ಹಲವು ಸಚಿವರಿಗೆ ಹೊಸ 'ಕಾರು ಭಾಗ್ಯ': ನ್ಯೂಮರಾಲಜಿ ಪ್ರಕಾರ ಸಂಖ್ಯೆ ನೋಂದಣಿ!
ಕೊರೊನಾದಿಂದ ರಾಜ್ಯದ ಆರ್ಥಿಕ ಸ್ಥಿತಿ ಹದಗೆಟ್ಟಿದೆ. ಹೀಗಾಗಿ ಅನೇಕ ಮೂಲಭೂತ ಅಭಿವೃದ್ಧಿ ಕಾರ್ಯಗಳಿಗೂ ಕೂಡ ಅನುದಾನವನ್ನು ಕಡಿತಗೊಳಿಸಲಾಗಿದೆ. ಆದರೆ ನಮ್ಮ ಜನಪ್ರತಿನಿಧಿಗಳ ದುಂದುವೆಚ್ಚಕ್ಕೆ ಮಾತ್ರ ಕಡಿವಾಣ ಬಿದ್ದಿಲ್ಲ.
Published: 26th February 2021 11:26 AM | Last Updated: 26th February 2021 01:03 PM | A+A A-

ಸಾಂದರ್ಭಿಕ ಚಿತ್ರ
ಬೆಂಗಳೂರು: ಕೊರೊನಾದಿಂದ ರಾಜ್ಯದ ಆರ್ಥಿಕ ಸ್ಥಿತಿ ಹದಗೆಟ್ಟಿದೆ. ಹೀಗಾಗಿ ಅನೇಕ ಮೂಲಭೂತ ಅಭಿವೃದ್ಧಿ ಕಾರ್ಯಗಳಿಗೂ ಕೂಡ ಅನುದಾನವನ್ನು ಕಡಿತಗೊಳಿಸಲಾಗಿದೆ. ಆದರೆ ನಮ್ಮ ಜನಪ್ರತಿನಿಧಿಗಳ ದುಂದುವೆಚ್ಚಕ್ಕೆ ಮಾತ್ರ ಕಡಿವಾಣ ಬಿದ್ದಿಲ್ಲ.
ಕೊರೊನಾ ವೈರಸ್ ಆರ್ಥಿಕ ಸಂಕಷ್ಟದ ಮಧ್ಯೆ ರಾಜ್ಯದ ಸಚಿವರು ಹಾಗೂ ಸಂಸದರು ಐಷಾರಾಮಿ ಹೊಸ ಕಾರು ಕೊಳ್ಳಲು ಖರೀದಿಯ ಮೊತ್ತವನ್ನು ಹೆಚ್ಚಳ ಮಾಡಿ ಸರ್ಕಾರ ಆದೇಶ ಮಾಡಿದೆ.
ಸಚಿವರುಗಳಿಗಾಗಿ ಸುಮಾರು 10ರಿಂದ 12 ಹೊಸ ಕಾರು ಖರೀದಿ ಮಾಡಲು 3 ಕೋಟಿ ರು ಬಿಡುಗಡೆ ಮಾಡಲಾಗಿದೆ. ಸಿಬ್ಬಂದಿ ಮತ್ತು ಆಡಳಿತ ಸೇವೆಗಳ ಇಲಾಖೆ (ಡಿಪಿಎಆರ್) ಈಗಾಗಲೇ ಪ್ರತಿ ಕಾರಿಗೆ 23 ಲಕ್ಷ ರೂ, ನಿಗದಿ ಪಡಿಸಿದೆ.
ಹೆಚ್ಚಿನ ಸಚಿವರುಗಳು ಟೊಯೋಟಾ ಕ್ರಿಸ್ಟಲ್ ಹೈ ಎಂಡ್ ಮಾಡೆಲ್ ಕಾರು ಬಯಸಿದ್ದಾರೆ ಎಂದು ಸಿಎಂ ಕಚೇರಿ ಮೂಲಗಳು ತಿಳಿಸಿವೆ, ಇದರ ಬೆಲೆ 21.7 ಲಕ್ಷ ರು, ರಾಜ್ಯ ಸರ್ಕಾರದ ವಾಹನಗಳಿಗೆ ರೋಡ್ ಟ್ಯಾಕ್ಸ್ ಇರುವುದಿಲ್ಲ, ಕಳೆದ ವರ್ಷ ಡಿಸೆಂಬರ್ನಲ್ಲಿ, ಇನ್ನೋವಾ ಕ್ರಿಸ್ಟಾದ ಫೇಸ್ಲಿಫ್ಟ್ ಮಾದರಿಯನ್ನು ಬಿಡುಗಡೆ ಮಾಡಲಾಗಿದ್ದು, ಇದರ ಬೆಲೆ ಸುಮಾರು 23 ಲಕ್ಷ ರೂ.ಆಗಿದೆ.
ಆದ್ದರಿಂದ, ಹಣದ ಮಿತಿಯನ್ನು ಹೆಚ್ಚಿಸಲು ಡಿಪಿಎಆರ್ ಅಧಿಕಾರಿಗಳು ಹಣಕಾಸು ಇಲಾಖೆಗೆ ಪತ್ರ ಬರೆದಿದ್ದು ಅನುಮೋದನೆ ಪಡೆದಿದೆ..ಇದೀಗ ರಾಜ್ಯದ 33 ಸಚಿವರು (ಸಿಎಂ ಹೊರತು ಪಡಿಸಿ) ಹಾಗೂ 28 ಸಂಸದರು ಹೊಸ ಐಷಾರಾಮಿ ಕಾರುಗಳನ್ನು ಕೊಳ್ಳಬಹುದಾಗಿದೆ. ಅದಕ್ಕೆ ಸರ್ಕಾರ ತಲಾ 23 ಲಕ್ಷ ರೂಪಾತಿಗಳನ್ನು ಒದಗಿಸಲಿದೆ.
ಮೂಲಗಳ ಪ್ರಕಾರ, ಮೂವರು ಸಂಸದರು ಸೇರಿದಂತೆ 10 ರಿಂದ 12 ಕಾರುಗಳನ್ನು ಖರೀದಿಸುವ ಪ್ರಸ್ತಾಪವಿದೆ. "ನಾವು ಇರುವ ಎಲ್ಲಾ ವಾಹನಗಳನ್ನು ಮಂತ್ರಿಗಳು ಮತ್ತು ಇತರ ಅಧಿಕಾರಿಗಳಿಗೆ ಕೊಟ್ಟಿದ್ದೇವೆ, ಸದ್ಯ ಯಡಿಯೂರಪ್ಪ ಸಂಪುಟದಲ್ಲಿರುವ ಎಲ್ಲಾ ಸಚಿವರುಗಳಿಗೆ ಉತ್ತಮ ಸ್ಥಿತಿಯಿರುವ ವಾಹನಗಳನ್ನು ನೀಡಿದ್ದೇವೆ, ಆದರೆ ಕೆಲವು ಸಚಿವರು ತಮ್ಮ ನೋಂದಣಿ ಸಂಖ್ಯೆ
ಸರಿಯಿಲ್ಲವೆಂದು ನ್ಯೂಮರಾಲಜಿ ಪ್ರಕಾರ ಹೊಸ ಸಂಖ್ಯೆಗಾಗಿ ಹೊಸ ಕಾರು ಖರೀದಿ ಮಾಡಲು ಒತ್ತಡ ಹೇರುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಮಂತ್ರಿಗಳು ಮತ್ತು ಸಂಸದರಿಗೆ ತನ್ನ ಹಣದಿಂದ ಕಾರುಗಳನ್ನು ಖರೀದಿಸಲು ಸರ್ಕಾರಕ್ಕೆ ಅವಕಾಶವಿದೆ. ಸಚಿವರು ಡಿಪಿಎಆರ್ ಅಧಿಕಾರಿಗಳನ್ನು ಸಂಪರ್ಕಿಸಬೇಕು, ಅವರು ಸಿಎಂಗೆ ಪತ್ರ ಬರೆಯುತ್ತಾರೆ, ನಂತರ ಹಣಕಾಸು ಇಲಾಖೆ ಅಂತಿಮ ಅನುಮೋದನೆ ನೀಡುತ್ತದೆ. ಸೆಪ್ಟೆಂಬರ್ 2020 ರಲ್ಲಿ, ನಿಯಮಗಳನ್ನು ಮಾರ್ಪಡಿಸಲಾಯಿತು ಮತ್ತು ರಾಜ್ಯಸಭಾ ಸದಸ್ಯ ಎಚ್.ಡಿ.ದೇವೇಗೌಡ ಅವರಿಗೆ ವೋಲ್ವೋ ಎಕ್ಸ್ಸಿ 60 ನೀಡಲಾಯಿತು, ಇದರ ಬೆಲೆ 60 ಲಕ್ಷ ರೂ. (ರಸ್ತೆ ತೆರಿಗೆ ಹೊರತುಪಡಿಸಿ).