷ ನಾಯಕಿಯೇ?


Result
ಹೌದು, ನಿರ್ವಿವಾದವಾಗಿ.
ಇಲ್ಲ, ಪ್ರಾದೇಶಿಕ ನಾಯಕಿ ಅಷ್ಟೇ.
flipboard facebook twitter whatsapp