ರಾಜ್ಯ ಬಜೆಟ್ 2021-2022: ಬಜೆಟ್ ಪೂರ್ವ ಸಭೆಯಲ್ಲಿ ಬೆಂಗಳೂರು ಅಗತ್ಯತೆಗಳ ಕುರಿತು ಚರ್ಚೆ!

ಪ್ರಸಕ್ತ ಸಾಲಿನ ರಾಜ್ಯ ಬಜೆಟ್'ಗೆ ದಿನಗಣನೆ ಶುರುವಾಗಿದ್ದು, ಈ ನಡುವಲ್ಲೇ ಬಜೆಟ್'ಗೆ ಸಂಬಂಧಿಸಿದಂತೆ ಬಿಬಿಎಂಪಿ ಕೇಂದ್ರ ಕಚೇರಿಯಲ್ಲಿ ಶುಕ್ರವಾರ ಶಾಸಕರು–ಸಚಿವರ ಸಭೆ ನಡೆಯಿತು.

Published: 27th February 2021 09:24 AM  |   Last Updated: 05th March 2021 07:01 PM   |  A+A-


Ashwath Narayan

ಅಶ್ವತ್ಥ್ ನಾರಾಯಣ್

Posted By : Manjula VN
Source : The New Indian Express

ಬೆಂಗಳೂರು: ಪ್ರಸಕ್ತ ಸಾಲಿನ ರಾಜ್ಯ ಬಜೆಟ್'ಗೆ ದಿನಗಣನೆ ಶುರುವಾಗಿದ್ದು, ಈ ನಡುವಲ್ಲೇ ಬಜೆಟ್'ಗೆ ಸಂಬಂಧಿಸಿದಂತೆ ಬಿಬಿಎಂಪಿ ಕೇಂದ್ರ ಕಚೇರಿಯಲ್ಲಿ ಶುಕ್ರವಾರ ಶಾಸಕರು–ಸಚಿವರ ಸಭೆ ನಡೆಯಿತು.

ಸಭೆಯಲ್ಲಿ ಪಾಲ್ಗೊಂಡಿದ್ದ ಆಯುಕ್ತ ಎನ್.ಮಂಜುನಾಥ್ ಪ್ರಸಾದ್, ಉಪಮುಖ್ಯಮಂತ್ರಿ ಡಾ. ಸಿ.ಎನ್.ಅಶ್ವತ್ಥ ನಾರಾಯಣ, ಸಚಿವರಾದ ವಿ.ಸೋಮಣ್ಣ, ಅರವಿಂದ ಲಿಂಬಾವಳಿ, ಶಾಸಕರಾದ ಆರ್.ಮಂಜುನಾಥ್, ಸುರೇಶ್ ಬಿ.ಎಸ್, ಮುನಿರತ್ನ, ಕೆ.ಜೆ.ಜಾರ್ಜ್, ಅಖಂಡ ಶ್ರೀನಿವಾಸಮೂರ್ತಿ, ರಿಜ್ವಾನ್ ಆರ್ಷದ್, ಎನ್.ಎ. ಹ್ಯಾರಿಸ್, ಉದಯ್ ಬಿ. ಗರುಡಾಚಾರ್, ಸತೀಶ್ ರೆಡ್ಡಿ, ಸೌಮ್ಯಾ ರೆಡ್ಡಿ, ವಿಧಾನ ಪರಿಷತ್ ಸದಸ್ಯರಾದ ಕೆ.ಗೋವಿಂದ ರಾಜು, ಅ.ದೇವೇಗೌಡ ಹಾಗೂ ಪಿ.ಆರ್. ರಮೇಶ್‌, ಎಚ್‌.ಎಂ. ರಮೇಶ್ ಗೌಡ, ಗೌರವ್ ಗುಪ್ತಾ ಅವರು ಬೆಂಗಳೂರು ಅಗತ್ಯತೆಗಳ ಕುರಿತು ಚರ್ಚೆ ನಡೆಸಿದರು.

ಸಭೆಯಲ್ಲಿ ಬಿಬಿಎಂಪಿ ಆದಾಯ, ಆಸ್ತಿ ತೆರಿಗೆ, ಸಂಪನ್ಮೂಲ ಕ್ರೋಢೀಕರಣ ಸೇರಿದಂತೆ ಹಲವು ವಿಚಾರಗಳ ಕುರಿತು ಅಧಿಕಾರಿಗಳು ಚರ್ಚೆ ನಡೆಸಿದರು.

ನಗರದಲ್ಲಿ ಪಾಲಿಕೆಗೆ ಬರುವ ಆದಾಯವನ್ನು ಗಮನದಲ್ಲಿಟ್ಟುಕೊಂಡು, ಸೋರಿಕೆಯಾಗುತ್ತಿರುವ ಆಸ್ತಿ ತೆರಿಗೆ ತಡೆಗಟ್ಟಲು ಅಗತ್ಯ ಕ್ರಮ ಕೈಗೊಂಡು ಪಾಲಿಕೆಯ ಸಂಪನ್ಮೂಲಗಳನ್ನು ಕ್ರೋಢೀಕರಿಸಿ ಆದಾಯವನ್ನು ಹೆಚ್ಚಿಸಲು ಕ್ರಮವಹಿಸಬೇಕು. ‘ಬಿ’ಯಿಂದ ‘ಎ’ ಖಾತಾ ವರ್ಗೀಕರಣ ಮಾಡಿ ಹೆಚ್ಚಿನ ಸಂಪನ್ಮೂಲ ಕ್ರೋಢೀಕರಿಸುವುದು. ತೆರಿಗೆ ವ್ಯಾಪ್ತಿಗೆ ಒಳಪಡದ ಆಸ್ತಿಗಳನ್ನು ತೆರಿಗೆ ವ್ಯಾಪ್ತಿಗೆ ತರುವುದು. ಪಾಲಿಕೆ ಗುತ್ತಿಗೆ ನೀಡಿ ಆಸ್ತಿಗಳಿಂದ ಬಾಕಿ ಹಣ ಸಂಗ್ರಹಿಸಲು ಕ್ರಮವಹಿಸುವುದು. ಪ್ರಮುಖವಾಗಿ ವಸ್ತುಸ್ಥಿತಿ ಆಯವ್ಯಯವನ್ನು ಮಂಡಿಸಲು ಆದ್ಯತೆ ನೀಡಬೇಕೆಂದು ಸಚಿವರು ಹಾಗೂ ಶಾಸಕರು ಸಲಹೆ ನೀಡಿದರು.

ಪಾಲಿಕೆಯು ಕಸ ನಿರ್ವಹಣೆ ಪ್ರಕ್ರಿಯೆ ಜತೆಗೆ ಉದ್ಯಾನ, ಶಾಲೆ, ಶೌಚಾಲಯಗಳ ಸಮರ್ಪಕ ನಿರ್ವಹಣೆಗೆ ಆದ್ಯತೆ ನೀಡಬೇಕು. ಬೀದಿ ದೀಪಗಳ, ರಾಜ ಕಾಲುವೆ ನಿರ್ವಹಣೆ, ಪಾದಚಾರಿ ಮಾರ್ಗಗಳಲ್ಲಿ ಸುಗಮ ಸಂಚಾರ ವ್ಯವಸ್ಥೆಗೆ ಪ್ರಾಮುಖ್ಯತೆ ಕೊಡಬೇಕು. ಈಗಾಗಲೇ ಕೈಗೊಂಡಿರುವ ಕಾಮಗಾರಿಗಳನ್ನು ತ್ವರಿತವಾಗಿ ಪೂರ್ಣಗೊಳಿಸಲು ಕ್ರಮ ಕೈಗೊಳ್ಳಬೇಕು. ಟಿಡಿಆರ್‌ ನೀಡುವ ಸಂಬಂಧ ಇರುವ ತೊಡಕುಗಳನ್ನು ನಿವಾರಿಸಿ ರಸ್ತೆ ಅಗಲೀಕರಣಕ್ಕೆ ಒತ್ತು ನೀಡುವುದು. ಹಾಗೆಯೇ 110 ಹಳ್ಳಿಗಳಲ್ಲಿ ಅಭಿವೃದ್ಧಿ ಕೈಗೊಳ್ಳಬೇಕು. ಕೆರೆಗಳ ಅಭಿವೃದ್ಧಿಗೆ ಹೆಚ್ಚು ಗಮನ ಹರಿಸಬೇಕು ಎಂದು ಸಲಹೆ ನೀಡಿದರು.

Stay up to date on all the latest ರಾಜ್ಯ news
Poll
Kumbh-Covid-19

ಚುನಾವಣಾ ಸಮಾವೇಶ, ಕುಂಭಮೇಳ, ಧಾರ್ಮಿಕ ಸಭೆಗಳು ದೇಶದಲ್ಲಿ ಕೋವಿಡ್-19 ಪರಿಸ್ಥಿತಿಯನ್ನು ಹದಗೆಡಿಸುತ್ತಿವೆಯೇ?


Result
ಹೌದು, ಅದು ನಿಜ.
ಇಲ್ಲ, ಖಂಡಿತ ಅಲ್ಲ.
flipboard facebook twitter whatsapp