ಕೃಷಿ ಶಿಕ್ಷಣದಲ್ಲಿ ರೈತರ ಮಕ್ಕಳಿಗೆ ಶೇ.50 ಮೀಸಲಾತಿ ಹೆಚ್ಚಿಸಲು ಪ್ರಸ್ತಾವ- ಸಚಿವ ಬಿ. ಸಿ. ಪಾಟೀಲ್ 

ರೈತರ ಮಕ್ಕಳು ಕೃಷಿ ಶಿಕ್ಷಣ ಪಡೆಯಲು ಶೇ 40 ರಷ್ಟು ಮೀಸಲಾತಿ ಇದ್ದು, ಮುಂದಿನ ರಾಜ್ಯ ಬಜೆಟ್ ನಲ್ಲಿ ಅದನ್ನು ಶೇ.50 ಕ್ಕೆ ಹೆಚ್ಚಿಸಲು ಮುಖ್ಯಮಂತ್ರಿಗಳಿಗೆ ಪ್ರಸ್ತಾವ ಸಲ್ಲಿಸಲಾಗಿದೆ ಎಂದು  ಕೃಷಿ ಸಚಿವ  ಬಿ.ಸಿ‌.ಪಾಟೀಲ್ ಹೇಳಿದ್ದಾರೆ.

Published: 27th February 2021 08:48 PM  |   Last Updated: 27th February 2021 08:53 PM   |  A+A-


BC_Patil1

ಕೃಷಿ ವಿವಿ ಘಟಿಕೋತ್ಸವದಲ್ಲಿ ಪದವಿ ಪ್ರದಾನ ಮಾಡಿದ ಸಚಿವ ಬಿ. ಸಿ. ಪಾಟೀಲ್

Posted By : Nagaraja AB
Source : UNI

ಧಾರವಾಡ: ರೈತರ ಮಕ್ಕಳು ಕೃಷಿ ಶಿಕ್ಷಣ ಪಡೆಯಲು ಶೇ 40 ರಷ್ಟು ಮೀಸಲಾತಿ ಇದ್ದು, ಮುಂದಿನ ರಾಜ್ಯ ಬಜೆಟ್ ನಲ್ಲಿ ಅದನ್ನು ಶೇ.50 ಕ್ಕೆ ಹೆಚ್ಚಿಸಲು ಮುಖ್ಯಮಂತ್ರಿಗಳಿಗೆ ಪ್ರಸ್ತಾವ ಸಲ್ಲಿಸಲಾಗಿದೆ ಎಂದು  ಕೃಷಿ ಸಚಿವ  ಬಿ.ಸಿ‌.ಪಾಟೀಲ್ ಹೇಳಿದ್ದಾರೆ.

ಧಾರವಾಡದ ಕೃಷಿ ವಿಶ್ವವಿದ್ಯಾಲಯದ ರೈತರ ಜ್ಞಾನಾಭಿವೃದ್ಧಿ ಕೇಂದ್ರದಲ್ಲಿ  ನಡೆದ 33 ನೇ ಘಟಿಕೋತ್ಸವ  ಕಾರ್ಯಕ್ರಮದಲ್ಲಿ ಪದವಿಗಳನ್ನು ಪ್ರದಾನ ಮಾಡಿ,ಪ್ರತಿಜ್ಞಾ ವಿಧಿ ಬೋಧಿಸಿ ಮಾತನಾಡಿದರು.

ರಾಜ್ಯದ ಬಹುತೇಕ ಕೃಷಿ ವಿಶ್ವವಿದ್ಯಾಲಯಗಳಲ್ಲಿ ಮಾನವ ಸಂಪನ್ಮೂಲದ ಕೊರತೆ ನಿಭಾಯಿಸಲು, ಈಗಾಗಲೇ ಸಹಾಯಕ ಪ್ರಾಧ್ಯಾಪಕರನ್ನು ನೇಮಕ ಮಾಡಲು ನೂತನ ಸ್ಕೋರ್ ಕಾರ್ಡನ್ನು ಅನುಮೋದಿಸಲಾಗಿದೆ. ಕೃಷಿ ವಿಶ್ವವಿದ್ಯಾಲಯದ ಅಧಿಕಾರಿ ಹುದ್ದೆಗಳ ನೇಮಕಾತಿ ಮಾಡಲು ಅನುಮತಿ ನೀಡಲಾಗಿದೆ ಎಂದು ಅವರು ತಿಳಿಸಿದರು.

ಇತ್ತೀಚಿನ ದಿನಗಳಲ್ಲಿ ಕೃಷಿ ಶಿಕ್ಷಣಕ್ಕೆ ವಿದ್ಯಾರ್ಥಿಗಳಿಗಿಂತಲೂ ವಿದ್ಯಾರ್ಥಿನಿಯರೇ ಅಧಿಕವಾಗಿ ಬರುತ್ತಿದ್ದಾರೆ. ಶೇ.50ಕ್ಕಿಂತ ಹೆಚ್ಚು ವಿದ್ಯಾರ್ಥಿನಿಯರ ಸಂಖ್ಯೆಯೇ ಇದೆ.ಆದರೆ. ಮಹಿಳಾ ಉದ್ದಿಮೆದಾರರ ಪ್ರಮಾಣ ಶೇ.14 ಹಾಗೂ ಮಹಿಳಾ ಉದ್ಯೋಗಿಗಳ ಪ್ರಮಾಣ ಶೇ.25ರಷ್ಟು ಮಾತ್ರ ಇದೆ ಎಂದು ಹೇಳಿದರು.

ಕೇವಲ ಶೇ.2 ರಷ್ಟು ಆಹಾರ ಸಂಸ್ಕರಣೆ ಇದೆ. ಕೃಷಿ ಉತ್ಪನ್ನಗಳ ಮೌಲ್ಯವರ್ಧನೆಗೆ ಒತ್ತು ನೀಡದ ಹೊರತು ಕೃಷಿ ಅಭಿವೃದ್ಧಿ ಸಾಧ್ಯವಿಲ್ಲ. ರಾಜ್ಯದಲ್ಲಿಯೂ ಕೃಷಿ ಸಂಸ್ಕರಣಾ ಘಟಕಗಳ ಸ್ಥಾಪನೆಗೆ 4525 ಕೋಟಿ ರೂ.ಗಳನ್ನು ವಿನಿಯೋಗಿಸಲಾಗುತ್ತಿದೆ. ರೈತ ಬೆಳೆದ ಬೆಳೆಗಳನ್ನು ಅವರೇ ಸಂಸ್ಕರಣೆ ಮಾಡಿ, ಮಾರಾಟ ಮಾಡಿದರೆ ಆರ್ಥಿಕ ಸ್ವಾವಲಂಬಿಗಳಾಗಲು ಸಾಧ್ಯವಿದೆ ಎಂದು ಬಿ. ಸಿ. ಪಾಟೀಲ್ ಅಭಿಪ್ರಾಯಪಟ್ಟರು.

 


Stay up to date on all the latest ರಾಜ್ಯ news
Poll
Yediyurappa

ಯಡಿಯೂರಪ್ಪ ಅವರು ಕರ್ನಾಟಕದ ಮುಖ್ಯಮಂತ್ರಿಯಾಗಿ ತಮ್ಮ ಅವಧಿಯನ್ನು ಪೂರ್ಣಗೊಳಿಸಲು ಸಾಧ್ಯವಾಗುವುದೇ?


Result
ಹೌದು
ಇಲ್ಲ
flipboard facebook twitter whatsapp