ದಶಕಗಳ ನಂತರ ತಾವು ವ್ಯಾಸಂಗ ಮಾಡಿದ ಶಾಲೆಗೆ ಇನ್ಫೋಸಿಸ್ ನಾರಾಯಣ ಮೂರ್ತಿ ಭೇಟಿ

ಸುಮಾರು ಆರು ದಶಕಗಳ ನಂತರ ಇನ್ ಫೋಸಿಸ್ ನಾರಾಯಣ ಮೂರ್ತಿ ಚಾವು ವ್ಯಾಸಂಗ ಮಾಡಿದ ಶಾಲೆಗೆ ಭೇಟಿ ನೀಡುತ್ತಿದ್ದಾರೆ.

Published: 09th January 2021 01:36 PM  |   Last Updated: 09th January 2021 02:35 PM   |  A+A-


NR Narayana Murthy,

ನಾರಾಯಣ ಮೂರ್ತಿ

Posted By : Shilpa D
Source : The New Indian Express

ತುಮಕೂರು: ಸುಮಾರು ಆರು ದಶಕಗಳ ನಂತರ ಇನ್ ಫೋಸಿಸ್ ನಾರಾಯಣ ಮೂರ್ತಿ ಚಾವು ವ್ಯಾಸಂಗ ಮಾಡಿದ ಶಾಲೆಗೆ ಭೇಟಿ ನೀಡುತ್ತಿದ್ದಾರೆ.  1958-59ರಲ್ಲಿ ನಾರಾಯಣ ಮೂರ್ತಿ ಅವರು 8 ಮತ್ತು 9ನೇ ತರಗತಿಗ ವ್ಯಾಸಂಗ ಮಾಡಿದ್ದರು,  ಆ ಶಾಲೆಗೆ ನಾರಾಯಣ ಮೂರ್ತಿ ಭೇಟ ನೀಡಲಿದ್ದಾರೆ

ಸರಕಾರಿ ಶಾಲೆಗಳನ್ನು ಡಿಜಿಟಲ್‌ ತರಗತಿಗಳನ್ನಾಗಿ ಪರಿವರ್ತಿಸಲು ಮುಂದಾಗಿರುವ ಸಾರ್ವಜನಿಕ ಶಿಕ್ಷಣ ಇಲಾಖೆ, ಸ್ವಯಂ ಸೇವಾ ಸಂಸ್ಥೆಗಳ ನೆರವಿನೊಂದಿಗೆ 'ದೂರ ತರಂಗ ಶಿಕ್ಷಣ' ಎಂಬ ಯೋಜನೆ ಜಾರಿಗೆ ಮುಂದಾಗಿದೆ.

ಈ ಯೋಜನೆಗೆ 'ಇನ್ಫೋಸಿಸ್‌ ಫೌಂಡೇಷನ್‌' ಮತ್ತು ಪಾವಗಡದ ಶ್ರೀರಾಮಕೃಷ್ಣ ಸೇವಾಶ್ರಮ ಸಂಸ್ಥೆಗಳು ಕೈ ಜೋಡಿಸಿದ್ದು, ಪ್ರಾಯೋಗಿಕವಾಗಿ ಮಧುಗಿರಿ ಶೈಕ್ಷಣಿಕ ಜಿಲ್ಲೆಯ 20 ಶಾಲೆಗಳಲ್ಲಿ ಜಾರಿಯಾಗಲಿವೆ. ಇದರಲ್ಲಿ ಮೂರ್ತಿ ಅವರು ವ್ಯಾಸಂಗ ಮಾಡಿದ್ದ ಶಾಲೆಯೂ ಸೇರಿದೆ,  ಮೂರ್ತಿ ಅವರ ತಂದೆ ಎನ್ ಆರ್ ರಾಮರಾಮ್ ಅವರು ಇದೇ ಶಾಲೆಯಲ್ಲಿ ಮಪ್ಕಯೋಪಾದ್ಯಾಯರಾಗಿದ್ದರು.

ಬೃಹತ್‌ ಪರದೆ ಮೇಲೆ ಪಾಠಗಳನ್ನು ವೀಕ್ಷಿಸುವುದರಿಂದ ಮಕ್ಕಳ ಆರೋಗ್ಯದ ಮೇಲೆ ಪರಿಣಾಮ ಬೀರದು. ಸಾಮೂಹಿಕ ಪಾಠಗಳನ್ನು ಕೇಳುವುದರಿಂದ ಪರಿಣಾಮಕಾರಿ ಕಲಿಕೆ ಸಾಧ್ಯ ಎಂದು ಪಾವಗಡದ ಶ್ರೀರಾಮಕೃಷ್ಣ ಸೇವಾಶ್ರಮ ಸ್ವಾಮಿ ಜಪಾನಂದಜೀ ಮಹಾರಾಜ್‌ ಅವರು ತಿಳಿಸಿದರು, 

ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳು ಮಾತ್ರವಲ್ಲ, ಎಂಟನೇ ತರಗತಿ ಮತ್ತು 9ನೇ ತರಗತಿ ವಿದ್ಯಾರ್ಥಿಗಳಿಗೆ ಡಿಜಿಟಲ್ ಬೋಧನೆಯ ಮೂಲಕ ಕಲಿಯುವ ಅವಕಾಶವೂ ದೊರಕಲಿದ್ದು, ಅವರಲ್ಲಿ 10,000 ಕ್ಕೂ ಹೆಚ್ಚು ಜನರಿಗೆ ಅನುಕೂಲವಾಗಲಿದೆ ಎಂದು ಹೇಳಿದ್ದಾರೆ.

ಸ್ಮಾರ್ಟ್‌ ಕ್ಲಾಸ್‌ಗೆ ಒದಗಿಸುವ ಸಲಕರಣೆಗಳನ್ನು ನೋಡಿಕೊಳ್ಳುವುದು ಮತ್ತು ಪರಿಣಾಮಕಾರಿ ಬಳಕೆ ಶಿಕ್ಷಣ ಇಲಾಖೆಯ ಜವಾಬ್ದಾರಿ. ನಿರ್ವಹಣೆ ಜವಾಬ್ದಾರಿಯನ್ನು ಇನ್ಫೋಸಿಸ್‌ ಫೌಂಡೇಷನ್‌ನ ಸಮರ್ಪಣಾ ತಂಡ ನಿರ್ವಹಿಸಲಿದೆ. ಈ ತರಗತಿಗಳ ಬಗ್ಗೆ ಪ್ರತಿ ತಿಂಗಳು ಶಾಲೆಗಳು ಮಾಹಿತಿ ನೀಡಬೇಕು. ಸಮರ್ಪಕವಾಗಿ ನಿರ್ವಹಣೆ ಮಾಡದ ಶಾಲೆಗಳಿಂದ ಯೋಜನೆಯನ್ನು ವಾಪಸ್‌ ಪಡೆದು ಬೇರೆ ಶಾಲೆಗಳಲ್ಲಿಅನುಷ್ಠಾನ ಮಾಡುತ್ತೇವೆ. ಮುಂದಿನ ದಿನಗಳಲ್ಲಿ ಕೇಂದ್ರ ಮತ್ತು ರಾಜ್ಯ ಸರಕಾರದ ನೆರವಿನೊಂದಿಗೆ ರಾಜ್ಯಾದ್ಯಂತ ಯೋಜನೆ ಜಾರಿಗೆ ಚಿಂತನೆ ನಡೆಸಲಾಗುವುದು,'' ಎಂದು ಸ್ವಾಮೀಜಿ ಹೇಳಿದರು.

ಕೋವಿಡ್‌-19 ಲಾಕ್‌ಡೌನ್‌ನಿಂದಾಗಿ ಶಾಲಾ, ಕಾಲೇಜುಗಳು ಮುಚ್ಚಿದ ಬಳಿಕ, ಆನ್‌ಲೈನ್‌ ತರಗತಿ, ಯೂ-ಟ್ಯೂಬ್‌ ಪಠ್ಯ, ದೂರದರ್ಶನ ಮೂಲಕ ಪಠ್ಯಗಳನ್ನು ಪ್ರಸಾರ ಮಾಡಿ ಶೈಕ್ಷಣಿಕ ಚಟುವಟಿಕೆಗಳಿಗೆ ಸರಕಾರ ಒತ್ತು ನೀಡಿತು. ಆದರೆ, ಡಿಜಿಟಲ್‌ ಸಾಧನಗಳ ಕೊರತೆಯಿಂದಾಗಿ ಎಲ್ಲ ಮಕ್ಕಳಿಗೆ ಇದು ತಲುಪಿರಲಿಲ್ಲ.
 

Stay up to date on all the latest ರಾಜ್ಯ news
Poll
Kumbh-Covid-19

ಚುನಾವಣಾ ಸಮಾವೇಶ, ಕುಂಭಮೇಳ, ಧಾರ್ಮಿಕ ಸಭೆಗಳು ದೇಶದಲ್ಲಿ ಕೋವಿಡ್-19 ಪರಿಸ್ಥಿತಿಯನ್ನು ಹದಗೆಡಿಸುತ್ತಿವೆಯೇ?


Result
ಹೌದು, ಅದು ನಿಜ.
ಇಲ್ಲ, ಖಂಡಿತ ಅಲ್ಲ.
flipboard facebook twitter whatsapp