ಐಟಿ ಕಂಪನಿಗಳಿಗೆ ಆಹಾರ ಸರಬರಾಜು ನೆಪದಲ್ಲಿ ವಂಚನೆ; ಮಹಿಳೆ ಸೆರೆ
ಲಾಕ್ ಡೌನ್ ಸಮಯದಲ್ಲಿ ಐಟಿ ಕಂಪನಿಗಳಿಗೆ ಆಹಾರ ಸರಬರಾಜು ಮಾಡುವುದಾಗಿ ಉದ್ಯೋಗಸ್ಥರಿಗೆ ನಂಬಿಸಿ ಲಕ್ಷಾಂತರ ರೂಪಾಯಿ ವಂಚನೆ ಮಾಡಿರುವ ಮಹಿಳೆಯೊಬ್ಬಳನ್ನು ಅಮೃತಹಳ್ಳಿ ಪೊಲೀಸರು ಬಂಧಿಸಿದ್ದಾರೆ. ಅಮೃತಹಳ್ಳಿಯ ನಿವಾಸಿ ನಂದಿನಿ ಬಂಧಿತ ಆರೋಪಿ.
Published: 04th January 2021 12:18 PM | Last Updated: 04th January 2021 12:18 PM | A+A A-

ಸಾಂದರ್ಭಿಕ ಚಿತ್ರ
ಬೆಂಗಳೂರು: ಲಾಕ್ ಡೌನ್ ಸಮಯದಲ್ಲಿ ಐಟಿ ಕಂಪನಿಗಳಿಗೆ ಆಹಾರ ಸರಬರಾಜು ಮಾಡುವುದಾಗಿ ಉದ್ಯೋಗಸ್ಥರಿಗೆ ನಂಬಿಸಿ ಲಕ್ಷಾಂತರ ರೂಪಾಯಿ ವಂಚನೆ ಮಾಡಿರುವ ಮಹಿಳೆಯೊಬ್ಬಳನ್ನು ಅಮೃತಹಳ್ಳಿ ಪೊಲೀಸರು ಬಂಧಿಸಿದ್ದಾರೆ. ಅಮೃತಹಳ್ಳಿಯ ನಿವಾಸಿ ನಂದಿನಿ ಬಂಧಿತ ಆರೋಪಿ.
ಐಟಿ ಕಂಪನಿಗಳಿಗೆ ಕಾಫಿ, ಟೀ ಹಾಗೂ ಊಟದ ಸರಬರಾಜು ಮಾಡುತ್ತೇನೆ ಎಂದು ಐಟಿ ಕಂಪನಿಗಳನ್ನು ನಂಬಿಸಿದ್ದಳು. ಡೆಪಾಸಿಟ್ ನೆಪದಲ್ಲಿ ಲಕ್ಷಾಂತರ ರೂಪಾಯಿ ಪಡೆದಿದ್ದಳು. ಹಣವನ್ನೂ ಕೊಡದೆ ಊಟ ಸರಬರಾಜು ಸಹ ಮಾಡದೇ ತಪ್ಪಿಸಿಕೊಳ್ಳಲು ಪ್ರಯತ್ನಿಸಿದ್ದಾಳೆ.
ಅಲ್ಲದೇ, ಕೆಂಪಾಪುರ ವ್ಯಾಪ್ತಿಯ ಅನೇಕರಿಗೆ ಕಾಯಂ ಉದ್ಯೋಗ ನೀಡುವುದಾಗಿ ಹೇಳಿ 1.5 ಲಕ್ಷ ರೂಪಾಯಿ ಮುಂಗಣ ಹಣ ಪಡೆದು ವಂಚಿಸಿದ್ದಾಳೆ. ಈ ಬಗ್ಗೆ ಅಮೃತಹಳ್ಳಿ ಠಾಣೆ ವ್ಯಾಪ್ತಿಯಲ್ಲಿ ದೂರು ದಾಖಲಿಸಿದ್ದು, ಮೋಸ ಹೋದ ಉದ್ಯೋಗಸ್ಥರು ಆರೋಪಿ ನಂದಿನಿಯನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ.