ರಾಯಚೂರಿನಲ್ಲಿ ಹತ್ತಿ ಖರೀದಿ, ಸಂಸ್ಕರಣಾ ಕೇಂದ್ರ ಸ್ಥಾಪಿಸಿ: ಸ್ಮೃತಿ ಇರಾನಿಗೆ ಸದಾನಂದಗೌಡ ಮನವಿ
ರಾಜ್ಯದಲ್ಲಿ ಅತಿ ಹೆಚ್ಚು ಹತ್ತಿ ಬೆಳೆಯುವ ಪ್ರದೇಶವಾಗಿರುವ ರಾಯಚೂರಿನಲ್ಲಿ ಹತ್ತಿ ಖರೀದಿ ಮತ್ತು ಹತ್ತಿ ಸಂಸ್ಕರಣಾ ಕೇಂದ್ರ ತೆರೆಯಲು ಸೂಕ್ತ ಕ್ರಮ ಕೈಗೊಳ್ಳುವಂತೆ ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ಸಚಿವ ಡಿ.ವಿ. ಸದಾನಂದಗೌಡ...
Published: 07th January 2021 02:33 PM | Last Updated: 07th January 2021 02:33 PM | A+A A-

ಸ್ಮೃತಿ ಇರಾನಿ-ಸದಾನಂದಗೌಡ
ಬೆಂಗಳೂರು: ರಾಜ್ಯದಲ್ಲಿ ಅತಿ ಹೆಚ್ಚು ಹತ್ತಿ ಬೆಳೆಯುವ ಪ್ರದೇಶವಾಗಿರುವ ರಾಯಚೂರಿನಲ್ಲಿ ಹತ್ತಿ ಖರೀದಿ ಮತ್ತು ಹತ್ತಿ ಸಂಸ್ಕರಣಾ ಕೇಂದ್ರ ತೆರೆಯಲು ಸೂಕ್ತ ಕ್ರಮ ಕೈಗೊಳ್ಳುವಂತೆ ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ಸಚಿವ ಡಿ.ವಿ. ಸದಾನಂದಗೌಡ ಕೇಂದ್ರ ಜವಳಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಸ್ಮೃತಿ ಇರಾನಿ ಅವರಿಗೆ ಪತ್ರ ಬರೆದಿದ್ದಾರೆ.
ರಾಯಚೂರು ಕೃಷಿ ಉತ್ಪನ್ನ ಮಾರುಕಟ್ಟೆ ಸಂಸ್ಕರಣಾ ಸೊಸೈಟಿಯ ಮೂಲಕವೇ ಹತ್ತಿ ಖರೀದಿ ಮಾಡಬೇಕು. ಹತ್ತಿ ಸಂಸ್ಕರಣೆ [ಗಿನ್ನಿಂಗ್ ಅಂಡ್ ಪ್ರೊಸೆಸಿಂಗ್] ಪ್ರಕ್ರಿಯೆಯನ್ನು ಸಹ ಇದೇ ಸ್ಥಳದಲ್ಲಿ ಮಾಡಲು ಸೂಕ್ತ ಕ್ರಮ ತೆಗೆದುಕೊಳ್ಳಬೇಕು. ಕೇಂದ್ರ ಸರ್ಕಾರ ರಾಯಚೂರು ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ವಿಶೇಷ ಆದ್ಯತೆ ನೀಡಿ ಕೆಲಸ ಮಾಡುತ್ತಿದ್ದು, ಹೀಗಾಗಿ ಈ ಮನವಿಯನ್ನು ಪುರಸ್ಕರಿಸುವಂತೆ ಸದಾನಂದ ಗೌಡ ಮನವಿ ಮಾಡಿದ್ದಾರೆ.
ರಾಷ್ಟ್ರೀಯ ಕೃಷಿ ಸಹಕಾರ ಮಾರುಕಟ್ಟೆ ಒಕ್ಕೂಟದ ನಿರ್ದೇಶನ ಪತಂಗೆ ಜಯವಂತರಾವ್ ಅವರ ನೇತೃತ್ವದ ನಿಯೋಗ ಈ ಸಂಬಂಧ ಸದಾನಂದಗೌಡರಿಗೆ ಮನವಿ ಸಲ್ಲಿಸಿತ್ತು. ರಾಯಚೂರು ಅತಿ ಹೆಚ್ಚು ಹತ್ತಿ ಬೆಳೆಯುವ ಪ್ರದೇಶವಾಗಿದೆ. ರಾಯಚೂರು ಸೊಸೈಟಿಯಲ್ಲಿ ಎರಡು ಸಾವಿರಕ್ಕೂ ಹೆಚ್ಚು ಸದಸ್ಯರಿದ್ದು, ಇದೇ ಸಂಸ್ಥೆ ಮೂಲಕವೇ ಹತ್ತಿ ಖರೀದಿ ಮತ್ತು ಸಂಸ್ಕರಣೆಗೆ ವ್ಯವಸ್ಥೆ ಮಾಡಿದರೆ ಹೆಚ್ಚಿನ ರೀತಿಯಲ್ಲಿ ಅನುಕೂಲವಾಗುತ್ತದೆ ಎಂದು ನಿಯೋಗ ಮನವಿ ಮಾಡಿತ್ತು.