ಯಶಸ್ವಿನಿ ಜಾರಿಯಾದರೆ ಅಗತ್ಯವಾದ 400 ಕೋಟಿ ಅನುದಾನ ಕೊಡಲು ಸಹಕಾರ ಇಲಾಖೆ ಬದ್ಧ; ಸಚಿವ ಸೋಮಶೇಖರ್

ರಾಜ್ಯದ ಜನರಿಂದ ಯಶಸ್ವಿನಿ ಯೋಜನೆ ಮರು ಜಾರಿ ಬಗ್ಗೆ ಬೇಡಿಕೆಗಳು ಬರುತ್ತಲೇ ಇದೆ.ಆದರೆ,ಈಗಾಗಲೆ ಆಯುಷ್ಮಾನ್ ಭಾರತ ಯೋಜನೆಯಡಿ ರಾಜ್ಯ ಸರ್ಕಾರದ ಯೋಜನೆ ಸೇರಿಕೊಂಡಿರುವುದರಿಂದ ಯಶಸ್ವಿನಿ ಜಾರಿ ಬಗ್ಗೆ ಸರ್ಕಾರ ಮಟ್ಟದಲ್ಲಿ ಚರ್ಚೆಗಳು ನಡೆಯುತ್ತಿವೆ.ಒಂದು ವೇಳೆ ಈ ಯೋಜನೆ ಜಾರಿಗೆ ತರುವುದಿದ್ದರೆ ಅದಕ್ಕೆ ಬೇಕಾದ ಸುಮಾರು 400 ಕೋಟಿ ರೂಪಾಯಿ ಅನುದಾನ ವನ್ನು ಸಹಕಾರ ಇಲಾಖೆ ಮ

Published: 09th January 2021 07:37 PM  |   Last Updated: 09th January 2021 08:29 PM   |  A+A-


ಎಸ್.ಟಿ ಸೋಮಶೇಖರ್

Posted By : Raghavendra Adiga
Source : UNI

ಮೈಸೂರು:

ಮೈಸೂರು: ರಾಜ್ಯದ ಜನರಿಂದ ಯಶಸ್ವಿನಿ ಯೋಜನೆ ಮರು ಜಾರಿ ಬಗ್ಗೆ ಬೇಡಿಕೆಗಳು ಬರುತ್ತಲೇ ಇದೆ.ಆದರೆ,ಈಗಾಗಲೆ ಆಯುಷ್ಮಾನ್ ಭಾರತ ಯೋಜನೆಯಡಿ ರಾಜ್ಯ ಸರ್ಕಾರದ ಯೋಜನೆ ಸೇರಿಕೊಂಡಿರುವುದರಿಂದ ಯಶಸ್ವಿನಿ ಜಾರಿ ಬಗ್ಗೆ ಸರ್ಕಾರ ಮಟ್ಟದಲ್ಲಿ ಚರ್ಚೆಗಳು ನಡೆಯುತ್ತಿವೆ.ಒಂದು ವೇಳೆ ಈ ಯೋಜನೆ ಜಾರಿಗೆ ತರುವುದಿದ್ದರೆ ಅದಕ್ಕೆ ಬೇಕಾದ ಸುಮಾರು 400 ಕೋಟಿ ರೂಪಾಯಿ ಅನುದಾನ ವನ್ನು ಸಹಕಾರ ಇಲಾಖೆ ಮೂಲಕ ಕೊಡಲಾಗುವುದು ಎಂದು ಸಹಕಾರ ಸಚಿವ ಎಸ್.ಟಿ.ಸೋಮಶೇಖರ್ ಘೋಷಿಸಿದರು.
    
ಹಿಂದಿನ ಕಾಂಗ್ರೆಸ್ ಸರ್ಕಾರದಲ್ಲಿ ಆಗಿನ ಆರೋಗ್ಯ ಸಚಿವರಾಗಿದ್ದ ರಮೇಶ್ ಕುಮಾರ್ ಅವರು ಕಾಯ್ದೆಗೆ ತಿದ್ದು ಪಡಿ ಮಾಡಿ ಜಾರಿಗೆ ತಂದಿದ್ದರು.ಈಗ ಅದನ್ನು ಬದಲಾಯಿಸಬೇಕು.ಹೀಗಾಗಿ ಯಶಸ್ವಿನಿ ಜಾರಿಗೆ ತಾಂತ್ರಿಕ ತೊಡಕುಗಳಿದ್ದು,ಸದ್ಯ ಆರೋಗ್ಯ ಇಲಾಖೆಯಲ್ಲಿ ಇದರ ಸಾಧಕ-ಬಾಧಕಗಳ ಬಗ್ಗೆ ಚರ್ಚೆಗಳು ನಡೆಯುತ್ತಿವೆ. ಅಲ್ಲದೆ, ಆರೋಗ್ಯ ಸಚಿವರು ಸೂಕ್ತ ನಿರ್ಧಾರವನ್ನು ಕೈಗೊಳ್ಳಲಿದ್ದಾರೆ.ಜೊತೆಗೆ ನನಗೂ ಸಹ ಹಲವರು ಯಶಸ್ವಿನಿ ಮರುಜಾರಿ ಬಗ್ಗೆ ಮನವಿ ಸಲ್ಲಿಸುತ್ತಿದ್ದಾರೆ ಎಂದು ಅವರು ಸುದ್ದಿಗೋಷ್ಠಿಯಲ್ಲಿ ಉತ್ತರಿಸಿದರು.
    
ನಾನು ಸಹ ರಾಜ್ಯದಲ್ಲಿ ಪುನಃ ಯಶಸ್ವಿನಿಯನ್ನು ಜಾರಿಗೆ ತರಬೇಕು ಎಂಬ ಬಗ್ಗೆ ಆಸಕ್ತಿ ಹೊಂದಿದ್ದೇನೆ.ಇದರ ವಿಷಯವಾಗಿ ಮುಖ್ಯಮಂತ್ರಿಗಳಾದ ಬಿ.ಎಸ್.ಯಡಿಯೂರಪ್ಪ ಅವರ ಜೊತೆಯೂ ಮಾತನಾಡಿದ್ದೇನೆ.ಅವರೂ ಸಹ ಆಸಕ್ತಿ ಹೊಂದಿದ್ದಾರೆ ಎಂದು ತಿಳಿಸಿದ ಸೋಮಶೇಖರ್,ಎಲ್ಲ ಸಹಕಾರ ಸಂಸ್ಥೆಗಳ ಮೂಲಕ ಹಣ ಸಂಗ್ರಹಿಸಿ ಯೊಜನೆಗೆ ತಗುಲುವ ಸುಮಾರು 400 ಕೋಟಿ ರೂಪಾಯಿಯನ್ನು ಒದಗಿಸಲಾಗುವುದು ಎಂದು ತಿಳಿಸಿದರು.

ಜಿಲ್ಲೆಯ ಎಲ್ಲ ಗ್ರಾಮ ಪಂಚಾಯಿತಿಗಳ ನ್ನು ಬಿಜೆಪಿಯೇ ಗೆದ್ದಿದೆ ಎಂದು ಹೇಳಿಲ್ಲ

ನಾವು ಗೆದ್ದಿದ್ದರ ಬಗ್ಗೆಯಷ್ಟೇ ಹೇಳಿಕೊಂಡಿದ್ದೇವೆ.ಮೈಸೂರು ಜಿಲ್ಲೆಯಲ್ಲಿರುವ ಎಲ್ಲ ಗ್ರಾಮ ಪಂಚಾಯಿತಿಗಳ ನ್ನು ಬಿಜೆಪಿಯೇ ಗೆದ್ದಿದೆ ಎಂದು ನಾವು ಎಂದೂ ಹೇಳಿಕೊಂಡಿಲ್ಲ.1322 ಸ್ಥಾನಗಳನ್ನು ನಾವು ಗೆದ್ದಿದ್ದೇವೆ.ಅಷ್ಟೂ ನಾಲ್ಕು ಸಾವಿರ ಸ್ಥಾನಗಳನ್ನು ನಾವೇ ಗೆದ್ದಿದ್ದೇವೆಂದು ಹೇಳಿಕೊಂಡಿಲ್ಲವಲ್ಲ.ಕಾಂಗ್ರೆಸ್-ಜೆಡಿಎಸ್ ನವರು ಅವರ ಬಗ್ಗೆ ಹೇಳಿಕೊಳ್ಳುತ್ತಿದ್ದಾರೆ.ಆದರೆ,ನಾವು ಮೈಸೂರು ಜಿಲ್ಲೆಯ ಗ್ರಾಮಾಂತರ ಭಾಗದ 8ವಿಧಾನಸಭಾ ಕ್ಷೇತ್ರಗಳಲ್ಲಿ ಎಷ್ಟು ಸ್ಥಾನವನ್ನು ಗೆದ್ದಿದ್ದೇವೆಂಬ ಬಗ್ಗೆ ದಾಖಲೆ ಸಮೇತ ಮಾಹಿತಿಯನ್ನು ಕೊಟ್ಟಿದ್ದೇವೆ. ನಾವು ಗೆದ್ದಿದ್ದರ ಬಗ್ಗೆಯಷ್ಟೇ ಹೇಳಿಕೊಂಡಿದ್ದೇವೆ ಎಂದು ಅವರು ತಿಳಿಸಿದರು.
    
ಈ ಬಾರಿಯ ಗ್ರಾಮ ಪಂಚಾಯಿತಿ ಚುನಾವಣೆಗಳಲ್ಲಿ ಕಳೆದ ಬಾರಿಗಿಂತ ಹೆಚ್ಚು ಸ್ಥಾನಗಳನ್ನು ನಾವು ಗೆದ್ದಿದ್ದೇವೆ. ಇದನ್ನು ನಾವು ದಾಖಲೆ ಸಹಿತವೇ ನೀಡಿದ್ದೇವೆ.ಅಲ್ಲದೆ,ಇನ್ನು ಮುಂದೆ ಬರುವ ತಾಲೂಕು ಹಾಗೂ ಜಿಲ್ಲಾ ಪಂ ಚಾಯಿತಿ ಚುನಾವಣೆಗಳಲ್ಲೂ ಹೆಚ್ಚಿನ ಸ್ಥಾನಗಳನ್ನು ಗೆಲ್ಲಲಿದ್ದೇವೆ.ಇನ್ನು ಮೈಸೂರಿನಲ್ಲಿ 252 ಜಿಲ್ಲಾ ಪಂಚಾ ಯಿತಿ ಸ್ಥಾನಗಳಿದ್ದು,ಅದರಲ್ಲಿ ಸದ್ಯದ ಮಟ್ಟಿಗೆ 80 ಸ್ಥಾನಗಳನ್ನು ನಾವು ಸುಲಭ ವಾಗಿ ಗೆಲ್ಲಲಿದ್ದೇವೆ.ಉಳಿದ ಸ್ಥಾನಗಳನ್ನು ಗೆಲ್ಲುವುದು ಹಾಗೂ ತಂತ್ರಗಾರಿಕೆ ನಡೆಸುವುದರ ಬಗ್ಗೆ ಚರ್ಚೆಗಳನ್ನು ನಡೆಸಲಾಗುವುದು.ಇದಕ್ಕೋಸ್ಕರ ವಿಭಾಗಗಳನ್ನು ರಚಿಸಿಕೊಂಡು ಒಂದು ತೀರ್ಮಾನಕ್ಕೆ ಬರಲಾಗುವುದು.ಈಗಲೇ ಖಚಿತವಾಗಿ ಏನನ್ನೂ ಹೇಳಲಾಗದು ಎಂದು ಪ್ರಶ್ನೆಯೊಂದಕ್ಕೆ ಸಚಿವರಾದ ಸೋಮಶೇಖರ್ ಉತ್ತರಿಸಿದರು. 

ಜನವರಿ 11ರಂದು ಬಿಜೆಪಿಯಿಂದ ಜನಸೇವಕ ಸಮಾವೇಶಕ್ಕೆ ಚಾಲನೆ

ಪ್ರಧಾನ ಕಾರ್ಯದರ್ಶಿಗಳಾದ ಅಶ್ವಥ್ ನಾರಾಯಣ್ ಮಾತನಾಡಿ, ಜನವರಿ 11ರಂದು ಬಿಜೆಪಿಯಿಂದ ಜನಸೇವಕ ಸಮಾವೇಶಕ್ಕೆ ಚಾಲನೆ ನೀಡಲಾಗುತ್ತಿದೆ.ಇದು ರಾಜ್ಯದ 30 ಜಿಲ್ಲೆಗಳಲ್ಲಿಯೂ ನಡೆಲಿದ್ದು,ಒಟ್ಟು 5 ತಂಡಗಳು ಒಂದೊಂದು ವಿಭಾಗದ ಉಸ್ತುವಾರಿಯನ್ನು ವಹಿಸಿಕೊಂಡು ಕಾರ್ಯಕ್ರಮಗಳನ್ನು ನಡೆಸಿಕೊಡಲಿದೆ.ಮೈ ಸೂರಿನಲ್ಲಿ ಸಮಾವೇಶ ಉದ್ಘಾಟನೆಗೊಳ್ಳಲಿದ್ದು,ಮುಖ್ಯಮಂತ್ರಿಗಳಾದ ಬಿ.ಎಸ್.ಯಡಿಯೂರಪ್ಪ ಅವರಿಂದ ಚಾಲನೆ ಸಿಗಲಿದೆ. ಬೆಂಗಳೂರಿನಲ್ಲಿ ಸಮಾರೋಪ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.
 


Stay up to date on all the latest ರಾಜ್ಯ news
Poll
lokasbha

ಸಂಸತ್ತಿನ ಕಲಾಪಗಳಿಗೆ ಅಡ್ಡಿಪಡಿಸುವ ಸಂಸದರಿಗೆ ದಂಡ ವಿಧಿಸಬೇಕೇ?


Result
ಹೌದು, ಇವರಿಂದ ಸಮಯ ವ್ಯರ್ಥ
ಬೇಡ, ಅವರು ಪ್ರತಿಭಟಿಸಬೇಕು
flipboard facebook twitter whatsapp