ಬೆಂಗಳೂರು: ಲಂಚ ಪಡೆಯುತ್ತಿದ್ದ ವೇಳೆ ಆರ್'ಐ, ಪೇದೆ ಬಂಧನ
ಜಮೀನಿನ ಪೋಡಿ, ಮ್ಯುಟೇಷನ್ ಮಾಡಿಕೊಡಲು ಮತ್ತು ರಕ್ಷಣೆ ನೀಡಲು ರೂ.6 ಲಕ್ಷ ಲಂಚ ಪಡೆಯುತ್ತಿದ್ದ ಚಿಕ್ಕಜಾಲ ರಾಜಸ್ವ ನಿರೀಕ್ಷಕ (ಆರ್'ಐ) ಮತ್ತು ಚಿಕ್ಕಜಾಲ ಪೊಲೀಸ್ ಠಾಣೆಯ ಮುಖ್ಯ ಪೇದೆ ಭ್ರಷ್ಟಾಚಾರ ನಿಗ್ರಹ (ಎಸಿಬಿ) ಬಲೆಗೆ ಬಿದ್ದಿದ್ದು, ತಲೆಮರೆಸಿಕೊಂಡಿರುವ ಇನ್ಸ್ ಪೆಕ್ಟರ್ ಗಾಗಿ ಶೋಧ ನಡೆಸಲಾಗಿದೆ.
Published: 09th January 2021 08:07 AM | Last Updated: 09th January 2021 12:46 PM | A+A A-

ಸಂಗ್ರಹ ಚಿತ್ರ
ಬೆಂಗಳೂರು: ಜಮೀನಿನ ಪೋಡಿ, ಮ್ಯುಟೇಷನ್ ಮಾಡಿಕೊಡಲು ಮತ್ತು ರಕ್ಷಣೆ ನೀಡಲು ರೂ.6 ಲಕ್ಷ ಲಂಚ ಪಡೆಯುತ್ತಿದ್ದ ಚಿಕ್ಕಜಾಲ ರಾಜಸ್ವ ನಿರೀಕ್ಷಕ (ಆರ್'ಐ) ಮತ್ತು ಚಿಕ್ಕಜಾಲ ಪೊಲೀಸ್ ಠಾಣೆಯ ಮುಖ್ಯ ಪೇದೆ ಭ್ರಷ್ಟಾಚಾರ ನಿಗ್ರಹ (ಎಸಿಬಿ) ಬಲೆಗೆ ಬಿದ್ದಿದ್ದು, ತಲೆಮರೆಸಿಕೊಂಡಿರುವ ಇನ್ಸ್ ಪೆಕ್ಟರ್ ಗಾಗಿ ಶೋಧ ನಡೆಸಲಾಗಿದೆ.
ಚಿಕ್ಕಜಾಲ ನಾಡ ಕಚೇರಿಯ ರಾಜಸ್ವ ನಿರೀಕ್ಷಕ ಹೆಚ್.ಪುಟ್ಟ ಹನುಮಯ್ಯ ಅಲಿಯಾಸ್ ಪ್ರವೀಣ್, ಮುಖ್ಯ ಪೇಡೆ ರಾಜು ಎಂಬುವವರನ್ನು ಬಂಧನಕ್ಕೊಳಪಡಿಸಲಾಗಿದೆ.
ಇನ್ಸ್ ಪೆಕ್ಟರ್ ಯಶವಂತ್ ತಲೆ ಮರೆಸಿಕೊಂಡಿದ್ದು, ಅವರಿಗಾಗಿ ಶೋಧ ಕಾರ್ಯ ನಡೆಸಲಾಗುತ್ತಿದೆ ಎಂದು ಎಸಿಬಿ ಅಧಿಕಾರಿಗಳು ತಿಳಿಸಿದ್ದಾರೆ.
ಚಿಕ್ಕಜಾಲ ನಿವಾಸಿಯೊಬ್ಬರು ಬೆಂಗಳೂರು ಉತ್ತರ ತಾಲೂಕು ಜಾಲ ಹೋಬಳಿಯಲ್ಲಿ 5 ಎಕರೆ ಜಮೀನನ್ನು 2018 ರಲ್ಲಿ ಖರೀದಿಸಿ ನೋಂದಣಿ ಮಾಡಿಸಿದ್ದರು. ಜಮೀನಿನ ಹಿಂದಿನ ಮಾಲೀಕರು ಮತ್ತೊಬ್ಬ ವ್ಯಕ್ತಿಗೆ ಮಾರಾಟ ಮಾಡಲು ಅಗ್ರಿಮೆಂಟ್ ಮಾಡಿಕೊಂಡಿದ್ದು, ಈ ವಿಚಾರವಾಗಿ ನ್ಯಾಯಾಲಯದಲ್ಲಿ ಪ್ರಕರಣ ದಾಖಲಾಗಿದೆ.
ನ್ಯಾಯಾಲಯವು ದೂರುದಾರರ ಪರವಾಗಿ ತಾತ್ಕಾಲಿಕ ತಡೆಯಾಜ್ಞೆ ನೀಡಿತ್ತು. ಜಮೀನಿನ ಪೋಡಿ, ಪಾವತಿ ಖಾತೆ, ಮ್ಯುಟೇಷನ್ ಮಾಡಿಕೊಡುವಂತೆ ತಹಸೀಲ್ದಾರ್ ಕಚೇರಿಯಲ್ಲಿ ಅರ್ಜಿ ಸಲ್ಲಿಸಿದ್ದರು. ಇದಕ್ಕಾಗಿ ಆರೋಪಿ ಪುಟ್ಟ ಹನುಮಯ್ಯ ರೂ.50 ಲಕ್ಷ ಲಂಚ ಕೇಳಿದ್ದರು ಎನ್ನಲಾಗಿದೆ.