ಸಿಲಿಕಾನ್ ಸಿಟಿಯಲ್ಲಿ ಹೆಚ್ಚುತ್ತಿರುವ ಕೊರೋನಾ ಅಬ್ಬರ: 3 ಕ್ಲಸ್ಟರ್'ನಲ್ಲಿ 28 ಮಂದಿಗೆ ಸೋಂಕು, ಹೆಚ್ಚಿದ ಆತಂಕ

ನಗರದಲ್ಲಿ ಶುಕ್ರವಾರ ಒಂದೇ ದಿನ ಕೊರೋನಾ ಸೋಂಕಿನ 3 ಕ್ಲಸ್ಟರ್'ಗಳು ಪತ್ತೆಯಾಗಿದ್ದು, ಜನರಲ್ಲಿ ಆತಂಕ ಹೆಚ್ಚಾಗುವಂತೆ ಮಾಡಿದೆ. ಯಲಹಂಕದಲ್ಲಿಯೇ 2 ಕಾಲೇಜು ಮತ್ತು ಒಂದು ಅಪಾರ್ಟ್'ಮೆಂಟ್ ನಲ್ಲಿ ಒಟ್ಟು 28 ಮಂದಿಯಲ್ಲಿ ಸೋಂಕಿತರು ಪತ್ತೆಯಾಗಿದ್ದಾರೆ.

Published: 27th February 2021 08:42 AM  |   Last Updated: 27th February 2021 09:02 AM   |  A+A-


File photo

ಸಂಗ್ರಹ ಚಿತ್ರ

Posted By : Manjula VN
Source : The New Indian Express

ಬೆಂಗಳೂರು: ನಗರದಲ್ಲಿ ಶುಕ್ರವಾರ ಒಂದೇ ದಿನ ಕೊರೋನಾ ಸೋಂಕಿನ 3 ಕ್ಲಸ್ಟರ್'ಗಳು ಪತ್ತೆಯಾಗಿದ್ದು, ಜನರಲ್ಲಿ ಆತಂಕ ಹೆಚ್ಚಾಗುವಂತೆ ಮಾಡಿದೆ. ಯಲಹಂಕದಲ್ಲಿಯೇ 2 ಕಾಲೇಜು ಮತ್ತು ಒಂದು ಅಪಾರ್ಟ್'ಮೆಂಟ್ ನಲ್ಲಿ ಒಟ್ಟು 28 ಮಂದಿಯಲ್ಲಿ ಸೋಂಕಿತರು ಪತ್ತೆಯಾಗಿದ್ದಾರೆ.

ಯಲಹಂಕ ವಲಯದ ಅಗ್ರಗ್ರಾಮಿ ಕಾಲೇಜಿನಲ್ಲಿ ಫೆ.23-24ರಂದು 266 ಜನರಿಗೆ ಕೊರೋನಾ ಪರೀಕ್ಷೆ ಮಾಡಲಾಗಿದ್ದು, 8 ವಿದ್ಯಾರ್ಥಿಗಳಲ್ಲಿ ಸೋಂಕು ದೃಢಪಟ್ಟಿದೆ.

ಯಲಹಂಕ ನ್ಯೂ ಟೌನ್ ನಲ್ಲಿರುವ ಪೂರ್ವಾವೆನೆಜಿಯಾ ಅಪಾರ್ಟ್'ಮೆಂಟ್ ನಲ್ಲಿ 111 ಮಂದಿಯನ್ನು ಕೊರೋನಾ ಪರೀಕ್ಷೆಗೆ ಒಳಪಡಿಸಲಾಗಿದ್ದು, 6 ಮಂದಿಯಲ್ಲಿ ಸೋಂಕು ದೃಢಪಟ್ಟಿದೆ. ಹಾಗೆಯೇ ಕಳೆದ ನಾಲ್ಕು ದಿನಗಳಲ್ಲಿ ಸಂಭ್ರಮ ಕಾಲೇಜಿನಲ್ಲಿ 1034 ಮಂದಿಗೆ ಆರ್'ಟಿಪಿಸಿಆರ್ ಮತ್ತು 117 ರ್ಯಾಪಿಡ್ ಆ್ಯಂಟಿಜನ್ ಟೆಸ್ಟ್ ಮಾಡಲಾಗಿದ್ದು 15 ವಿದ್ಯಾರ್ಥಿಗಳಲ್ಲಿ ಸೋಂಕು ಪತ್ತೆಯಾಗಿದೆ ಎಂದು ಆರೋಗ್ಯ ಇಲಾಖೆಯ ವರದಿಗಳು ತಿಳಿಸಿವೆ.

ಎರಡೂ ಕಾಲೇಜುಗಳಲ್ಲಿ ಕೆಲ ವಿದ್ಯಾರ್ಥಿಗಳು ಇತ್ತೀಚೆಗೆ ಕೇರಳದಿಂದ ಬಂದಿದ್ದರು, ಆದರೆ ಗಡಿಯಲ್ಲಿ ಇವರನ್ನು ಪರೀಕ್ಷೆಗೊಳಪಡಿಸಲಾಗಿಲ್ಲ. ಈ ನಡುವೆ ಕಾಲೇಜು ಆಡಳಿತ ಮಂಡಳಿ ಕೊರೋನಾ ಪರೀಕ್ಷೆ ಕಡ್ಡಾಯಗೊಳಿಸಿದ್ದರಿಂದ ಅಗ್ರಗಾಮಿ ಕಾಲೇಜಿನಲ್ಲಿ ಕೆಲವು ವಿದ್ಯಾರ್ಥಿಗಳಲ್ಲಿ ಫೆಬ್ರವರಿ 23 ರಂದು ಕೊರೋನಾ ಪಾಸಿಟಿವ್ ಬಂದಿದೆ. ಇನ್ನು ಸಂಭ್ರಮ ಕಾಲೇಜಿನಲ್ಲಿ ಫೆಬ್ರವರಿ 22 ರಂದು ಮೊದಲ ಪ್ರಕರಣ ಪತ್ತೆಯಾಗಿದೆ.

ಕಾಲೇಜಿನ ಎಲ್ಲಾ ವಿದ್ಯಾರ್ಥಿಗಳು ಮತ್ತು ಸಿಬ್ಬಂದಿಯನ್ನು ಪರೀಕ್ಷೆಗೊಳಪಡಿಸಲಾಗುತ್ತಿದೆ ಯಲಹಂಕದ ಆರೋಗ್ಯ ಅಧಿಕಾರಿ ಹೇಳಿದ್ದಾರೆ.

ಅಗ್ರಗಾಮಿ ಕಾಲೇಜಿನ 266 ಜನರಲ್ಲಿ ಐವರು ಧನಾತ್ಮಕ ಪರೀಕ್ಷೆ ಮಾಡಿದ್ದಾರೆ. ವಿದ್ಯಾರ್ಥಿಗಳ ಪ್ರಾಥಮಿಕ ಮತ್ತು ದ್ವಿತೀಯಕ ಸಂಪರ್ಕಗಳಲ್ಲಿ ಮೂವರು ಸಹ ಸೋಂಕಿಗೆ ಒಳಗಾಗಿದ್ದರು. ಅವರನ್ನು ಯಲಹಂಕ ಜನರಲ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಅಗ್ರಗಾಮಿ ಕಾಲೇಜಿನಲ್ಲಿ ಈ ವರೆಗೂ 266 ಮಂದಿಯಲ್ಲಿ ಕೊರೋನಾ ಪಾಸಿಟಿವ್ ಬಂದಿದ್ದು, ಇವರೊಂದಿಗೆ ಸಂಪರ್ಕದಲ್ಲಿದ್ದವರಲ್ಲೂ ಸೋಂಕು ಪತ್ತೆಯಾಗಿದೆ. ಇದೀಗ ಲ್ಲರೂ ಯಲಹಂಕ ಜನರಲ್ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಸಂಭಾರಂ ಕಾಲೇಜಿನ ಒಂಬತ್ತು ವಿದ್ಯಾರ್ಥಿಗಳು ಮತ್ತು ಅವರ ಜೊತೆಗೆ ಸಂಪರ್ಕದಲ್ಲಿದ್ದ 6 ಮಂದಿಯಲ್ಲಿ ಸೋಂಕು ದೃಢಪಟ್ಟಿದೆ. ಒಟ್ಟಾರೆಯಾಗಿ, ಕಾಲೇಜಿನಲ್ಲಿ 1,156 ಜನರನ್ನು ಪರೀಕ್ಷೆಗೊಳಪಡಿಸಲಾಗಿದೆ. ಈ ಎಲ್ಲಾ ಬೆಳವಣಿಗೆ ಹಿನ್ನೆಲೆಯಲ್ಲಿ ಕಾಲೇಜಿನ ಬಹುತೇಕ ವಿದ್ಯಾರ್ಥಿಗಳು ಮನೆಯಲ್ಲಿ ಐಸೋಲೇಷನ್ ನಲ್ಲಿ ಇದ್ದಾರೆಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಪಿಜಿಗಳಲ್ಲಿರುವ ವಿದ್ಯಾರ್ಥಿಗಳೂ ಕೂಡ ಪ್ರತ್ಯೇಕವಾಗಿರುವಂತೆ ಸೂಜಿಸಲಾಗಿದ್ದು, ಎಲ್ಲರ ಆರೋಗ್ಯದ ಮೇಲೆ ನಿಗಾ ಇರಿಸಲಾಗಿದೆ ಎಂದು ತಿಳಿಸಿದ್ದಾರೆ.

ಈ ನಡುವೆ ಮುಂಬೈಯಿಂದ ಯಲಹಂಕದ ಪೂರ್ವವೆನೆಜಿಯಾ ಅಪಾರ್ಟ್‌ಮೆಂಟ್‌ಗೆ ಮರಳಿದ್ದ 50 ವರ್ಷದ ವ್ಯಕ್ತಿಯೊಬ್ಬರಲ್ಲೂ ಕೊರೋನಾ ದೃಢಪಟ್ಟಿದೆ. ವ್ಯಕ್ತಿಯ ಜೊತೆಗೆ ಅಪಾರ್ಟ್'ಮೆಂಟ್ ನಲ್ಲಿದ್ದವರಲ್ಲೂ ಸೋಂಕು ಪತ್ತೆಯಾಗಿದೆ. ಆಪಾರ್ಟ್'ಮೆಂಟ್'ಗೆ ಬಂದಿದ್ದ ವ್ಯಕ್ತಿ ಮತ್ತೆ ಮುಂಬೈಗೆ ಮರಳಲು ಮುಂದಾಗಿದ್ದರು. ಈ ವೇಳೆ ಕೊರೋನಾ ಪರೀಕ್ಷೆ ಮಾಡಿಸಿಕೊಂಡಿದ್ದು, ಸೋಂಕು ದೃಢಪಟ್ಟಿದೆ. ಇದೀಗ ವ್ಯಕ್ತಿ ಹಾಗೂ ಆತನ ಜೊತೆಗಿದ್ದವರು ಸ್ಥಳೀಯ ಆಸ್ಪತ್ರೆಗೆ ದಾಖಲಾಗಿದ್ದು, ಸಂಪರ್ಕದಲ್ಲಿದ್ದವರು ಹೋಂ ಐಸೋಲೇಷನ್ ನಲ್ಲಿದ್ದಾರೆಂದು ಆರೋಗ್ಯಾಧಿಕಾರಿಗಳು ಹೇಳಿದ್ದಾರೆ.

Stay up to date on all the latest ರಾಜ್ಯ news
Poll
The grand Central Vista project is estimated to cost `20,000 crore

ಕೋವಿಡ್ ಬಿಕ್ಕಟ್ಟಿನ ದೃಷ್ಟಿಯಿಂದ ಪ್ರಧಾನಿ ಮೋದಿ ಸೆಂಟ್ರಲ್ ವಿಸ್ಟಾ ಯೋಜನೆಯನ್ನು ತಡೆಹಿಡಿಯಬೇಕೇ?


Result
ಹೌದು
ಬೇಡ
flipboard facebook twitter whatsapp