ಪ್ರೇಮಾಕುಮಾರಿಗೆ ವಂಚನೆ ಪ್ರಕರಣ: ಶಾಸಕ ಎಸ್.ಎ. ರಾಮದಾಸ್​ಗೆ ನಿರೀಕ್ಷಣಾ ಜಾಮೀನು

ಪ್ರೇಮಾಕುಮಾರಿಗೆ ವಂಚನೆ, ಬೆದರಿಕೆ ಪ್ರಕರಣದಲ್ಲಿ ಶಾಸಕ ಎಸ್.ಎ. ರಾಮದಾಸ್ ಅವರಿಗೆ ಮೈಸೂರು ಜಿಲ್ಲಾ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ನಿರೀಕ್ಷಣಾ ಜಾಮೀನು ನೀಡಿದೆ.

Published: 09th January 2021 07:00 PM  |   Last Updated: 09th January 2021 07:01 PM   |  A+A-


ಎಸ್.ಎ.ರಾಮದಾಸ್

Posted By : Raghavendra Adiga
Source : Online Desk

ಮೈಸೂರು: ಪ್ರೇಮಾಕುಮಾರಿಗೆ ವಂಚನೆ, ಬೆದರಿಕೆ ಪ್ರಕರಣದಲ್ಲಿ ಶಾಸಕ ಎಸ್.ಎ. ರಾಮದಾಸ್ ಅವರಿಗೆ ಮೈಸೂರು ಜಿಲ್ಲಾ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ನಿರೀಕ್ಷಣಾ ಜಾಮೀನು ನೀಡಿದೆ.

ರಾಮದಾಸ್ ಅವರಿಗೆ 50 ಸಾವಿರದ ಬಾಂಡ್ ನೀಡುವಂತೆ ಹೇಳಿ ಬ್ಯಾಯಾಕಯ ಜಾಮೀನು ಮಂಜುರು ಮಾಡಿದೆ.

ಪ್ರೇಮಾಕುಮಾರಿ ಪ್ರಕರಣದಲ್ಲಿ ರಾಮದಾಸ್ ಅವರ ಮೇಲಿನ ಆರೋಪ ಸಾಬೀತಾಗಿಲ್ಲ ಎಂದು ಮೈಸೂರಿನ ರಸ್ವತಿಪುರಂ ಪೊಲೀಸರು ಬಿ ರಿಪೋರ್ಟ್ ಸಲ್ಲಿಸಿದ್ದರು. ಆದರೆ ಪೋಲೀಸರ ವರದಿ ತಿರಸ್ಕರಿಸಿದ್ದ ನ್ಯಾಯಾಲಯ ಶಾಸಕರಿಗೆ ಸಮನ್ಸ್ ಜಾರಿ ಮಾಡಿತ್ತು.ಇದನ್ನು ಪ್ರಶ್ನಿಸಿ ಶಾಸಕ ರಾಮದಾಸ್ ಹೈಕೋರ್ಟ್ ಮೊರೆ ಹೊಕ್ಕಿದ್ದಾಗ ಹೈಕೋರ್ಟ್ ಶಾಸಕರ ಅರ್ಜಿ ವಜಾ ಮಾಡಿತ್ತು. ಇದಾದ ಅಂತರ ರಾಮದಾಸ್ ಜಾಮೀನಿಗಾಗಿ ವಿಶೇಷ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದರು. 


Stay up to date on all the latest ರಾಜ್ಯ news
Poll
lokasbha

ಸಂಸತ್ತಿನ ಕಲಾಪಗಳಿಗೆ ಅಡ್ಡಿಪಡಿಸುವ ಸಂಸದರಿಗೆ ದಂಡ ವಿಧಿಸಬೇಕೇ?


Result
ಹೌದು, ಇವರಿಂದ ಸಮಯ ವ್ಯರ್ಥ
ಬೇಡ, ಅವರು ಪ್ರತಿಭಟಿಸಬೇಕು
flipboard facebook twitter whatsapp