ತಮಿಳು ನಾಡು ಚುನಾವಣೆ ಪರ್ವ, ಅಂತರಾಜ್ಯ ಜಲ ವಿವಾದ ಮಧ್ಯೆ ಸಿಎಂ ಯಡಿಯೂರಪ್ಪ ಭೇಟಿ ಮಾಡಿದ ಕೇಂದ್ರ ಜಲಶಕ್ತಿ ಸಚಿವ!

ಕಾವೇರಿ ನದಿಯ ಹೆಚ್ಚುವರಿ ನೀರಿನ್ನು ಬಳಸುವ ತಮಿಳು ನಾಡಿನ ಉದ್ದೇಶಿತ ಯೋಜನೆ ಬಗ್ಗೆ ಕರ್ನಾಟಕದಲ್ಲಿ ಬಿಜೆಪಿ ನಾಯಕರು ದೃಢ ನಿಲುವು ಹೊಂದಿರುವ ಸಂದರ್ಭದಲ್ಲಿ ಕೇಂದ್ರ ಜಲ ಶಕ್ತಿ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪನವರನ್ನು ಭೇಟಿ ಮಾಡಿದ್ದಾರೆ.

Published: 28th February 2021 09:03 AM  |   Last Updated: 28th February 2021 09:03 AM   |  A+A-


Union Minister of Jal Shakti Gajendra Singh Shekhawat greeting Chief Minister  B S Yediyurappa on the latter’s birthday, in Bengaluru on Saturday

ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಭೇಟಿ ಮಾಡಿದ ಕೇಂದ್ರ ಜಲಶಕ್ತಿ ಸಚಿವ

Posted By : Sumana Upadhyaya
Source : The New Indian Express

ಬೆಂಗಳೂರು: ಕಾವೇರಿ ನದಿಯ ಹೆಚ್ಚುವರಿ ನೀರಿನ್ನು ಬಳಸುವ ತಮಿಳು ನಾಡಿನ ಉದ್ದೇಶಿತ ಯೋಜನೆ ಬಗ್ಗೆ ಕರ್ನಾಟಕದಲ್ಲಿ ಬಿಜೆಪಿ ನಾಯಕರು ದೃಢ ನಿಲುವು ಹೊಂದಿರುವ ಸಂದರ್ಭದಲ್ಲಿ ಕೇಂದ್ರ ಜಲ ಶಕ್ತಿ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪನವರನ್ನು ಭೇಟಿ ಮಾಡಿದ್ದಾರೆ.

ಸರ್ಕಾರದ ಮೂಲಗಳು ಇದೊಂದು ಸೌಹಾರ್ದಯುತ ಭೇಟಿ, ಉಭಯ ರಾಜ್ಯಗಳ ನದಿ ನೀರು ವಿವಾದವನ್ನು ಚರ್ಚೆ ನಡೆಸಲಿಲ್ಲ ಎಂದು ಹೇಳಿದರೂ ಕೂಡ, ಕೇಂದ್ರ ಸರ್ಕಾರಕ್ಕೆ ನೀರಿನ ವಿವಾದ ಬಗ್ಗೆ ಕರ್ನಾಟಕ ಬಗ್ಗೆ ಕಾಳಜಿಯಿದೆ ಎಂಬ ಸಂದೇಶವನ್ನು ಕೇಂದ್ರ ಜಲಶಕ್ತಿ ಸಚಿವರ ಭೇಟಿ ನೀಡಿದೆ ಎಂದು ಹೇಳಲಾಗುತ್ತಿದೆ. ತಮಿಳು ನಾಡಿನಲ್ಲಿ ಮುಂದಿನ ಇನ್ನು ಎರಡು ತಿಂಗಳಲ್ಲಿ ಚುನಾವಣೆ ನಡೆಯಲಿರುವುದರಿಂದ ಕೇಂದ್ರ ಸಚಿವರ ಭೇಟಿಯನ್ನು ಆದಷ್ಟು ರಾಜಕೀಯಗೊಳಿಸದಿರಲು ನಿರ್ಧರಿಸಲಾಗಿದೆ ಎಂದು ಹೇಳಲಾಗುತ್ತಿದೆ.

ಕರ್ನಾಟಕದ ಬಿಜೆಪಿ ನಾಯಕರು ತೆಗೆದುಕೊಂಡಿರುವ ದೃಢ ನಿಲುವು ತಮಿಳು ನಾಡಿನ ನಾಯಕರನ್ನು ಇಕ್ಕಟ್ಟಿಕೆ ಸಿಲುಕಿಸಿದೆ ಎಂದು ಹೇಳಲಾಗುತ್ತಿದೆ. ನಿನ್ನೆ ಬೆಂಗಳೂರಿಗೆ ಆಗಮಿಸಿದ್ದ ಕೇಂದ್ರ ಜಲಶಕ್ತಿ ಸಚಿವ ಶೇಖಾವತ್ ಯಡಿಯೂರಪ್ಪನವರಿಗೆ ಶುಭ ಹಾರೈಸಿ ಸಾಯಂಕಾಲ ನಗರವನ್ನು ತೊರೆದಿದ್ದಾರೆ. ತಮ್ಮ ಭೇಟಿ ಬಗ್ಗೆ ಶೇಖಾವತ್ ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ. 
ಇತ್ತೀಚೆಗೆ ರಾಜ್ಯ ಜಲ ಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ಗಜೇಂದ್ರ ಸಿಂಗ್ ಶೇಖಾವತ್ ಅವರನ್ನು ಇತ್ತೀಚೆಗೆ ದೆಹಲಿಯಲ್ಲಿ ಭೇಟಿ ಮಾಡಿ ಅಂತರಾಜ್ಯ ಜಲ ಹಂಚಿಕೆ ವಿವಾದ ಬಗ್ಗೆ ಚರ್ಚೆ ನಡೆಸಿದ್ದರು.

ಇತ್ತೀಚೆಗೆ ಹೆಚ್ಚಿನ ನೀರು ಬಳಕೆ ಬಗ್ಗೆ ತಮಿಳು ನಾಡು ಸರ್ಕಾರ ಆರಂಭಿಸಿದ್ದ ಯೋಜನೆ ಬಗ್ಗೆ ನಮ್ಮ ರಾಜ್ಯದ ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿಗಳು ಮತ್ತು ಸಚಿವರುಗಳು ತಮಿಳು ನಾಡಿನ ವಿರುದ್ದ ಹರಿಹಾಯ್ದು ನೆರೆ ರಾಜ್ಯ ಅಂತರಾಜ್ಯ ನದಿ ನೀರು ವಿವಾದ ಕಾಯ್ದೆಯನ್ನು ಉಲ್ಲಂಘಿಸಿದೆ ಎಂದು ಆರೋಪಿಸಿದ್ದರು. ಯೋಜನೆಗೆ ತಮಿಳು ನಾಡಿಗೆ ಒಪ್ಪಿಗೆ ನೀಡದಂತೆ ಯಡಿಯೂರಪ್ಪನವರು ಇತ್ತೀಚೆಗೆ ಕೇಂದ್ರ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಗೆ ಪತ್ರ ಬರೆದಿದ್ದರು.

2007-08ರ ಜಲ ವರ್ಷದ ನಂತರ ಅಂತರ-ರಾಜ್ಯ ಗಡಿ ಬಿಲಿಗುಂಡ್ಲುನಲ್ಲಿರುವ ಕೇಂದ್ರ ಜಲ ಆಯೋಗದ ಗೇಜ್ ನಿಲ್ದಾಣದಿಂದ ಅಳೆಯಲ್ಪಟ್ಟ ಹರಿವುಗಳನ್ನು ಪರಿಗಣಿಸಿದರೆ ಅಂತರ ರಾಜ್ಯ ಗಡಿಯಲ್ಲಿ ಲಭ್ಯವಿರುವ ಹೆಚ್ಚುವರಿ ನೀರು ವಾರ್ಷಿಕವಾಗಿ 83 ಟಿಎಂಸಿಯಷ್ಟಿದೆ. ಅಂತಹ ಹೆಚ್ಚುವರಿ ನೀರಿನ ಮೇಲೆ ಕರ್ನಾಟಕ ರಾಜ್ಯಕ್ಕೆ ಪ್ರತ್ಯೇಕ ಹಕ್ಕಿದೆ ಎಂದು ಮುಖ್ಯಮಂತ್ರಿ ಪತ್ರದಲ್ಲಿ ಹೇಳಿದ್ದರು.

ರಾಜ್ಯದ ಹಿತಾಸಕ್ತಿಗೆ ಅನುಗುಣವಾಗಿ ಸರ್ಕಾರ ಸರಿಯಾಗಿ ಕೆಲಸ ಮಾಡುತ್ತಿಲ್ಲ ಎಂದು ವಿರೋಧ ಪಕ್ಷಗಳು ಮತ್ತು ಕನ್ನಡಪರ ಸಂಘಟನೆಗಳು ರಾಜ್ಯ ಸರ್ಕಾರವನ್ನು ಆರೋಪಿಸಿದ್ದರು. ಅಲ್ಲದೆ ತಮಿಳು ನಾಡಿನಲ್ಲಿ ವಿಧಾನಸಭೆ ಚುನಾವಣೆ ಇರುವುದರಿಂದ ಕೇಂದ್ರ ತಮಿಳು ನಾಡನ್ನು ಈ ವಿಚಾರದಲ್ಲಿ ಬೆಂಬಲಿಸುತ್ತಿದೆ ಎಂದು ಆರೋಪಿಸಿದ್ದರು.

Stay up to date on all the latest ರಾಜ್ಯ news
Poll
Mamata1

ಪಶ್ಚಿಮ ಬಂಗಾಳ ಚುನಾವಣೆಯಲ್ಲಿ ಟಿಎಂಸಿ ಪಕ್ಷಕ್ಕೆ ಗೆಲುವು: ಮಮತಾ ಬ್ಯಾನರ್ಜಿ ಈಗ ಭಾರತದ ಪ್ರಬಲ ಪ್ರತಿಪಕ್ಷ ನಾಯಕಿಯೇ?


Result
ಹೌದು, ನಿರ್ವಿವಾದವಾಗಿ.
ಇಲ್ಲ, ಪ್ರಾದೇಶಿಕ ನಾಯಕಿ ಅಷ್ಟೇ.
flipboard facebook twitter whatsapp