ಯುವಕರ ಜೊತೆಗಿನ ಖಾಸಗಿ ಕ್ಷಣಗಳನ್ನು ಚಿತ್ರೀಕರಿಸಿ ಹಣಕ್ಕಾಗಿ ಬೇಡಿಕೆ ಇಡುತ್ತಿದ್ದ ಮಾಜಿ ಶಿಕ್ಷಕಿ ಅಂದರ್!
ಹೈಟೆಕ್ ಹನಿಟ್ರ್ಯಾಪ್ ದಂಧೆ ನಡೆಸುತ್ತಾ ಮ್ಯಾಟ್ರಿಮೋನಿಯಲ್ಲಿ ಅವಿವಾಹಿತ ಹಾಗೂ ವಿಚ್ಛೇದಿತ ಪುರುಷರನ್ನೇ ಗುರಿಯಾಗಿಸಿಕೊಂಡಿದ್ದ ಮಾಜಿ ಶಿಕ್ಷಕಿಯೊಬ್ಬಳನ್ನು ಇಂದಿರಾ ನಗರ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
Published: 04th January 2021 11:53 AM | Last Updated: 04th January 2021 11:57 AM | A+A A-

ಸಾಂದರ್ಭಿಕ ಚಿತ್ರ
ಬೆಂಗಳೂರು: ಹೈಟೆಕ್ ಹನಿಟ್ರ್ಯಾಪ್ ದಂಧೆ ನಡೆಸುತ್ತಾ ಮ್ಯಾಟ್ರಿಮೋನಿಯಲ್ಲಿ ಅವಿವಾಹಿತ ಹಾಗೂ ವಿಚ್ಛೇದಿತ ಪುರುಷರನ್ನೇ ಗುರಿಯಾಗಿಸಿಕೊಂಡಿದ್ದ ಮಾಜಿ ಶಿಕ್ಷಕಿಯೊಬ್ಬಳನ್ನು ಇಂದಿರಾ ನಗರ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಕವಿತಾ ಬಂಧಿತ ಮಾಜಿ ಶಿಕ್ಷಕಿ. ಈ ಹಿಂದೆ ವೃತ್ತಿಯಲ್ಲಿ ಶಿಕ್ಷಕಿಯಾಗಿದ್ದ ಕವಿತಾ, ಕಾರಣಾಂತರಗಳಿಂದ ಶಿಕ್ಷಕ ವೃತ್ತಿ ಕಳೆದುಕೊಂಡಿದ್ದಳು. ಬಳಿಕ ಹನಿಟ್ರ್ಯಾಪ್ ದಂಧೆ ಆರಂಭಿಸದ್ದಳು.
ಮ್ಯಾಟ್ರಿಮೋನಿಯಲ್ಲಿ ಅವಿವಾಹಿತ ಹಾಗೂ ವಿಚ್ಛೇದಿತ ಪುರುಷರನ್ನು ಪರಿಚಯ ಮಾಡಿಕೊಳ್ಳುತ್ತಿದ್ದಳು. ಅವರೊಂದಿಗಿನ ಖಾಸಗಿ ಕ್ಷಣಗಳನ್ನು ಚಿತ್ರೀಕರಿಸಿಕೊಂಡು ನಂತರ ಹಣಕ್ಕಾಗಿ ಬೇಡಿಕೆ ಇಡುತ್ತಿದ್ದಳು ಎಂದು ಪೊಲೀಸರ ವಿಚಾರಣೆಯ ವೇಳೆ ತಿಳಿದುಬಂದಿದೆ. ಇದೇ ರೀತಿ ಕವಿತಾ ಡಿ. 22ರಂದು ಯುವಕನೊಬ್ಬನ ವಿರುದ್ಧ ಅತ್ಯಾಚಾರದ ಆರೋಪ ಮಾಡಿದ್ದಳು.
ಸಂತ್ರಸ್ತ ಯುವಕ ಅತ್ಯಾಚಾರವೆಸಗಿ ವಿಡಿಯೋ ಚಿತ್ರೀಕರಿಸಿದ್ದಾನೆ ಎಂದು ಆರೋಪಿಸಿ ಪೊಲೀಸರನ್ನು ಕರೆಸಿ ಅವರ ಸಮ್ಮುಖದಲ್ಲೇ ಖಾಸಗಿ ವಿಡಿಯೋ ಡಿಲಿಟ್ ಮಾಡಿಸಿದ್ದಳು. ಯುವಕನ ವಿರುದ್ಧ ದೂರು ನೀಡದಿರಲು 2 ಲಕ್ಷ ಹಣಕ್ಕೆ ಆತನ ಬಳಿ ಬೇಡಿಕೆ ಇಟ್ಟಿದ್ದಳು. ಆದ್ರೆ ಸಂತ್ರಸ್ತ ಯುವಕ ಹಣ ನೀಡದಿದ್ದಾಗ ಡಿ.31ರಂದು ಆತನ ವಿರುದ್ಧ ಇಂದಿರಾನಗರ ಠಾಣೆಗೆ ದೂರು ನೀಡಿದ್ದಳು.
ಅಸಲಿಗೆ ವಿಡಿಯೋ ಡಿಲಿಟ್ ಮಾಡಲಾಗಿದೆ. ಆದರೂ ಈ ಪ್ರಕರಣ ಸಂಬಂಧ ಯುವಕನ ಮೇಲೆ ಕವಿತಾ ದೂರು ದಾಖಲಿಸಿದ್ದಳು. ಇತ್ಯರ್ಥ ಎಂದುಕೊಂಡ ಪ್ರಕರಣ ಮತ್ತೆ ಠಾಣಾ ಮೆಟ್ಟಿಲೇರಿದ್ದಾಗ ಪೊಲೀಸರಿಗೆ ಅನುಮಾನ ಬಂದಿದೆ. ಆಗ ಕವಿತಾಳ ಮೊಬೈಲ್ ಪಡೆದು ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ಆಕೆಯ ಕಳ್ಳಾಟ ಬಯಲಾಗಿದೆ.
ವಿಡಿಯೋ ಪರಿಶೀಲಿಸಿದಾಗ ಪರಸ್ಪರ ಒಪ್ಪಿಯೇ ದೈಹಿಕ ಸಂಪರ್ಕ ಹೊಂದಿರುವುದು ತಿಳಿದು ಬಂದಿದೆ. ಕವಿತಾಳ ಬಣ್ಣ ಬಯಲಾಗುತ್ತಿದ್ದಂತೆ ಇಂದಿರಾನಗರ ಠಾಣಾ ಪೊಲೀಸರು ತೀವ್ರ ವಿಚಾರಣೆ ನಡೆಸಿ ದೂರುದಾರಳಾಗಿದ್ದ ಕವಿತಾಳ ಕೃತ್ಯ ತಿಳಿದುಕೊಂಡಿದ್ದಾರೆ.
ಕವಿತಾ ಇದೇ ಪ್ರಕರಣ ಸಂಬಂಧ ಯುವಕನ ಮೇಲೆ 2 ವಿವಿಧ ಠಾಣೆಗಳಲ್ಲಿ ದೂರು ನೀಡಿದ್ದಳು. ಹಾಗೂ ಮಲ್ಲೇಶ್ವರಂ, ಮಹಾದೇವಪುರ ಠಾಣೆಯಲ್ಲಿ ಈ ಹಿಂದೆ ಇದೇ ರೀತಿ ದೂರು ನೀಡಿದ್ದಳು.