ಬಿಡಿಎ ಮೇಲಿರುವ ಕಳಂಕ ಹೋಗಲಾಡಿಸಿ ಹೊಸ ಕಾಯಕಲ್ಪ: ಎಸ್.ಆರ್. ವಿಶ್ವನಾಥ್

ಮುಂದಿನ ಒಂದು ವರ್ಷದಲ್ಲಿ ಬಿಡಿಎಗೆ ಈ ಹಿಂದಿನ ಖ್ಯಾತಿಯನ್ನು ತಂದುಕೊಡಲಾಗುವುದು ಎಂದು ಪ್ರಾಧಿಕಾರದ ಅಧ್ಯಕ್ಷ ಎಸ್.ಆರ್.ವಿಶ್ವನಾಥ್ ತಿಳಿಸಿದ್ದಾರೆ. 

Published: 01st January 2021 09:43 AM  |   Last Updated: 01st January 2021 12:44 PM   |  A+A-


S.R Vishwanath

ಎಸ್ ಆರ್ ವಿಶ್ವನಾಥ್

Posted By : Shilpa D
Source : UNI

ಬೆಂಗಳೂರು: ಮುಂದಿನ ಒಂದು ವರ್ಷದಲ್ಲಿ ಬಿಡಿಎಗೆ ಈ ಹಿಂದಿನ ಖ್ಯಾತಿಯನ್ನು ತಂದುಕೊಡಲಾಗುವುದು ಎಂದು ಪ್ರಾಧಿಕಾರದ ಅಧ್ಯಕ್ಷ ಎಸ್.ಆರ್.ವಿಶ್ವನಾಥ್ ತಿಳಿಸಿದ್ದಾರೆ. 

ಗುರುವಾರ ನಿವೃತ್ತಿ ಹೊಂದಿದ ಪ್ರಾಧಿಕಾರದ ಆರು ಮಂದಿ ಸಿಬ್ಬಂದಿಗೆ ನೌಕರರ ಸಂಘ ಏರ್ಪಡಿಸಿದ್ದ ಬೀಳ್ಕೊಡುಗೆ ಸಮಾರಂಭದಲ್ಲಿ ಮಾತನಾಡಿದ ಅವರು, ಬಿಡಿಎ ಆರಂಭದ ದಿನದಿಂದ ಇಲ್ಲಿವರೆಗೆ ಸಾವಿರಾರು ನಾಗರಿಕರಿಗೆ ನಿವೇಶನವನ್ನು ವಿತರಿಸುವ ಮೂಲಕ ಮನೆ ಕಟ್ಟಿಕೊಳ್ಳುವ ಅವರ ಕನಸನ್ನು ನನಸಾಗಿಸಿದೆ.

ಈ ಮೂಲಕ ಸಂಸ್ಥೆಗೆ ತನ್ನದೇ ಆದ ಖ್ಯಾತಿ ಇತ್ತು. ಆದರೆ, ಕಳೆದ ಕೆಲವು ವರ್ಷಗಳಿಂದೀಚೆಗೆ ಸಂಸ್ಥೆಗೆ ಸೇರಿದ ಕೆಲವು ಭ್ರಷ್ಟರಿಂದಾಗಿ ಕೆಟ್ಟ ಹೆಸರು ಬರುವಂತಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಈ ಕಳಂಕವನ್ನು ಹೋಗಲಾಡಿಸಿ ಬಿಡಿಎಗೆ ಒಂದು ಕಾಯಕಲ್ಪವನ್ನು ತಂದುಕೊಡಲು ಸ್ವತಃ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರೇ ಸಂಕಲ್ಪ ಮಾಡಿದ್ದಾರೆ. ಅವರ ಈ ಮಹತ್ವಾಕಾಂಕ್ಷೆಯನ್ನು ಕಾರ್ಯರೂಪಕ್ಕೆ ತರುವ ಜವಾಬ್ದಾರಿ ನನ್ನ ಮೇಲಿದೆ. ಈ ಜವಾಬ್ದಾರಿಯನ್ನು ಅರಿತು ಮುನ್ನಡೆಯಲಿದ್ದು, ನೌಕರರು ಸಹಕಾರ ನೀಡುವಂತೆ ಕೋರಿದ್ದಾರೆ.
 

Stay up to date on all the latest ರಾಜ್ಯ news
Poll
Kumbh-Covid-19

ಚುನಾವಣಾ ಸಮಾವೇಶ, ಕುಂಭಮೇಳ, ಧಾರ್ಮಿಕ ಸಭೆಗಳು ದೇಶದಲ್ಲಿ ಕೋವಿಡ್-19 ಪರಿಸ್ಥಿತಿಯನ್ನು ಹದಗೆಡಿಸುತ್ತಿವೆಯೇ?


Result
ಹೌದು, ಅದು ನಿಜ.
ಇಲ್ಲ, ಖಂಡಿತ ಅಲ್ಲ.
flipboard facebook twitter whatsapp