
ಅರಣ್ಯ ಸಿಬ್ಬಂದಿ
ಹುಬ್ಬಳ್ಳಿ: ದಂಡೇಲಿಯ ಕಾಳಿ ಹುಲಿ ಮೀಸಲು ಪ್ರದೇಶದಲ್ಲಿ ಗಸ್ತು ತಿರುಗಲು ಕರ್ನಾಟಕ ಅರಣ್ಯ ಇಲಾಖೆ ಅನುಮತಿ ನೀಡಿದೆ.
ಹುಲಿ ಮೀಸಲು ಪ್ರದೇಶದ ಹೆಚ್ಚಿನ ಭಾಗ ಕಾಳಿ ನದಿ ಮತ್ತು ಸುಪಾ ಮತ್ತು ಕೊಡಸಲ್ಲಿ ಅಣೆಕಟ್ಟುಗಳ ಹಿನ್ನೀರನ್ನು ಹೊಂದಿದೆ. ಹೀಗಾಗಿ ಹೊಸದಾಗಿ ಎರಡು ದೋಣಿಗಳನ್ನು ಗಸ್ತಿಗೆ ಬಳಸಲಾಗುತ್ತದೆ.
ಕಾಳಿ ಟೈಗರ್ ರಿಸರ್ವ್ನ ಕುಂಬರ್ವಾಡ ವನ್ಯಜೀವಿ ಶ್ರೇಣಿಯಲ್ಲಿನ ಅರಣ್ಯವಾಸಿಗಳಿಗೆ ಪ್ರಸ್ತುತ ಎರಡು ಮೋಟಾರು ದೋಣಿಗಳನ್ನು ನೀಡಲಾಗಿದೆ.
ಕಾಳಿ ಟೈಗರ್ ರಿಸರ್ವ್ ಜೊತೆಗೆ, ಮೈಸೂರಿನ ನಾಗರಹೊಳೆ ಟೈಗರ್ ರಿಸರ್ವ್ನ ಕಬಿನಿ ಭಾಗದಲ್ಲಿ ದೋಣಿ ಗಸ್ತು ತಿರುಗುತ್ತದೆ. ಕಾಳಿ ಹುಲಿ ಮೀಸಲು ಭಾಗವಾಗಿರುವ ಹಲವಾರು ಪ್ರದೇಶಗಳನ್ನು ಜಲಮಾರ್ಗದ ಮೂಲಕ ಪ್ರವೇಶಿಸಲಾಗುವುದಿಲ್ಲ ಎಂಬುದು ಅರಣ್ಯವಾಸಿಗಳು ಅಳಲಾಗಿತ್ತು.
ಮಳೆಗಾಲದಲ್ಲಿ ಹಲವಾರು ಪ್ರದೇಶಗಳು ಜಲಾವೃತವಾಗುತ್ತದೆ. ಜೊತೆಗೆ ಅಲ್ಲಿಗೆ ತಲುಪುವುದು ಕಷ್ಟದ ಕೆಲಸವಾಗುತ್ತದೆ. ಹೊಸ ದೋಣಿಗಳೊಂದಿಗೆ, ಮಳೆಗಾಲದಲ್ಲೂ ಈ ಪ್ರದೇಶಗಳನ್ನು ತಲುಪಬಹುದಾಗಿದೆ.
ಕಾಳಿ ಟೈಗರ್ ರಿಸರ್ವ್ನ ಹಿರಿಯ ಅರಣ್ಯ ಅಧಿಕಾರಿಯೊಬ್ಬರು, ದೋಣಿಗಳ ಬೆಲೆ ತಲಾ 4.88 ಲಕ್ಷ ರೂ. ಆಗಿದ್ದು ಪ್ರಸ್ತುತ ಸುಪಾ ಅಣೆಕಟ್ಟು ಹಿನ್ನೀರಿನಲ್ಲಿ ಗಸ್ತು ನಡೆಸುತ್ತವೆ ಎಂದರು.
"2019ರಲ್ಲಿ ಕುಂಬರ್ವಾಡ ವಿಭಾಗದ ಕೆಲವು ಭಾಗಗಳಲ್ಲಿ ಬೇಟೆಯಾಡುವಿಕೆ ಮತ್ತು ಮರಗಳ್ಳನತ ಪ್ರಕರಣಗಳು ವರದಿಯಾಗಿತ್ತು. ಹೀಗಾಗಿ ಬೇಟೆಯಾಡುವುದು ಮತ್ತು ಮರಗಳ್ಳತನದಂತ ಕಾನೂನುಬಾಹಿರ ಚಟುವಟಿಕೆಗಳ ಮೇಲೆ ಕಣ್ಣಿಡಲು ಇದು ಸಹಾಯಕವಾಗುತ್ತದೆ ಎಂದು ಅಧಿಕಾರಿ ಹೇಳಿದರು.