ಮಂಗಳೂರು: ವಂಚನೆ ಪ್ರಕರಣದಲ್ಲಿ ವಶಪಡಿಸಿಕೊಂಡ ಜಾಗ್ವಾರ್ ಕಾರನ್ನೇ ಮಾರಿದ ಪೋಲೀಸರು!

ಕಾನೂನು ರಕ್ಷಣೆ ಮಾಡಬೇಕಿದ್ದ ಪೋಲೀಸರಿಬ್ಬರು ತಕ್ಷಣವೇ ದೊಡ್ಡ ಮೊತ್ತವ ಹಣ ಮಾಡುವ ನಿರೀಕ್ಷೆ ಇರಿಸಿಕೊಂಡಿದ್ದರು. ಅದಕ್ಕಾಗಿ ಅವರು ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಶಪಡಿಸಿಕೊಂಡ ಐಷಾರಾಮಿ ಕಾರನ್ನು ಸದ್ದಿಲ್ಲದೆ ಮಾರಿದ್ದರು! ಆದರೆ ಕಾನೂನಿನ ಕೈಗಳು ಅವರನ್ನು ಬಿಡದೆ ಹಿಡಿದಿದೆ.

Published: 28th February 2021 08:33 AM  |   Last Updated: 28th February 2021 08:33 AM   |  A+A-


ಸಂಗ್ರಹ ಚಿತ್ರ

Posted By : Raghavendra Adiga
Source : The New Indian Express

ಮಂಗಳೂರು: ಕಾನೂನು ರಕ್ಷಣೆ ಮಾಡಬೇಕಿದ್ದ ಪೋಲೀಸರಿಬ್ಬರು ತಕ್ಷಣವೇ ದೊಡ್ಡ ಮೊತ್ತವ ಹಣ ಮಾಡುವ ನಿರೀಕ್ಷೆ ಇರಿಸಿಕೊಂಡಿದ್ದರು. ಅದಕ್ಕಾಗಿ ಅವರು ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಶಪಡಿಸಿಕೊಂಡ ಐಷಾರಾಮಿ ಕಾರನ್ನು ಸದ್ದಿಲ್ಲದೆ ಮಾರಿದ್ದರು! ಆದರೆ ಕಾನೂನಿನ ಕೈಗಳು ಅವರನ್ನು ಬಿಡದೆ ಹಿಡಿದಿದೆ.

ಪೊಲೀಸ್ ಇನ್ಸ್‌ಪೆಕ್ಟರ್ ಕೆ.ಕೆ.ರಾಮಕೃಷ್ಣ ಮತ್ತು ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ಕಬ್ಬಾಳ್ ರಾಜ್ ಅವರನ್ನು ಮಂಗಳೂರಿನ ಅಪರಾಧ ಶಾಖೆಯಲ್ಲಿ ನಿಯೋಜಿಸಲಾಗಿತ್ತು. ಆದರೆ ಕೇರಳ ಮೂಲದ ಮೂವರು ಉದ್ಯಮಿಗಳನ್ನು ಬಂಧಿಸಿದ ವೇಳೆ ಪ್ರಕರಣದಲ್ಲಿ ಇಅವರ ಕೈವಾಡ ಪತ್ತೆಯಾಗಿದ್ದು ಇದೀಗ ಇಬ್ಬರನ್ನೂ ಬಂಧಿಸಿ ಜೈಲಿಗಟ್ಟಲಾಗಿದೆ ಎಂದು ಉಪ ಪೊಲೀಸ್ ಆಯುಕ್ತ (ಅಪರಾಧ ಮತ್ತು ಸಂಚಾರ) ವಿನಯ್ ಎ ಗಾಂವ್ಕರ್ ಪತ್ರಿಕೆಗೆ ತಿಳಿಸಿದ್ದಾರೆ

ಪ್ರಕರಣಕ್ಕೆ ಸಂಬಂಧಿಸಿ ಬಿಎಂಡಬ್ಲ್ಯು, ಪೋರ್ಷೆ ಮತ್ತು ಜಾಗ್ವಾರ್ ಮೂರು ಐಶಾರಾಮಿ ಕಾರುಗಳನ್ನು ಸಹ ವಶಪಡಿಸಿಕೊಳ್ಳಲಾಗಿದೆ.ಆದರೆ, ಅಧಿಕಾರಿಗಳು ಬಿಎಂಡಬ್ಲ್ಯು ಮತ್ತು ಪೋರ್ಷೆಗಳ ವಶಪಡಿಸಿಕೊಂಡ ಮಾಹಿತಿಯನ್ನು ಮಾತ್ರ ದಾಖಲೆಯಲ್ಲಿ ತೋರಿಸಿದ್ದಾರೆ, ಆದರೆ ಜಾಗ್ವಾರ್ ಕಾರನ್ನು ವಶಕ್ಕೆ ಪಡೆದ ಮಾಹಿತಿ ಇಲ್ಲ. ನಾಪತ್ತೆಯಾಗಿದ್ದ ಕಾರಿನ ಬೆಲೆ ಸುಮಾರು 50 ಲಕ್ಷ ರೂ. ಆಗಿದ್ದು ಆರೋಪಿ ಉದ್ಯಮಿಗಳು ಜಾಮೀನಿನ ಮೇಲೆ ಹೊರಬಂದು ಕಾರುಗಳನ್ನು ಬಿಡಿಸಿಕೊಳ್ಳಲು ಬಯಸಿದ್ದಾಗ ಈ ಘಟನೆ ಬೆಳಕಿಗೆ ಬಂದಿದೆ.

ಕಾರು ಮಾರಾಟದ ಬಗ್ಗೆ ಸಿಐಡಿ ವಿಚಾರಣೆಗೆ ಮಂಗಳೂರು ಉನ್ನತ ಪೋಲೀಸ್ ಪಡೆ ಶಿಫಾರಸು ಮಾಡಿದೆ.

ಕೇರಳ ಮೂಲದ ಉದ್ಯಮಿಗಳಾದ ಟಾಮಿ ಮ್ಯಾಥ್ಯೂ ಮತ್ತು ಟಿ ರಾಜನ್ ಅವರನ್ನು ಎಲಿಯಾ ಕನ್ಸ್ಟ್ರಕ್ಷನ್ ಮತ್ತು ಬಿಲ್ಡರ್ಸ್ ಪ್ರೈವೇಟ್ ಲಿಮಿಟೆಡ್ ನ ಪ್ರವರ್ತಕರು ಎಂದು ಹೇಳಲಾಗಿದ್ದು , ಮಂಗಳೂರಿನ ಮಹಿಳೆಯೊಬ್ಬರು ನಗರ ಪೊಲೀಸರಿಗೆ ದೂರು ನೀಡಿದ ನಂತರ ಅವರನ್ನು ಬಂಧಿಸಲಾಗಿತ್ತು. 2020 ರ ಅಕ್ಟೋಬರ್ 16 ರಂದು ಸಲ್ಲಿಸಿದ ತನ್ನ ದೂರಿನಲ್ಲಿ, ಹೆಚ್ಚಿನ ಆದಾಯದ ಭರವಸೆ ನೀಡಿದ ನಂತರ ಕಂಪನಿಯಲ್ಲಿ ಕೋಟ್ಯಂತರ ಹಣವನ್ನು ನೂರಾರು ಮಂದಿಯು ಹೂಡಿಕೆ ಮಾಡಿದ್ದರು ಎಂದು ಮಹಿಳೆ ಹೇಳಿದ್ದಾರೆ, ಆದರೆ ಅವರು ವಂಚನೆಗೆ ಒಳಗಾಗಿದ್ದರು.

ಕಾರಿನ ಮಾರಾಟದಲ್ಲಿ ಭಾಗಿಯಾಗಿದ್ದಕ್ಕಾಗಿ ಅಪರಾಧ ತನಿಖಾ ಇಲಾಖೆ (ಸಿಐಡಿ) ವಿಚಾರಣೆ ಬಾಕಿ ಇರುವ ಇಬ್ಬರು ಪೊಲೀಸ್ ಅಧಿಕಾರಿಗಳನ್ನು ಮಹಾನಿರ್ದೇಶಕರು ಮತ್ತು ಪೊಲೀಸ್ ಇನ್ಸ್‌ಪೆಕ್ಟರ್ ಜನರಲ್ ಪ್ರವೀಣ್ ಸೂದ್ ಶನಿವಾರ ಅಮಾನತುಗೊಳಿಸಿದ್ದಾರೆ. ಕೆಲವು ದಿನಗಳ ಹಿಂದೆ 35 ಪುಟಗಳ ಮಧ್ಯಂತರ ವರದಿಯನ್ನು ಸಲ್ಲಿಸಿದ ಡಿಸಿಪಿ ವಿನಯ್ ಗಾಂವ್ಕರ್ ಅವರು ಈ ಘಟನೆಯ ಬಗ್ಗೆ ತನಿಖೆಗೆ ಮಂಗಳೂರು ನಗರ ಪೊಲೀಸ್ ಆಯುಕ್ತ ಎನ್.ಶಶಿಕುಮಾರ್ ಆದೇಶಿಸಿದ್ದರು.

Stay up to date on all the latest ರಾಜ್ಯ news
Poll
Kumbh-Covid-19

ಚುನಾವಣಾ ಸಮಾವೇಶ, ಕುಂಭಮೇಳ, ಧಾರ್ಮಿಕ ಸಭೆಗಳು ದೇಶದಲ್ಲಿ ಕೋವಿಡ್-19 ಪರಿಸ್ಥಿತಿಯನ್ನು ಹದಗೆಡಿಸುತ್ತಿವೆಯೇ?


Result
ಹೌದು, ಅದು ನಿಜ.
ಇಲ್ಲ, ಖಂಡಿತ ಅಲ್ಲ.
flipboard facebook twitter whatsapp