ಎಲ್ ಡಿಎಫ್- ಯುಡಿಎಫ್ ನಿಂದ ಹಿಂದೆ ಬಿದ್ದ ಕೇರಳ,ಅಭಿವೃದ್ಧಿಗೆ ಬಿಜೆಪಿಯೊಂದೇ ಪರಿಹಾರ- ಡಾ. ಸಿ.ಎನ್.ಅಶ್ವತ್ಥ ನಾರಾಯಣ
ಉದ್ಯಮಶೀಲತೆ ಹಾಗೂ ಸೃಜನಶೀಲತೆಗೆ ಹೆಸರಾದ ಕೇರಳವು ಇತರೆ ರಾಜ್ಯಗಳಿಗೆ ಹೋಲಿಸಿ ದರೆ ಅನೇಕ ಕ್ಷೇತ್ರಗಳಲ್ಲಿ ಸಾಕಷ್ಟು ಹಿಂದೆಬಿದ್ದಿದೆ. ಇದಕ್ಕೆ ಕಾರಣ ಈವರೆಗೂ ಆಡಳಿತ ನಡೆಸಿದ ಎಲ್ಡಿ ಎಫ್-ಯುಡಿಎಫ್ ಒಕ್ಕೂಟಗಳ ದುರಾಡಳಿತವೇ ಕಾರಣ ಎಂದು ಕೇರಳದ ಬಿಜೆಪಿ ಸಹ ಪ್ರಭಾರಿಯೂ ಆಗಿರುವ ಉಪ ಮುಖ್ಯಮಂತ್ರಿಡಾ.ಸಿ.ಎನ್.ಅಶ್ವತ್ಥನಾರಾಯಣ ಟೀಕಿಸಿದ್ದಾರೆ.
Published: 28th February 2021 09:25 PM | Last Updated: 28th February 2021 09:27 PM | A+A A-

ಉಪ ಮುಖ್ಯಮಂತ್ರಿಡಾ.ಸಿ.ಎನ್.ಅಶ್ವತ್ಥನಾರಾಯಣ
ಬೆಂಗಳೂರು: ಉದ್ಯಮಶೀಲತೆ ಹಾಗೂ ಸೃಜನಶೀಲತೆಗೆ ಹೆಸರಾದ ಕೇರಳವು ಇತರೆ ರಾಜ್ಯಗಳಿಗೆ ಹೋಲಿಸಿ ದರೆ ಅನೇಕ ಕ್ಷೇತ್ರಗಳಲ್ಲಿ ಸಾಕಷ್ಟು ಹಿಂದೆಬಿದ್ದಿದೆ. ಇದಕ್ಕೆ ಕಾರಣ ಈವರೆಗೂ ಆಡಳಿತ ನಡೆಸಿದ ಎಲ್ಡಿ ಎಫ್-ಯುಡಿಎಫ್ ಒಕ್ಕೂಟಗಳ ದುರಾಡಳಿತವೇ ಕಾರಣ ಎಂದು ಕೇರಳದ ಬಿಜೆಪಿ ಸಹ ಪ್ರಭಾರಿಯೂ ಆಗಿರುವ ಉಪ ಮುಖ್ಯಮಂತ್ರಿಡಾ.ಸಿ.ಎನ್.ಅಶ್ವತ್ಥನಾರಾಯಣ ಟೀಕಿಸಿದ್ದಾರೆ.
ಭಾನುವಾರ ಬೆಂಗಳೂರಿನಲ್ಲಿ ನೆಲೆಸಿರುವ ಕೇರಳದ ಸಮಾನ ಮನಸ್ಕರ ಜತೆ ಸಂವಾದ ನಡೆಸಿದ ಸಂದರ್ಭದಲ್ಲಿ ಮಾತನಾಡಿದ ಅವರು, ಸುಂದರ ಕರಾವಳಿ ಹಾಗೂ ಸಮೃದ್ಧ ಪ್ರಾಕೃತಿಕ ಸಂಪತ್ತು ಇದ್ದರೂ ರಾಜ್ಯವನ್ನು ಅಭಿವೃದ್ಧಿಯಲ್ಲಿ ಹಿಂದೆ ಬೀಳುವಂತೆ ಮಾಡಲಾಗಿದೆ.ಎಲ್ಲ ಕ್ಷೇತ್ರಗಳಲ್ಲೂ ಎಲ್ಡಿಎಫ್ ಮತ್ತು ಯುಡಿಎಫ್ ಕೂಟಗಳು ವಿಫಲವಾಗಿವೆ ಎಂದರು.
ರಾಜ್ಯದ ಜನತೆಯ ನಿರೀಕ್ಷೆಗಳೇನು? ಇತರೆ ರಾಜ್ಯಗಳು ಯಾವ ರೀತಿಯಲ್ಲಿ ಮುನ್ನಡೆ ಸಾಧಿಸುತ್ತಿವೆ.ಅಕ್ಕಪ ಕ್ಕದ ರಾಜ್ಯಗಳಲ್ಲಿ ಪ್ರಗತಿ ಯಾವ ವೇಗದಲ್ಲಿ ಸಾಗುತ್ತಿದೆ ಎಂಬುದನ್ನು ಅರ್ಥ ಮಾಡಿಕೊಳ್ಳಲು ಎಲ್ಡಿಎಫ್ ಸರಕಾರಕ್ಕೆ ಸಾಧ್ಯವಾಗಿಲ್ಲ.ಯಾಕೆಂದರೆ, ಎಡಪಕ್ಷಗಳಿಗೆ ಯಾವುದೇ ಅಭಿವೃದ್ಧಿಯ ದೂರದೃಷ್ಟಿ ಇಲ್ಲ.ಕೇವಲ ರಾಜಕೀಯಕ್ಕೆ ಮಾತ್ರ ಸೀಮಿತವಾಗಿ ರಾಜ್ಯವನ್ನು ಮತ್ತಷ್ಟು ಹಿಂದಕ್ಕೆ ತಳ್ಳುತ್ತಿದೆ ಎಂದು ಅವರು ದೂರಿದರು.