ಮೈಸೂರು- ಬೆಂಗಳೂರು ರಸ್ತೆ: ನೋಟುಗಳ ಹೊತ್ತೊಯ್ಯುತ್ತಿದ್ದ ಲಾರಿ ಪಲ್ಟಿ, ಕೆಲಕಾಲ ಆತಂಕ ಸೃಷ್ಟಿ

ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ಮೈಸೂರು ನೋಟು ಮುದ್ರಣ ಘಟಕದಿಂದ ಬೆಂಗಳೂರಿನತ್ತ ಹೊರಟಿದ್ದ ನೋಟು ತುಂಬಿದ್ದ ಕಂಟೈನರ್ ಲಾರಿಯೊಂದು ರಾಷ್ಟ್ರೀಯ ಹೆದ್ದಾರಿ 275ರಲ್ಲಿ ಉರುಳಿ ಬಿದ್ದಿರುವ ಘಟನೆ ರಾಮನಗರ ಜಿಲ್ಲೆಯ ಕಲ್ಲುಗೋಪಹಳ್ಳಿ ಬಳಿ ನಡೆದಿದೆ. 

Published: 26th February 2021 07:38 AM  |   Last Updated: 26th February 2021 01:26 PM   |  A+A-


container truck carrying currency toppled on the road

ಪಲ್ಟಿಯಾಗಿ ಬಿದ್ದಿರುವ ಲಾರಿ

Posted By : Manjula VN
Source : The New Indian Express

ರಾಮನಗರ: ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ಮೈಸೂರು ನೋಟು ಮುದ್ರಣ ಘಟಕದಿಂದ ಬೆಂಗಳೂರಿನತ್ತ ಹೊರಟಿದ್ದ ನೋಟು ತುಂಬಿದ್ದ ಕಂಟೈನರ್ ಲಾರಿಯೊಂದು ರಾಷ್ಟ್ರೀಯ ಹೆದ್ದಾರಿ 275ರಲ್ಲಿ ಉರುಳಿ ಬಿದ್ದಿರುವ ಘಟನೆ ರಾಮನಗರ ಜಿಲ್ಲೆಯ ಕಲ್ಲುಗೋಪಹಳ್ಳಿ ಬಳಿ ನಡೆದಿದೆ. 

ಮೈಸೂರಿನ ನೋಟು ಮುದ್ರಣ ಘಟಕದಿಂದ 18 ಕಂಟೈನರ್ ಲಾರಿಗಳು ಕೈಗಾರಿಕಾ ಭದ್ರತಾ ಪಡೆಯ ರಕ್ಷಣೆಯಲ್ಲಿ ಗುರುವಾರ ಮಧ್ಯಾಹ್ನ ಬೆಂಗಳೂರಿನತ್ತ ಹೊರಟಿದ್ದವು. 

ರಾಮನಗರ-ಬಿಡದಿ ನಡುವಿನ ಕಲ್ಲುಗೋಪಹಳ್ಳಿ ಬಳಿ ರಸ್ತೆ ಕಾಮಗಾರಿ ಕಾರಣ ದೊಡ್ಡ ತಿರುವು ನಿರ್ಮಾಣ ಮಾಡಲಾಗಿತ್ತು. ಕಂಟೈನರ್ ವೊಂದು ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಗೆ ಉರುಳಿದೆ. ಕಂಟೈನರ್ ಚಾಲಕನಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಬಿಡದಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಉಳಿದ 17 ಕಂಟೈನರ್ ಗಳು ಭದ್ರತೆಯೊಂದಿಗೆ ಬೆಂಗಳೂರಿಗೆ ತೆರಳಿವೆ. ಉರುಳಿ ಬಿದ್ದ ಕಂಟೈನರ್ ನ್ನು ಮೈಸೂರಿಗೆ ಒಯ್ದು ನೋಟುಗಳನ್ನು ಪರಿಶೀಲಿಸಲಾಗುವುದು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. 

Stay up to date on all the latest ರಾಜ್ಯ news
Poll
The grand Central Vista project is estimated to cost `20,000 crore

ಕೋವಿಡ್ ಬಿಕ್ಕಟ್ಟಿನ ದೃಷ್ಟಿಯಿಂದ ಪ್ರಧಾನಿ ಮೋದಿ ಸೆಂಟ್ರಲ್ ವಿಸ್ಟಾ ಯೋಜನೆಯನ್ನು ತಡೆಹಿಡಿಯಬೇಕೇ?


Result
ಹೌದು
ಬೇಡ
flipboard facebook twitter whatsapp