10 ರೂ.ಲಂಚ ಪಡೆದಿರುವುದು ಸಾಬೀತಾದರೆ ಸಚಿವ ಸ್ಥಾನಕ್ಕೆ ರಾಜೀನಾಮೆ- ಸಚಿವ ನಿರಾಣಿ ಬಹಿರಂಗ ಸವಾಲು

 ಎಂಆರ್ ಎನ್ ಫೌಂಡೇಷನ್ ಮೂಲಕ ನಾವು  ₹5000 ಕೋಟಿ ವ್ಯವಹಾರ ನಡೆಸುತ್ತಿದ್ದು,75 ಸಾವಿರ ಮಂದಿಗೆ ಉದ್ಯೋಗ ನೀಡಿದ್ದೇವೆ.ನನಗೆ ಯಾರಾದರೂ ₹10 ರೂ.ಲಂಚ ಕೊಟ್ಟಿದ್ದೇನೆ ಎಂದು ಸಾಬೀತು ಮಾಡಿದರೆ ತಕ್ಷಣವೇ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆ ಎಂದು ಗಣಿ ಮತ್ತು ಭೂವಿಜ್ಞಾನ ಸಚಿವ ಮುರುಗೇಶ್ ನಿರಾಣಿ ಸವಾಲು ಹಾಕಿದರು. 

Published: 27th February 2021 11:01 PM  |   Last Updated: 27th February 2021 11:03 PM   |  A+A-


Murugesh_Nirani1

ಸಚಿವ ಮುರುಗೇಶ್ ನಿರಾಣಿ

Posted By : Nagaraja AB
Source : UNI

ಕೊಪ್ಪಳ: ಎಂಆರ್ ಎನ್ ಫೌಂಡೇಷನ್ ಮೂಲಕ ನಾವು  ₹5000 ಕೋಟಿ ವ್ಯವಹಾರ ನಡೆಸುತ್ತಿದ್ದು,75 ಸಾವಿರ ಮಂದಿಗೆ ಉದ್ಯೋಗ ನೀಡಿದ್ದೇವೆ.ನನಗೆ ಯಾರಾದರೂ ₹10 ರೂ.ಲಂಚ ಕೊಟ್ಟಿದ್ದೇನೆ ಎಂದು ಸಾಬೀತು ಮಾಡಿದರೆ ತಕ್ಷಣವೇ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆ ಎಂದು ಗಣಿ ಮತ್ತು ಭೂವಿಜ್ಞಾನ ಸಚಿವ ಮುರುಗೇಶ್ ನಿರಾಣಿ ಸವಾಲು ಹಾಕಿದರು. 

ಇಂದು ಕೊಪ್ಪಳ ಜಿಲ್ಲೆಯ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳ ಜೊತೆ ಪ್ರಗತಿಪರಿಶೀಲನೆ ಸಭೆ ನಡೆಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಉದ್ಯಮಿಯಾಗಿದ್ದು ₹5-10 ಲಕ್ಷಕ್ಕೆ ಬೇರೆಯವರಿಂದ ಕೈ ಒಡ್ಡುವಂತಹ ದಯನೀಯ ಸ್ಥಿತಿಗೆ ಬಂದಿಲ್ಲ. ನನ್ನ ಫೌಂಡೇಷನ್ ಮೂಲಕ ಸಾವಿರಾರು ಜನರಿಗೆ ಉದ್ಯೋಗ ಕೊಟ್ಟಿದ್ದೇನೆ.₹10-20 ಲಕ್ಷದ ಬದಲಿಗೆ ₹10 ರೂ.ಕೊಟ್ಟಿರುವುದು ಸಾಬೀತಾದರೆ ಒಂದೇ ಒಂದೂ ಕ್ಷಣ ವೂ  ಅಧಿಕಾರದಲ್ಲಿ ಇರುವುದಿಲ್ಲ ಎಂದು ಗುಡುಗಿದರು.

ಇಲಾಖೆಯಲ್ಲಿ ನನ್ನ ಹೆಸರು ಹೇಳಿಕೊಂಡು ಯಾರಾದರೂ ಹಣಕ್ಕೆ ಬೇಡಿಕೆ ಇಟ್ಟರೂ ಸಹಿಸುವುದಿಲ್ಲ. ಅಂಥಹ ಮಾಹಿತಿ ಇದ್ದರೆ ನೇರವಾಗಿ ನನಗೆ ದೂರು ಕೊಡಬಹುದು. ಇಲಾಖೆಯನ್ನು ಸಾಧ್ಯವಾದಷ್ಟು ಪಾರದರ್ಶಕವಾಗಿ ಮುನ್ನಡೆಸುವ ಗುರಿ ಇಟ್ಟುಕೊಂಡಿದ್ದೇನೆ ಎಂದು ಹೇಳಿದರು.

Stay up to date on all the latest ರಾಜ್ಯ news
Poll
Kumbh-Covid-19

ಚುನಾವಣಾ ಸಮಾವೇಶ, ಕುಂಭಮೇಳ, ಧಾರ್ಮಿಕ ಸಭೆಗಳು ದೇಶದಲ್ಲಿ ಕೋವಿಡ್-19 ಪರಿಸ್ಥಿತಿಯನ್ನು ಹದಗೆಡಿಸುತ್ತಿವೆಯೇ?


Result
ಹೌದು, ಅದು ನಿಜ.
ಇಲ್ಲ, ಖಂಡಿತ ಅಲ್ಲ.
flipboard facebook twitter whatsapp