ರಾಜ್ಯದ ಜನತೆಗೆ ಒಳ್ಳೆಯ ಬಜೆಟ್ ಕೊಡುತ್ತೇನೆ: ಸಿಎಂ ಬಿ ಎಸ್ ಯಡಿಯೂರಪ್ಪ 

ಈ ಬಾರಿ ರಾಜ್ಯದ ಜನತೆಗೆ ಉತ್ತಮ ಬಜೆಟ್ ಕೊಡುತ್ತೇನೆ, ಬೇಕಾದ ಸೌಲಭ್ಯ ಒದಗಿಸುವುದೇ ನನ್ನ ಗುರಿ ಎಂದು ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಹೇಳಿದ್ದಾರೆ.

Published: 27th February 2021 11:02 AM  |   Last Updated: 05th March 2021 07:00 PM   |  A+A-


Ministers and leaders facilitated CM B S Yedyurappa

ಇಂದು ಬೆಳಗ್ಗೆ ಸಚಿವರು, ಪಕ್ಷದ ಕಾರ್ಯಕರ್ತರಿಂದ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪನವರಿಗೆ ಸನ್ಮಾನ

Posted By : Sumana Upadhyaya
Source : Online Desk

ಬೆಂಗಳೂರು: ಈ ಬಾರಿ ರಾಜ್ಯದ ಜನತೆಗೆ ಉತ್ತಮ ಬಜೆಟ್ ಕೊಡುತ್ತೇನೆ, ಬೇಕಾದ ಸೌಲಭ್ಯ ಒದಗಿಸುವುದೇ ನನ್ನ ಗುರಿ ಎಂದು ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಹೇಳಿದ್ದಾರೆ.

ಅವರು ಇಂದು ತಮ್ಮ 79ನೇ ಹುಟ್ಟುಹಬ್ಬದ ಪ್ರಯುಕ್ತ ದೇವಸ್ಥಾನಕ್ಕೆ ಭೇಟಿ ನೀಡಿ ತಮ್ಮ ಹೆಸರಿನಲ್ಲಿ ಪೂಜೆ ಮಾಡಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು.

ರಾಜ್ಯದ ಜನತೆ ಸಂಕಷ್ಟಗಳಿಂದ ದೂರವಾಗಿ ಉತ್ತಮವಾದ ಬದುಕು ನಡೆಸಬೇಕೆಂಬುದೇ ನನ್ನ ಬಯಕೆಯಾಗಿದೆ, ಈ ನಿಟ್ಟಿನಲ್ಲಿ ಉತ್ತಮ ಬಜೆಟ್ ಕೊಡುವುದು ನನ್ನ ಕರ್ತವ್ಯ ಎಂದರು.

ಇನ್ನು ಸಿಎಂ ಬಿ ಎಸ್ ಯಡಿಯೂರಪ್ಪ ಅವರ ಕುಟುಂಬ ಸದಸ್ಯರು ಸಹ ತಮ್ಮ ಮನೆಯ ಯಜಮಾನನ ಹುಟ್ಟುಹಬ್ಬವನ್ನು ವಿಶೇಷವಾಗಿ ಆಚರಿಸುತ್ತಿದ್ದಾರೆ. ಅವರ ಕುಟುಂಬಸ್ಥರು ಚಾಮುಂಡೇಶ್ವರಿ ಪ್ರಸಾದವನ್ನು ತಂದು ಆರತಿ ಬೆಳಗಿದ್ದಾರೆ. 

Stay up to date on all the latest ರಾಜ್ಯ news
Poll
The grand Central Vista project is estimated to cost `20,000 crore

ಕೋವಿಡ್ ಬಿಕ್ಕಟ್ಟಿನ ದೃಷ್ಟಿಯಿಂದ ಪ್ರಧಾನಿ ಮೋದಿ ಸೆಂಟ್ರಲ್ ವಿಸ್ಟಾ ಯೋಜನೆಯನ್ನು ತಡೆಹಿಡಿಯಬೇಕೇ?


Result
ಹೌದು
ಬೇಡ
flipboard facebook twitter whatsapp