ಮೊಘಲ್ ಚಕ್ರವರ್ತಿ ಕಮ್ ಬಕ್ಷ್ ಕಾಲದ 10.9 ಗ್ರಾಂ ಚಿನ್ನದ ನಾಣ್ಯ ರೂ.56 ಲಕ್ಷಕ್ಕೆ ಹರಾಜು

ಐತಿಹಾಸಿಕ ಮಹತ್ವ ಹೊಂದಿರುವ ಅಪರೂಪದ ಚಿನ್ನದ ನಾಣ್ಯವೊಂದು ನಗರದಲ್ಲಿ ರೂ.56 ಲಕ್ಷಕ್ಕೆ ಹರಾಜಾಗಿದೆ. 

Published: 28th February 2021 09:39 AM  |   Last Updated: 28th February 2021 09:39 AM   |  A+A-


Mughal era gold coin

ಚಿನ್ನದ ನಾಣ್ಯ

Posted By : Manjula VN
Source : The New Indian Express

ಬೆಂಗಳೂರು: ಐತಿಹಾಸಿಕ ಮಹತ್ವ ಹೊಂದಿರುವ ಅಪರೂಪದ ಚಿನ್ನದ ನಾಣ್ಯವೊಂದು ನಗರದಲ್ಲಿ ರೂ.56 ಲಕ್ಷಕ್ಕೆ ಹರಾಜಾಗಿದೆ.  

10.9 ಗ್ರಾಂ ತೂಕವಿರುವ ಚಿನ್ನದ ನಾಣ್ಯ ಮೊಘಲ್ ಚಕ್ರವರ್ತಿ ಔರಂಗಜೇಬನ 5ನೇ ಪುತ್ರ ಕಮ್ ಬಕ್ಷ್​ನದ್ದಾಗಿದೆ. ಇಲ್ಲಿನ ಪ್ರಮುಖ ನಾಣ್ಯಶಾಸ್ತ್ರೀಯ ವೇದಿಕೆ, ಮರುಧಾರ್ ಆರ್ಟ್ಸ್ ಶನಿವಾರ ಹರಾಜು ಪ್ರಕ್ರಿಯೆ ನಡೆಸಿದ್ದು, ಕನ್ನಡಿಗೇತರ ಭಾರತೀಯ ವ್ಯಕ್ತಿಯೊಬ್ಬರು ಈ ನಾಣ್ಯವನ್ನು ರೂ.56 ಲಕ್ಷಕ್ಕೆ ಖರೀದಿ ಮಾಡಿದ್ದಾರೆಂದು ಹರಾಜು ಪ್ರಕ್ರಿಯೆ ಆಯೋಜಕ ಹಾಗೂ ಮರುಧಾರ್ ಆರ್ಟ್ಸ್​ನ ಸಿಇಒ ರಾಜೇಂದ್ರ ಮರು ಹೇಳಿದ್ದಾರೆ.

 10.9 ಗ್ರಾಂ ತೂಕದ ಈ ಚಿನ್ನದ ನಾಣ್ಯ ಬಹುತೇಕ ಚಲಾವಣೆಗೊಳ್ಳದೆ ಹಾಗೇ ಉಳಿದಿತ್ತು. ಹಾಗಾಗಿ, ಈ ನಾಣ್ಯ ವೈಶಿಷ್ಟ್ಯಪೂರ್ಣ ಎನಿಸಿಕೊಂಡಿತ್ತು.

ಕಮ್ ಬಕ್ಷ್ ಯುದ್ಧಗಳಲ್ಲಿ ಸಕ್ರಿಯವಾಗಿ ಭಾಗವಹಿಸಿದವರಾಗಿದ್ದ. 1707ರಲ್ಲಿ ಬಿಜಾಪುರವನ್ನು (ಈಗಿನ ವಿಜಯಪುರ) ವಶಪಡಿಸಿಕೊಂಡ ಔರಂಗಜೇಬನ ಐದನೇ ಪುತ್ರ ಕಮ್ ಬಕ್ಷ್, ತನ್ನನ್ನು ತಾನು ರಾಜನೆಂದು ಘೋಷಿಸಿಕೊಂಡಿದ್ದ.

ಕ್ರಮೇಣ ಕಮ್ ಬಕ್ಷ್ ದಖ್ಖನ್ ಪ್ರದೇಶದ ವಿವಿಧೆಡೆ ಕಮ್ ಬಕ್ಷ್ ಅಧಿಕಾರ ವಿಸ್ತರಿಸಿಕೊಂಡ. ಗುಲ್ಬರ್ಗಾ (ಈಗಿನ ಕಲಬುರ್ಗಿ), ಹೈದರಾಬಾದ್, ಶಾಪುರ್ ಮತ್ತು ವಾಕಿನ್​ಖೆರ ಪ್ರದೇಶಗಳನ್ನು ಆತ ತನ್ನದಾಗಿಸಿಕೊಂಡಿದ್ದ. ಆದರೆ, ಆಡಳಿತವನ್ನು ಸುಸೂತ್ರವಾಗಿ ನಡೆಸಲು ಆಗದ ಕಾರಣ ಕಮ್ ಬಕ್ಷ್ ಸಾಮ್ರಾಜ್ಯ ಪತನಗೊಂಡಿತು. ಜನವರಿ 13, 1709ರಲ್ಲಿ ಕಮ್ ಬಕ್ಷ್ ಯುದ್ಧವೊಂದರಲ್ಲಿ ಸೆರೆಯಾಗಿದ್ದ. ಯುದ್ಧದಲ್ಲಿ ತೀವ್ರ ಗಾಯಗಳಾಗಿದ್ದ ಪರಿಣಾಮ ಮಾರನೇ ದಿನವೇ ಮೃತಪಟ್ಟಿದ್ದ.

ಈ ನಾಣ್ಯವು ವಿಶಿಷ್ಟ ಮತ್ತು ಪ್ರಮುಖವಾದದ್ದಾಗಿದೆ. ಬಿಜಾಪುರ, ಅಶಾನಬಾದ್, ನುಸ್ರತಾಬಾದ್, ಹೈದರಾಬಾದ್, ತೋರ್ಗಲ್, ಗೋಕಾಕ್, ಇಮ್ತಿಯಾಜ್​ಘರ್ ಮುಂತಾದೆಡೆಗಳ ನಾಣ್ಯ ಮುದ್ರಣ ಸ್ಥಳಗಳಿಂದ ಕಮ್ ಬಕ್ಷ್ ಕಾಲದ ನಾಣ್ಯವು ಪ್ರಖ್ಯಾತಿ ಹೊಂದಿದೆ.

ಕಮ್ ಬಕ್ಷ್ ತನ್ನನ್ನು ತಾನು ರಾಜ ಎಂದು ಯಾವಾಗ ಘೋಷಿಸಿಕೊಂಡ ಎಂಬ ಬಗ್ಗೆ ತಿಳಿದಿಲ್ಲ. ಮಾರ್ಚ್ 1707ರ ಸುಮಾರಿಗೆ ತನ್ನನ್ನು ತಾನು ರಾಜ ಎಂದು ಘೋಷಿಸಿಕೊಂಡಿದ್ದ ಎಂಬ ಮಾಹಿತಿ ಇದೆ. ಬಿಜಾಪುರದ ಕೋಟೆ ಅವನ ಸುಪರ್ದಿಗೆ ಬಂದ ಮೇಲೆ ಕಮ್ ಬಕ್ಷ್ ರಾಜನಾಗಿದ್ದ. ಈ ಘಟನೆಯ ದಿನಾಂಕ ತಿಳಿದಿಲ್ಲ ಎಂದು ರಾಜೇಂದ್ರ ಮರು ಮಾಹಿತಿ ನೀಡಿದ್ದಾರೆ.

Stay up to date on all the latest ರಾಜ್ಯ news
Poll
Mamata_PM_Modi1

ಕೋವಿಡ್ ಉಲ್ಬಣದ ಕಾರಣ ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಮತ್ತು ಟಿಎಂಸಿ ಸಾಮೂಹಿಕ ಚುನಾವಣಾ ಪ್ರಚಾರವನ್ನು ಸ್ಥಗಿತಗೊಳಿಸಬೇಕೇ?


Result
ಹೌದು
ಬೇಡ
flipboard facebook twitter whatsapp