ನಾನು ಆರಾಮಾವಾಗಿದ್ದೇನೆ.. ಭಯ ಬೇಡ: ಕೋವಾಕ್ಸಿನ್ ಪ್ರಾಯೋಗಿಕ ಹಂತದಲ್ಲಿ ಲಸಿಕೆ ಪಡೆದ ವೈದ್ಯನ ಹೇಳಿಕೆ

ಲಸಿಕೆಗಾಗಿ ಪ್ರತೀಯೊಬ್ಬರೂ ಕಾಯುತ್ತಿದ್ದೆವು. ಇದೀಗ ಲಸಿಕೆ ಬಂದಿದ್ದು, ನಾನೂ ಸೇರಿದಂತೆ ನಮ್ಮ ಕುಟುಂಬದ 14 ಮಂದಿ ಭಾರತ್ ಬಯೋಟೆಕ್'ನ ಕೋವ್ಯಾಕ್ಸಿನ್ ಲಸಿಕೆಯನ್ನು ಪಡೆದುಕೊಂಡಿದ್ದು, ಎಲ್ಲರ ಆರೋಗ್ಯ ಉತ್ತಮವಾಗಿದೆ.

Published: 11th January 2021 01:53 PM  |   Last Updated: 11th January 2021 02:13 PM   |  A+A-


File photo

ಸಂಗ್ರಹ ಚಿತ್ರ

Posted By : Manjula VN
Source : The New Indian Express

ಬೆಂಗಳೂರು: ಕೊರೋನಾ ವೈರಸ್ ಸೋಂಕು ಆರಂಭವಾದಾಗ ಸಾಕಷ್ಟು ಜನರು ಭೀತಿಗೊಳಗಾಗಿದ್ದರು. ನಾನೂ ಕೂಡ ಆತಂಕದಲ್ಲಿಯೇ ಇದ್ದೆ. ಲಸಿಕೆಗಾಗಿ ಪ್ರತೀಯೊಬ್ಬರೂ ಕಾಯುತ್ತಿದ್ದೆವು. ಇದೀಗ ಲಸಿಕೆ ಬಂದಿದ್ದು, ನಾನೂ ಸೇರಿದಂತೆ ನಮ್ಮ ಕುಟುಂಬದ 14 ಮಂದಿ ಭಾರತ್ ಬಯೋಟೆಕ್'ನ ಕೋವ್ಯಾಕ್ಸಿನ್ ಲಸಿಕೆಯನ್ನು ಪಡೆದುಕೊಂಡಿದ್ದು, ಎಲ್ಲರ ಆರೋಗ್ಯ ಉತ್ತಮವಾಗಿದೆ. ಲಸಿಕೆ ಕುರಿತು ಭೀತಿಗೊಳಗಾಗುವ ಅಗತ್ಯವಿಲ್ಲ ಎಂದು ಕೋವಾಕ್ಸಿನ್ ಪ್ರಯೋಗಾತ್ಮಕ ಲಸಿಕೆ ಪಡೆದ ವೈದ್ಯರು ಹೇಳಿದ್ದಾರೆ. 

ವೈದೇಹಿ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ ಅಂಡ್ ರಿಸರ್ಚ್ ನಿರ್ದೇಶಕ ಕೆ.ಎಂ ಶ್ರೀನಿವಾಸ್ ಮೂರ್ತಿಯವರು ಕೋವಾಕ್ಸಿನ್ ಲಸಿಕೆಯನ್ನು ಪಡೆದ ವೈದ್ಯರಾಗಿದ್ದಾರೆ. 

ವೈದೇಹಿ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ ಅಂಡ್ ರಿಸರ್ಚ್'ನಲ್ಲಿ ಲಸಿಕೆ ಪಡೆದುಕೊಳ್ಳಲಾಗಿತ್ತು. ನಾನೀಗ ಆರೋಗ್ಯವಾಗಿದ್ದೇನೆ. ಲಸಿಕೆ ಪ್ರಯೋಗದಲ್ಲಿ ಭಾಗಿಯಾಗಿದ್ದಕ್ಕೆ ನನಗೆ ಬಹಳ ಸಂತಸಿದೆ. ಲಸಿಕೆ ಪಡೆದ ಬಳಿಕ ಸೈಡ್ ಎಫೆಕ್ಟ್ ಬಗ್ಗೆ ನನ್ನಲ್ಲೂ ಭಯವಿತ್ತು. ಲಸಿಕೆ ಪಡೆದ ಬಳಿಕ ಪ್ರತೀ ಸಮಯ ಭೀತಿಯಲ್ಲಿಯೇ ಇರುತ್ತೇವೆ. ಆದರೀಗ ನಾವು ಉತ್ತಮವಾಗಿ ಹಾಗೂ ಆರೋಗ್ಯವಾಗಿದ್ದೇವೆಂದು ವೈದ್ಯ ಶ್ರೀನಿವಾಸ್ ಮೂರ್ತಿಯವರು ಹೇಳಿದ್ದಾರೆ. 

ಡಿಸೆಂಬರ್ 5 ರಂದು ಆಸ್ಪತ್ರೆಗೆ ತೆರಳಿದ್ದೆವು. ಈ ವೇಳೆ ವೈದ್ಯರು ನಮ್ಮ ವಯಸ್ಸು, ದೀರ್ಘಕಾಲಿಕ ರೋಗಿಗಳ ಕುರಿತು ಮಾಹಿತಿ ಹಾಗೂ ಇತರೆ ವೈದ್ಯಕೀಯ ವರದಿಗಳನ್ನು ಪಡೆದುಕೊಂಡಿದ್ದರು. ನನಗೆ 64 ವರ್ಷ ವಯಸ್ಸಾಗಿದ್ದು, ಯಾವುದೇ ರೀತಿಯ ದೀರ್ಘಕಾಲಿಕ ರೋಗಳೂ ಇರಲಿಲ್ಲ. ಆಸ್ಪತ್ರೆಯಲ್ಲಿದ್ದ ಆರೋಗ್ಯ ಕಾರ್ಯಕರ್ತರು ನನ್ನನ್ನು ಕುಳ್ಳಿರಿಸಿ ಲಸಿಕೆ ನೀಡುತ್ತೇವೆಂದು ಹೇಳಿದರು. ಈ ವೇಳೆ ಸಾಕಷ್ಟು ಸಂತೋಷವಾಗಿತ್ತು. ನನಗೀಗ ನಾನು ಉತ್ತಮ ನಿರ್ಧಾರ ತೆಗೆದುಕೊಂಡ ಸಂತೋಷವಿದೆ ಎಂದು ಹೇಳಿದ್ದಾರೆ. 

ಲಸಿಕೆ ಪಡೆದ ಕ್ಷಣ ಅತ್ಯಂತ ಸಂತಸದ ಕ್ಷಣವಾಗಿತ್ತು. ಲಸಿಕೆ ಪಡೆದ 28 ದಿನಗಳವರೆಗೂ ಭಯವಿತ್ತು. ಆದರೀಗ ಸಂತೋಷವಾಗುತ್ತಿದೆ. ಯಾವುದೇ ಭಯವಿಲ್ಲ. ನಾವೆಲ್ಲರೂ ಸುರಕ್ಷಿತರಾಗಿದ್ದೇವೆ. ಲಸಿಕೆ ಪಡೆದ ಬಳಿಕವೂ ನಾವೆಲ್ಲರೂ ಕೊರೋನಾ ಮುಂಜಾಗ್ರತಾ ಕ್ರಮಗಳಾದ ಮಾಸ್ಕ್ ಧಾರಣೆ, ಸಾಮಾಜಿಕ ಅಂತರ ಹಾಗೂ ಶುಚಿತ್ವವನ್ನು ಕಾಪಾಡುತ್ತೇವೆಂದು ಹೇಳಿದ್ದಾರೆ. 

ಕೋವಿಶೀಲ್ಡ್ ಹಾಗೂ ಕೋವ್ಯಾಕ್ಸಿನ್ ಲಸಿಕೆ ಕುರಿತು ಆರಂಭದಲ್ಲಿ ಸಾಕಷ್ಟೂ ವದಂತಿಗಳು ಹರಡಿದ್ದವು. ಆದರೆ, ಇದೀಗ ಉತ್ತಮ ಲಸಿಕೆ ಬಂದಿದೆ. ಲಸಿಕೆ ಪಡೆಯುವಂತೆ ಇದೀಗ ನಾವು ಜನರಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡಬೇಕಿದೆ. ಸೋಂಕು ತಗಲುವುದಕ್ಕೆ ದಾರಿ ಮಾಡಿಕೊಡುವಬದಲು ಲಸಿಕೆ ಪಡೆದುಕೊಳ್ಳಲು ಜನರು ಮುಂದೆ ಬರುವಂತೆ ನಾವೆಲ್ಲರೂ ಮಾಡಬೇಕಿದೆ ಎಂದು ತಿಳಿಸಿದ್ದಾರೆ. 

Stay up to date on all the latest ರಾಜ್ಯ news
Poll
The grand Central Vista project is estimated to cost `20,000 crore

ಕೋವಿಡ್ ಬಿಕ್ಕಟ್ಟಿನ ದೃಷ್ಟಿಯಿಂದ ಪ್ರಧಾನಿ ಮೋದಿ ಸೆಂಟ್ರಲ್ ವಿಸ್ಟಾ ಯೋಜನೆಯನ್ನು ತಡೆಹಿಡಿಯಬೇಕೇ?


Result
ಹೌದು
ಬೇಡ
flipboard facebook twitter whatsapp