
ಮಗುವಿನ ಚಿತ್ರ
ಕಲಬುರಗಿ: ಗ್ರಾಮ ಪಂಚಾಯತಿ ರಾಜಕೀಯ ಕಲಹದಲ್ಲಿ ನಾಲ್ಕು ವರ್ಷದ ಕಂದಮ್ಮ ಬಲಿಯಾಗಿರುವ ಆರೋಪಗಳು ಕೇಳಿ ಬಂದಿದೆ.
ನಾಲ್ಕು ವರ್ಷದ ಭಾರತಿ ಎಂಬ ಮಗು ಮೃತಪಟ್ಟಿದ್ದು, ಪೊಲೀಸರ ಹಲ್ಲೆಯಿಂದಲೇ ಮಗು ಸಾವನ್ನಪ್ಪಿದೆ ಎಂದು ಪೋಷಕರು ಆರೋಪಿಸುತ್ತಿದ್ದಾರೆ.
ಡಿ. 30ರಂದು ಕಲಬುರಗಿ ಜಿಲ್ಲೆಯ ಜೇವರ್ಗಿ ತಾಲೂಕಿನ ಜೈನಾಪುರ ಗ್ರಾಮದಲ್ಲಿ ರಾಜಕೀಯ ಸಂಘರ್ಷ ನಡೆದಿತ್ತು. ಈ ವೇಳೆ ಪೊಲೀಸರು ಸಂಗೀತಾ ಎಂಬುವವರು ಸೇರಿ 10 ಜನರನ್ನು ಬಂಧಿಸಿದ್ದರು.
ಜೇವರ್ಗಿ ಠಾಣಾ ಪೊಲೀಸರು ಸಂಗೀತಾ ಮೇಲೆ ಹಲ್ಲೆ ಮಾಡಿದ್ದು, ಈ ಸಂದರ್ಭದಲ್ಲಿ ಅಡ್ಡ ಬಂದ ಮಗುವಿಗೂ ಪೆಟ್ಟು ಬಿದ್ದಿತ್ತು ಎನ್ನಲಾಗಿದೆ.