ಬೆಂಗಳೂರು: ಹಾಡಹಗಲೇ ಮಹಿಳೆ‌ಯ ಬರ್ಬರ ಹತ್ಯೆ

ಬೆಂಗಳೂರು ನಗರದಲ್ಲಿ ಹಾಡಹಗಲೇ ಮಹಿಳೆಯೊಬ್ಬರನ್ನು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಹೆಚ್ ಎಎಲ್ ನ ಬ್ರೂಕ್ ಫೀಲ್ಡ್ 2ನೇ ಹಂತದಲ್ಲಿ ನಡೆದಿದೆ.

Published: 28th February 2021 12:30 PM  |   Last Updated: 28th February 2021 12:30 PM   |  A+A-


ಸಂಗ್ರಹ ಚಿತ್ರ

Posted By : Raghavendra Adiga
Source : UNI

ಬೆಂಗಳೂರು: ಬೆಂಗಳೂರು ನಗರದಲ್ಲಿ ಹಾಡಹಗಲೇ ಮಹಿಳೆಯೊಬ್ಬರನ್ನು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಹೆಚ್ ಎಎಲ್ ನ ಬ್ರೂಕ್ ಫೀಲ್ಡ್ 2ನೇ ಹಂತದಲ್ಲಿ ನಡೆದಿದೆ.

ಕೋಲ್ಕತ್ತಾ ಮೂಲದ ಅಲೀಂ ನಬಿ (35) ಕೊಲೆಯಾದ ಮಹಿಳೆ.

ಕೊಲೆಯಾದ ಅಲೀಂ ನಬಿ, ಮನೆ ಕೆಲಸ ಮಾಡಿಕೊಂಡಿದ್ದರು. ರಫೀಕ್ ಎಂಬುವವರೊಂದಿಗೆ ಅಲೀಂ ನಬಿ, ಹಣದ ವಿಚಾರಕ್ಕೆ ಗಲಾಟೆ ಮಾಡಿಕೊಂಡಿದ್ದರು. ಬೆಳಿಗ್ಗೆ ಅಲೀಂ ನಬಿ, ಮನೆಕೆಲಸಕ್ಕೆ ತೆರಳುತ್ತಿದ್ದಾಗ ರಫೀಕ್, ನಡುರಸ್ತೆಯಲ್ಲೇ ಅವರಿಗೆ ಚಾಕುವಿನಿಂದ ಇರಿದ್ದಾನೆ. ಪರಿಣಾಮ ತೀವ್ರ ರಕ್ತಸ್ರಾವದಿಂದ ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಇದೀಗ ಪೋಲೀಸರು ಮಹಿಳೆಯ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿ ಐಪಿಸಿ ಸೆಕ್ಷನ್ 307 ಅಡಿ‌ ಕೊಲೆ‌ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

Stay up to date on all the latest ರಾಜ್ಯ news
Poll
Mamata_PM_Modi1

ಕೋವಿಡ್ ಉಲ್ಬಣದ ಕಾರಣ ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಮತ್ತು ಟಿಎಂಸಿ ಸಾಮೂಹಿಕ ಚುನಾವಣಾ ಪ್ರಚಾರವನ್ನು ಸ್ಥಗಿತಗೊಳಿಸಬೇಕೇ?


Result
ಹೌದು
ಬೇಡ
flipboard facebook twitter whatsapp