
ಲಕ್ಷ್ಮಣ ಸವದಿ
ಬೆಂಗಳೂರು: ಸಾರಿಗೆ ಇಲಾಖೆ ಜವಾಬ್ದಾರಿ ಹೊತ್ತಿರುವ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಪರಿಸರ ಸ್ನೇಹಿ ಎಲೆಕ್ಟ್ರಿಕ್ ಆಟೋ ಓಡಿಸಿ ಗನಮ ಸೆಳೆದರು.
ನಗರದಲ್ಲಿಂದ ಪಿಜಿಯೋ ಸಂಸ್ಥೆಯು ಅಭಿವೃದ್ಧಿಪಡಿಸಿರುವ ಪರಿಸರಸ್ನೇಹಿ ಎಲೆಕ್ಟ್ರಿಕ್ ಆಟೋರಿಕ್ಷಾವನ್ನು ಸ್ವತಃ ಚಾಲನೆ ಮಾಡಿ ಸಾಮರ್ಥ್ಯು ಪರೀಕ್ಷಿಸಿದರು.
ಅಷ್ಟೇಅಲ್ಲ, ಈ ಆಟೋರಿಕ್ಷಾದ ಮೊದಲ ಮಾರಾಟಕ್ಕೆ ಚಾಲನೆ ನೀಡಿ ಕೀ ಯನ್ನು ಹಸ್ತಾಂತರಿಸಿದರು. ಬೆಂಗಳೂರು ಸೇರಿದಂತೆ ನಗರ ಪ್ರದೇಶಗಳಿಗೆ ಪರಿಸರ ಸ್ನೇಹಿ ವಾಹನಗಳು ಅಗತ್ಯವಾಗಿದ್ದು, ಜನ ಮಾಲೀನ್ಯ ನಿಯಂತ್ರಣಕ್ಕೆ ಒತ್ತು ನೀಡಬೇಕು ಎಂದು ಹೇಳಿದರು.
ಇಂದು ಬೆಂಗಳೂರಿನಲ್ಲಿ ಪಿಜಿಯೋ ಸಂಸ್ಥೆಯು ಅಭಿವೃದ್ಧಿಪಡಿಸಿರುವ ಪರಿಸರಸ್ನೇಹಿ ಎಲೆಕ್ಟ್ರಿಕ್ ಆಟೋರಿಕ್ಷಾವನ್ನು ಸ್ವತಃ ಚಾಲನೆ ನಡೆಸಿ ತಪಾಸಣೆ ನಡೆಸಲಾಯಿತು. ಅಲ್ಲದೆ ಈ ಆಟೋರಿಕ್ಷಾದ ಮೊದಲ ಮಾರಾಟಕ್ಕೆ ಚಾಲನೆ ನೀಡಿ ಕೀ ಯನ್ನು ಹಸ್ತಾಂತರಿಸಲಾಯಿತು. pic.twitter.com/bhuSunXQwt
— Laxman Sangappa Savadi | ಲಕ್ಷ್ಮಣ್ ಸಂಗಪ್ಪ ಸವದಿ (@LaxmanSavadi) January 7, 2021