ಕಾರ್ಮಿಕರಿಗೆ ಸ್ಫೋಟಕ ನಿರ್ವಹಣೆ ತರಬೇತಿ ನೀಡದಿರುವುದು ದುರಂತಗಳಿಗೆ ಕಾರಣವಾಗುತ್ತಿದೆ...!

ರಾಜ್ಯದ ಕ್ವಾರಿ ಮತ್ತು ಗಣಿ ಪ್ರದೇಶಗಳಲ್ಲಿ ಸಂಭವಿಸಿದ ಸ್ಫೋಟ ದುರಂತದಲ್ಲಿ ಒಂದು ತಿಂಗಳಿನಲ್ಲಿ ಸಂಭವಿಸಿದ 2 ಸ್ಫೋಟಗಳಲ್ಲಿ 14 ಮಂದಿ ಸಾವನ್ನಪ್ಪಿದ್ದು, ಕಾರ್ಮಿಕರಿಗೆ ಸ್ಫೋಟಕ ನಿರ್ವಹಣೆಯ ತರಬೇತಿ ನೀಡದಿರುವುದು ದುರಂತ ಸಂಭವಿಸಲು ಕಾರಣವಾಗುತ್ತಿದೆ ಎಂದು ಹೇಳಲಾಗುತ್ತಿದೆ. 

Published: 26th February 2021 02:06 PM  |   Last Updated: 26th February 2021 02:12 PM   |  A+A-


File photo

ಸಂಗ್ರಹ ಚಿತ್ರ

The New Indian Express

ಬೆಂಗಳೂರು: ರಾಜ್ಯದ ಕ್ವಾರಿ ಮತ್ತು ಗಣಿ ಪ್ರದೇಶಗಳಲ್ಲಿ ಸಂಭವಿಸಿದ ಸ್ಫೋಟ ದುರಂತದಲ್ಲಿ ಒಂದು ತಿಂಗಳಿನಲ್ಲಿ ಸಂಭವಿಸಿದ 2 ಸ್ಫೋಟಗಳಲ್ಲಿ 14 ಮಂದಿ ಸಾವನ್ನಪ್ಪಿದ್ದು, ಕಾರ್ಮಿಕರಿಗೆ ಸ್ಫೋಟಕ ನಿರ್ವಹಣೆಯ ತರಬೇತಿ ನೀಡದಿರುವುದು ದುರಂತ ಸಂಭವಿಸಲು ಕಾರಣವಾಗುತ್ತಿದೆ ಎಂದು ಹೇಳಲಾಗುತ್ತಿದೆ. 

ಸ್ಫೋಟಕ ಸಂಗ್ರಹಿಸಲು, ಅವುಗಳನ್ನು ನಿರ್ವಹಿಸಲು ಹಾಗೂ ಸರಬರಾಜು ಮಾಡುವ ವೇಳೆ ಕ್ವಾರಿ ಮಾಲೀಕರು ಕಾರ್ಮಿಕರಿಗೆ ತರಬೇತಿಗಳನ್ನು ನೀಡುತ್ತಿಲ್ಲ. ಕೆಲ ಮಾಲೀಕರು ಸುರಕ್ಷತಾ ನಿಮಗಳನ್ನೂ ಪಾಲನೆ ಮಾಡುತ್ತಿಲ್ಲ ಇದರಿಂದ ದುರಂತಗಳು ಸಂಭವಿಸುತ್ತಿವೆ ಎಂದು ಭಾರತೀಯ ಅರಣ್ಯ ಸೇವೆಯ ನಿವೃತ್ತ ಅಧಿಕಾರಿ ಡಾ.ಯುವಿ ಸಿಂಗ್ ಅವರು ಹೇಳಿದ್ದಾರೆ. 

ಗಣಿ ಸ್ಫೋಟಕಗಳ ಸಂಗ್ರಹಣೆ, ನಿರ್ವಹಣೆ, ಬಳಕೆ ಮತ್ತು ವಿಲೇವಾರಿ ಕುರಿತು ಗಣಿ ಸುರಕ್ಷತೆಯ ಮಹಾನಿರ್ದೇಶಕರು (ಡಿಜಿಎಂಎಸ್) ಕಟ್ಟುನಿಟ್ಟಾದ ಮಾರ್ಗಸೂಚಿಗಳನ್ನು ನೀಡಿದ್ದಾರೆ. ನಿಯಮಗಳ ಪ್ರಕಾರ ಪ್ರತೀನಿತ್ಯ ಇದನ್ನು ಪರಿಶೀಲನೆ ನಡೆಸಬೇಕು. ಆದರೆ, ಕಾರ್ಮಿಕರಿಗೆ ಸ್ಫೋಟಕಗಳ ಕುರಿತು ತರಬೇತಿಗಳನ್ನು ನೀಡದೇ ಇರುವುದರಿಂದ ಸ್ಫೋಟಗಳು ಸಂಭವಿಸುತ್ತಿವೆ ಎಂದು ತಿಳಿಸಿದ್ದಾರೆ. 

ಚಿಕ್ಕಬಳ್ಳಾಪುರದಲ್ಲಿ ಸ್ಫೋಟ ಸಂಭವಿಸುವುದಕ್ಕೂ ಗಂಟೆಗಳ ಹಿಂದಷ್ಟೇ ಕ್ವಾರಿ ಮಾಲೀಕ ನಾಗರಾಜ್ ಅವರು ಕ್ವಾರಿ ಎಂಜಿನಿಯರ್ ಉಮಾ ಮಹೇಶ್ ಅವರಿಗೆ ದೂರವಾಣಿ ಕರೆ ಮಾಡಿದ್ದರು. ಈ ವೇಳೆ ಪೊಲೀಸರು ದಾಳಿ ನಡೆಸುವ ಭೀತಿ ಶುರುವಾಗಿದ್ದ ಹಿನ್ನೆಲೆಯಲ್ಲಿ ಶೀಘ್ರಗತಿಯಲ್ಲಿ ಜಿಲೆಟಿನ್ ಕಡ್ಡಿಗಳನ್ನು ವಿಲೇವಾರಿ ಮಾಡುವಂತೆ ತಿಳಿಸಿದ್ದರು ಎಂದು ಮೂಲಗಳು ಮಾಹಿತಿ ನೀಡಿವೆ. 

ಬಳಿಕ ಮಹೇಶ್ ಅವರು ಇದೀಗ ಬಂಧನಕ್ಕೊಳಗಾಗಿರುವ ಕ್ವಾರಿ ಬ್ಲಾಸ್ಟರ್ ಗಣೇಶ್ ಹಾಗೂ ರಾಘವೇಂದ್ರ ರೆಡ್ಡಿಯವರನ್ನು ಸಂಪರ್ಕಿಸಿ, ಸ್ಫೋಟಕಗಳನ್ನು ಯಾವ ರೀತಿ ವಿಲೇವಾರಿ ಮಾಡಬೇಕೆಂದು ಕೇಳಿದ್ದರೆಂದು ತಿಳಿದುಬಂದಿದೆ. 

ಬ್ಯಾಗ್ ನಲ್ಲಿಟ್ಟು ನೀರಿಗೆ ಎಸೆಯಬೇಕು, ನೀರಿಗೆ ಎಸೆದರೆ ಸ್ಫೋಟಕಗಳು ನಿಷ್ಕ್ರಿಯಗೊಳ್ಳುತ್ತವೆಂದು ಹೇಳಿದ್ದೆವು ಎಂದು ಬಂಧಿತರಿಬ್ಬರು ವಿಚಾರಣೆ ವೇಳೆ ಹೇಳಿದ್ದಾರೆಂದು ಮೂಲಗಳು ತಿಳಿಸಿವೆ. 

ಆದರೆ, ಇಬ್ಬರ ಮಾತನ್ನು ಕೇಳದ ಮಹೇಶ್, ಐವರು ಕಾರ್ಮಿಕರ ಜೊತೆಗೆ 12-15 ಕೆಜಿ ಇದ್ದ ಜಿಲೆಟಿನ್ ಕಡ್ಡಿಗಳನ್ನು ವಾಹನದಲ್ಲಿ ನಿರ್ಜನ ಪ್ರದೇಶಕ್ಕೆ ತೆಗೆದುಕೊಂಡು ಹೋಗಿ ಬಿಸಾಡಿದ್ದ. ಬಿಸಾಡುತ್ತಿದ್ದಂತೆಯೇ ಜಿಲೆಟಿನ್ ಕಡ್ಡಿಗಳು ಸ್ಫೋಟಗೊಂಡಿವೆ ಎಂದು ಹೇಳಲಾಗುತ್ತಿದೆ. 


Stay up to date on all the latest ರಾಜ್ಯ news
Poll
Omicron-Covid-variant

ಭಾರತದಲ್ಲಿ ಕೋವಿಡ್‌ನಿಂದ 4.7 ಮಿಲಿಯನ್ ಜನರು ಸಾವನ್ನಪ್ಪಿದ್ದಾರೆ ಎಂಬ WHO ವರದಿ ಮತ್ತು ಅಂಕಿಅಂಶಗಳನ್ನು ನೀವು ಒಪ್ಪುತ್ತೀರಾ?


Result
ಹೌದು, ಒಪ್ಪಬಹುದು
ಇಲ್ಲ, ಒಪ್ಪಲಾಗದು

Comments

Disclaimer : We respect your thoughts and views! But we need to be judicious while moderating your comments. All the comments will be moderated by the kannadaprabha.com editorial. Abstain from posting comments that are obscene, defamatory or inflammatory, and do not indulge in personal attacks. Try to avoid outside hyperlinks inside the comment. Help us delete comments that do not follow these guidelines.

The views expressed in comments published on kannadaprabha.com are those of the comment writers alone. They do not represent the views or opinions of kannadaprabha.com or its staff, nor do they represent the views or opinions of The New Indian Express Group, or any entity of, or affiliated with, The New Indian Express Group. kannadaprabha.com reserves the right to take any or all comments down at any time.

flipboard facebook twitter whatsapp