ಏರೋ ಇಂಡಿಯಾ 2019 ಅಗ್ನಿ ಅವಘಡ: ಬಿಸಿಯಾಗಿದ್ದ ಕಾರಿನ ಎಂಜಿನ್ ಅನಾಹುತಕ್ಕೆ ಕಾರಣ; ಹೈಕೋರ್ಟ್'ಗೆ ಪೊಲೀಸರ ಮಾಹಿತಿ
ಕಳೆದ ಏರೋ ಇಂಡಿಯಾ ಕಾರ್ಯಕ್ರಮದ ವೇಳೆ ವಾಹನ ನಿಲುಗಡೆ ತಾಣದಲ್ಲಿ ಬಿಸಿಯಾಗಿದ್ದ ಕಾರುಗಳ ಎಂಜಿನ್ ಮತ್ತು ಸೈಲೆನ್ಸರ್ ಗಳು ಒಣಗಿದ್ದ ಹುಲ್ಲುಗಳಿಗೆ ತಾಗಿ ಬೆಂಕಿ ಹೊತ್ತಿಕೊಂಡಿತ್ತು ಎಂದು ಆಕಸ್ಮಿಕ ಅನಾಹುತವಾಗಿತ್ತು ಎಂದು ಹೈಕೋರ್ಟ್'ಗೆ ಪೊಲೀಸರು ಮಾಹಿತಿ ನೀಡಿದ್ದಾರೆ.
Published: 08th January 2021 12:03 PM | Last Updated: 08th January 2021 12:40 PM | A+A A-

ಸಂಗ್ರಹ ಚಿತ್ರ
ಬೆಂಗಳೂರು: ಕಳೆದ ಏರೋ ಇಂಡಿಯಾ ಕಾರ್ಯಕ್ರಮದ ವೇಳೆ ವಾಹನ ನಿಲುಗಡೆ ತಾಣದಲ್ಲಿ ಬಿಸಿಯಾಗಿದ್ದ ಕಾರುಗಳ ಎಂಜಿನ್ ಮತ್ತು ಸೈಲೆನ್ಸರ್ ಗಳು ಒಣಗಿದ್ದ ಹುಲ್ಲುಗಳಿಗೆ ತಾಗಿ ಬೆಂಕಿ ಹೊತ್ತಿಕೊಂಡಿತ್ತು ಎಂದು ಆಕಸ್ಮಿಕ ಅನಾಹುತವಾಗಿತ್ತು ಎಂದು ಹೈಕೋರ್ಟ್'ಗೆ ಪೊಲೀಸರು ಮಾಹಿತಿ ನೀಡಿದ್ದಾರೆ.
ಕಳೆದ ಏರ್ ಶೋ ವೇಳೆ ಯಲಹಂಕ ವಾಯುನೆಲೆಯಲ್ಲಿ ನಡೆದ ಅಗ್ನಿ ಅವಘಡಕ್ಕೆ ಸಂಬಂಧಿಸಿದಂತೆ ಯಲಹಂಕ ಉಪವಿಭಾಗದ ಸಹಾಯಕ ಪೊಲೀಸ್ ಆಯುಕ್ತರು ನ್ಯಾಯಾಲಯಕ್ಕೆ ವರದಿ ಸಲ್ಲಿಸಿದ್ದಾರೆ.
ವರದಿಯಲ್ಲಿ ಏರೋ ಶೋ ವೇಳೆ ಫೆ.23 ರಂದು ಗೇಟ್-5ರಲ್ಲಿ ಇದ್ದ ವಾಹನ ನಿಲುಗಡೆ ತಾಣದಲ್ಲಿ ನಿಂತಿದ್ದ ಕಾರುಗಳ ಎಂಜಿನ್ ಗಳು ಮತ್ತು ಸೈಲನ್ಸ್ ರ್ ಗಳು ಒಣಗಿದ್ದ ಹುಲ್ಲಿಗಳಿದೆ ತಾಕಿದೆ. ಇದರ ಪರಿಣಾಮ ಬೆಂಕಿ ಹೊತ್ತುಕೊಂಟು ಸ್ಥಳದಲ್ಲಿದ್ದ ಕಾರುಗಳು ಸುಟ್ಟು ಹೋಗಿದ್ದವು. ಘಟನೆಯಲ್ಲಿ 277 ಕಾರುಗಳು ಪೂರ್ಣ ಪ್ರಮಾಣದಲ್ಲಿ ಭಸ್ಮವಾಗಿದ್ದಾರೆ, 44 ಕಾರುಗಳು ಭಾಗಶಃ ಸುಟ್ಟುಹೊಗಿದ್ದವು ಎಂದು ತಿಳಿಸಿದ್ದಾರೆ.