ಭೀಕರ ದೃಶ್ಯ: ಮೈಸೂರಿನಲ್ಲಿ ವೃದ್ಧನ ಮೈ ಮೇಲೆ ಆಟೋ ಹತ್ತಿಸಿ ಕೊಲ್ಲಲು ಯತ್ನಿಸಿದ ಚಾಲಕ, ವಿಡಿಯೋ!
ರಸ್ತೆ ಬದಿ ನಿಂತಿದ್ದ ನಿರ್ಗತಿಕ ವ್ಯಕ್ತಿಯ ಮೇಲೆ ಚಾಲಕನೊಬ್ಬ ಆಟೋ ಹತ್ತಿಸಿ ಕೊಲ್ಲಲು ಯತ್ನಿಸಿರುವ ಘಟನೆ ಮೈಸೂರಿನಲ್ಲಿ ನಡೆದಿದ್ದು ಭೀಕರ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿದೆ.
Published: 12th January 2021 04:39 PM | Last Updated: 12th January 2021 04:52 PM | A+A A-

ಸಿಸಿಟಿವಿ ದೃಶ್ಯ
ಮೈಸೂರು: ರಸ್ತೆ ಬದಿ ನಿಂತಿದ್ದ ನಿರ್ಗತಿಕ ವ್ಯಕ್ತಿಯ ಮೇಲೆ ಚಾಲಕನೊಬ್ಬ ಆಟೋ ಹತ್ತಿಸಿ ಕೊಲ್ಲಲು ಯತ್ನಿಸಿರುವ ಘಟನೆ ಮೈಸೂರಿನಲ್ಲಿ ನಡೆದಿದ್ದು ಭೀಕರ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿದೆ.
ನಗರದ ಗಾಂಧಿನಗರದ 4ನೇ ಕ್ರಾಸ್ ನಲ್ಲಿ ಈ ಅಮಾನವೀಯ ಘಟನೆ ನಡೆದಿದೆ. ರಸ್ತೆ ತಿರುವಿನಲ್ಲಿ ನಿಂತಿದ್ದ ನಿರ್ಗತಿಕನ ಮೇಲೆ ಆಟೋ ಹತ್ತಿಸಿದ ಚಾಲಕ ಮತ್ತೆ ಮುಂದೆ ಹೋಗಿ ಯೂಟರ್ನ್ ತೆಗೆದುಕೊಂಡು ಬಂದು ಮತ್ತೆ ಆತನ ಮೇಲೆ ಆಟೋ ಹತ್ತಿಸಿದ್ದಾನೆ.
ಹಿರಿಯ ಜೀವ ಆಟೋ ಮೇಲೆ ಹತ್ತಿದ್ದರಿಂದ ಗಂಭೀವಾಗಿ ಗಾಯಗೊಂಡಿದ್ದರು. ರಸ್ತೆ ಬದಿ ವಿಲವಿಲನೆ ಒದ್ದಾಡುತ್ತಿದ್ದ ವ್ಯಕ್ತಿಯನ್ನು ಸ್ಥಳೀಯರು ಕೂಡಲೇ ಕೆಆರ್ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಈ ಪ್ರಕರಣ ಸಂಬಂಧ ದೂರು ದಾಖಲಾಗಿದ್ದು ಆಟೋ ಚಾಲಕನಿಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.
A shocking CCTV footage from #Mysuru shows an auto driver trying to kill a destitute at Gandhi Nagar area in city.
— Karthik Nayaka (@Karthiknayaka) January 12, 2021
The auto driver rams the man standing on a road and takes u-turn to run the auto over him and kill. NR police have registered a case@XpressBengaluru @santwana99 pic.twitter.com/CNyDfoC034